ಲಂಡನ್ : ಬಡ ದೇಶಗಳ ಕ್ರೀಡಾಪಟುಗಳು ಶ್ರೀಮಂತ ದೇಶಗಳಿಗೆ ಟೂರ್ನಮೆಂಟ್‌ಗಳಲ್ಲಿ ಪಾಲ್ಗೊಳ್ಳಲು ಹೋದಾಗ. ಅಲ್ಲಿನ ಸೌಕರ್ಯ ಹಾಗೂ ಶ್ರೀಮಂತಿಕೆಯನ್ನು ನೋಡಿ ಅಲ್ಲಿ ಉಳಿದುಕೊಳ್ಳುವ ಉದ್ದೇಶದಿಂದ ತನ್ನ ಗುಂಪಿನಿಂದ ತಪ್ಪಿಸಿಕೊಂಡು ಅಲ್ಲೇ ಉಳಿಯುವ ಪ್ರಯತ್ನಗಳನ್ನು ಮಾಡುತ್ತಾರೆ. ಅಂತೆಯೇ, ಕಾಮನ್ವೆಲ್ತ್ ಗೇಮ್ಸ್‌ಗೆ (CWG- 2022) ತೆರಳಿದ್ದ ಪಾಕಿಸ್ತಾನದ ಇಬ್ಬರು ಬಾಕ್ಸರ್‌ಗಳು ತಪ್ಪಿಸಿಕೊಂಡಿರುವುದಾಗಿ ಬಾಕ್ಸಿಂಗ್ ಫೆಡರೇಷನ್ ಅಲ್ಲಿನ ಪಾಕಿಸ್ತಾನದ ಹೈಕಮಿಷನ್‌ಗೆ ಮಾಹಿತಿ ನೀಡಿದೆ. ಅವರು ಶ್ರೀಮಂತಿಕೆ ನೋಡಿ ಉಳಿದಿದ್ದಾರೂ ಅಥವಾ ಇನ್ಯಾವುದೋ ಕಾರಣಕ್ಕೆ ಉಳಿದಿಕೊಂಡಿದ್ದಾರೋ ಎಂಬುದು ಗೊತ್ತಾಗಿಲ್ಲ.
ಸುಲೇಮಾನ್ ಬಲೂಚ್ ಹಾಗೂ ನಜೀರುಲ್ಲಾ ಖಾನ್ ತಪ್ಪಿಸಿಕೊಂಡ ಬಾಕ್ಸರ್‌ಗಳು. ಅವರು ಎರಡು ದಿನದ ಹಿಂದೆ ಮುಕ್ತಾಯಗೊಂಡ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಪಾಲ್ಗೊಂಡಿದ್ದರು. ಅಲ್ಲಿ ಅವರು ಪಾಕಿಸ್ತಾನ ಕ್ರೀಡಾಪಟುಗಳ ನಿಯೋಗದಿಂದ ತಪ್ಪಿಸಿಕೊಂಡಿದ್ದಾರೆ.
ಪಾಕಿಸ್ತಾನದ ಬಾಕ್ಸಿಂಗ್ ಫೆಡರೇಷನ್ (ಬಿಎಫ್‌ಐ) ಈ ಕುರಿತು ಸಂದೇಶ ರವಾನೆ ಮಾಡಿದ್ದು, ತಪ್ಪಿಸಿಕೊಂಡಿರುವ ಸ್ಪರ್ಧಿಗಳ ಪಾಸ್‌ಪೋರ್ಟ್ ಹಾಗೂ ಇನ್ನೂ ಹಲವು ದಾಖಲೆಗಳು ಒಕ್ಕೂಟದ ಬಳಿ ಇವೆ ಎಂದು ಹೇಳಿದೆ.
ಪಾಕಿಸ್ತಾನದ ಬಾಕ್ಸಿಂಗ್ ಒಕ್ಕೂಟವು ಇದರ ತನಿಖೆಗೆ ಸಮಿತಿಯೊಂದನ್ನು ರಚಿಸಿದೆ. ನಾಲ್ಕು ಸದಸ್ಯರ ಸಮಿತಿ ತಪ್ಪಿಸಿಕೊಂಡವರ ಪತ್ತೆಗೆ ಪ್ರಯತ್ನ ಮಾಡಲಿದೆ. ಇಂಗ್ಲೆಂಡ್‌ನ ತನಿಖಾ ಸಂಸ್ಥೆಗಳ ಜತೆ ಈ ಸಮಿತಿ ಸಂವಹನ ಸಾಧಿಸಲಿದ ಎಂದು ಪಾಕ್ ಬಾಕ್ಸಿಂಗ್ ಒಕ್ಕೂಟ ತಿಳಿಸಿದೆ.
ಪಾಕಿಸ್ತಾನದ ಅಥ್ಲೀಟ್‌ಗಳು ಎರಡು ಬಂಗಾರದ ಪದಕ ಸೇರಿದಂತೆ ಒಟ್ಟಾರೆ ೮ ಪದಕಗಳನ್ನು ಗೆದ್ದಿದೆ.
ಪಾಕಿಸ್ತಾನದ ಬಾಕ್ಸಿರ್‌ಗಳಿಬ್ಬರು ಇಂಗ್ಲೆಂಡ್‌ನಲ್ಲಿ ತಪ್ಪಿಸಿಕೊಂಡಿರುವ ಘಟನೆ ನಡೆದ ಎರಡು ತಿಂಗಳ ಹಿಂದೆ ಅಲ್ಲಿನ ಈಜುಪಟುವೊಬ್ಬರು ಹಂಗರಿಯಲ್ಲಿ ಕಾಣೆಯಾಗಿದ್ದಾರೆ. ಫಿನಾ ವಿಶ್ವ ಚಾಂಪಿಯನ್‌ಷಿಪ್‌ಗೆ ತೆರಳಿದ್ದ ಅಕ್ಬರ್ ಎಂಬುವವರು ಸ್ಪರ್ಧೆಗೆ ಮೊದಲೇ ಪಲಾಯನಗೈದಿದ್ದರು. ಎರಡು ತಿಂಗಳ ಹುಡುಕಾಟದ ಬಳಿಕವೂ ಅವರು ಸಿಕ್ಕಿರಲಿಲ್ಲ
ಅಂತೆಯೇ ಕಾಮನ್ವೆಲ್ತ್ ಗೇಮ್ಸ್‌ಗೆ ಬಂದಿದ್ದ ಶ್ರೀಲಂಕಾದ ಇಬ್ಬರು ಅಥ್ಲೀಟ್‌ಗಳು ಹಾಗೂ ಒಬ್ಬರು ಸಹಾಯಕ ಸಿಬ್ಬಂದಿ ಬರ್ಮಿಂಗ್ಹಮ್‌ನಲ್ಲಿ ತಲೆ ಮರೆಸಿಕೊಂಡಿದ್ದರು. ಶ್ರೀಲಂಕಾದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಇರುವ ಕಾರಣ ಅವರು ಇಂಗ್ಲೆಂಡ್‌ನಲ್ಲಿಯೇ ಉಳಿಸಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ | CWG- 2022 | ಕ್ರೀಡಾ ಗ್ರಾಮದಿಂದ ಶ್ರೀಲಂಕಾದ ಅಥ್ಲೀಟ್‌ಗಳು ನಾಪತ್ತೆ