Site icon Vistara News

ಪಾಕ್​ ಹಿಂದಿಕ್ಕಿ ಮತ್ತೆ ಅಗ್ರಸ್ಥಾನಕ್ಕೇರಿದ ಭಾರತ; ನೇಪಾಳ ಎದುರು 10 ವಿಕೆಟ್​ ಜಯ

India U19 vs Nepal U19

ದುಬೈ: ಪಾಕಿಸ್ತಾನ ವಿರುದ್ಧ ಸೋಲು ಕಂಡು ಅಂಕಪಟ್ಟಿಯಲ್ಲಿ ಕುಸಿತ ಕಂಡಿದ್ದ ಭಾರತ ತಂಡ ಮತ್ತೆ ಅಗ್ರಸ್ಥಾನ ಪಡೆದುಕೊಂಡಿದೆ. ಮಂಗಳವಾರ ನಡೆದ ಎಸಿಸಿ ಅಂಡರ್​-19 ಪುರುಷರ ಏಷ್ಯಾ ಕಪ್(U19 Asia Cup) ಕ್ರಿಕೆಟ್ ಟೂರ್ನಿಯ ಲೀಗ್​ ಪಂದ್ಯದಲ್ಲಿ ಭಾರತ ತಂಡ ನೇಪಾಳ(India U19 vs Nepal U19) ವಿರುದ್ಧ 10 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದೆ.

ಪಾಕಿಸ್ತಾನ ತಂಡ ಅಫಘಾನಿಸ್ತಾನ ವಿರುದ್ಧ 303 ರನ್​ ಗಳಿಸಿ ಸವಾಲೊಡ್ಡಿದೆ. ಪಾಕ್​ ಗೆದ್ದರೆ ಮತ್ತೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆ. ಆಗ ಭಾರತ ದ್ವಿತೀಯ ಸ್ಥಾನಕ್ಕೆ ಜಾರಲಿದೆ. ಆದರೂ ಸೆಮಿಫೈನಲ್​ ಪ್ರವೇಶಕ್ಕೆ ಅಡ್ಡಿಯಾಗದು. ‘ಎ’ ವಿಭಾಗದಿಂದ ದ್ವಿತೀಯ ತಂಡವಾಗಿ ಸೆಮಿ ಟಿಕೆಟ್​ ಪಡೆಯಲಿದೆ.

ಇಲ್ಲಿನ ಐಸಿಸಿ ಅಕಾಡೆಮಿ ಕ್ರಿಕೆಟ್​ ಮೈದಾನದಲ್ಲಿ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡ ಭಾರತ ತನ್ನ ಆಯ್ಕೆಯನ್ನು ಸಮರ್ಥಿಸಿಕೊಂಡಿತು. ಘಾತಕ ಬೌಲಿಂಗ್​ ದಾಳಿ ನಡೆಸಿ ನೇಪಾಳವನ್ನು ಕೇವಲ 52 ರನ್​ಗಳಿಗೆ ಕಡೆವಿ ಹಾಕಿತು. ಈ ಮೊತ್ತವನ್ನು ಭಾರತ ಒಂದು ವಿಕೆಟ್​ ನಷ್ಟವಿಲ್ಲದೆ 7.1 ಓವರ್​ಗಳಲ್ಲಿ 57 ರನ್​ ಬಾರಿಸಿ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿತು.

ಇದನ್ನೂ ಓದಿ U19 Asia Cup: ಪಾಕಿಸ್ತಾನ​ ವಿರುದ್ಧ ಭಾರತಕ್ಕೆ 8 ವಿಕೆಟ್​ ಸೋಲು

7 ವಿಕೆಟ್​ ಕೆಡವಿದ ಲಿಂಬಾನಿ

ಭಾರತ ಪರ ರಾಜ್ ಲಿಂಬಾನಿ ಘಾತಕ ಬೌಲಿಂಗ್​ ದಾಳಿ ನಡೆಸಿ ಬರೋಬ್ಬರಿ 7 ವಿಕೆಟ್​ ಕಿತ್ತು ನೇಪಾಳ ತಂಡವನ್ನು ಹೆಡೆಮುರಿ ಕಟ್ಟಿದರು. ಅವರ ಮೊನಚಾದ ಬೌಲಿಂಗ್‌​ ದಾಳಿಯ ಮುಂದೆ ನೇಪಾಳ ಬ್ಯಾಟರ್​ಗಳು ರನ್​ಗಳಿಸಿ ಪರದಾಡಿ ಸತತವಾಗಿ ವಿಕೆಟ್​ ಕಳೆದುಕೊಂಡರು. 9.1 ಓವರ್​ ಎಸೆತದ ಅವರು ಮೂರು ಮೇಡನ್​ ಮಾಡಿ ಕೇವಲ 13 ರನ್​ ಬಿಟ್ಟುಕೊಟ್ಟು 7 ವಿಕೆಟ್​ ಉರುಳಿಸಿದರು. ಉಳಿದಂತೆ ಆರಾಧ್ಯ ಶುಕ್ಲಾ ಅವರು 31 ರನ್​ ನೀಡಿ 2 ವಿಕೆಟ್​ ಕಿತ್ತರು. ನೇಪಾಳ ಪರ ಆಡಿದ ಎಲ್ಲ ಬ್ಯಾಟರ್​ಗಳು ಒಂದಂಕಿಗೆ ಸೀಮಿತರಾದರು. ಯಾರಿಂದಲ್ಲೂ ಕೂಡ ಡಬಲ್​ ಡಿಜಿಟ್​ ರನ್​ಗಳಿಸಲು ಸಾಧ್ಯವಾಗಲಿಲ್ಲ. ​

ಚೇಸಿಂಗ್​ ನಡೆಸಿದ ಭಾರತ ಪರ ಆಂಭಿಕರಾದ ಆದರ್ಶ್​ ಸಿಂಗ್(13) ಮತ್ತು ಅರ್ಶಿನ್ ಕುಲಕರ್ಣಿ(43) ಅಜೇಯ ಆಟವಾಡುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು. ​ಕುಲಕರ್ಣಿ ಆಟ ಅತ್ಯಂತ ಬಿರುಸಿನಿಂದ ಕೂಡಿತ್ತು. ಬರೋಬ್ಬರಿ 5 ಸಿಕ್ಸರ್​ ಮತ್ತು ಒಂದು ಬೌಂಡರಿ ಸಿಡಿಸಿ ಮಿಂಚಿದರು.

ಆಡುವ ಬಳಗ

ಭಾರತ: ಅರ್ಶಿನ್ ಕುಲಕರ್ಣಿ, ಆದರ್ಶ್ ಸಿಂಗ್, ಉದಯ್ ಸಹರಾನ್ (ನಾಯಕ), ಸಚಿನ್ ಧಾಸ್, ಪ್ರಿಯಾಂಶು ಮೊಲಿಯಾ, ಮುಶೀರ್ ಖಾನ್, ಅರವೆಲ್ಲಿ ಅವನೀಶ್ (ವಿಕೆಟ್ ಕೀಪರ್​), ಸೌಮಿ ಪಾಂಡೆ, ಮುರುಗನ್ ಅಭಿಷೇಕ್, ಆರಾಧ್ಯ ಶುಕ್ಲಾ, ರಾಜ್ ಲಿಂಬಾನಿ.

ನೇಪಾಳ:ದೇವ್ ಖಾನಲ್ (ನಾಯಕ), ಅರ್ಜುನ್ ಕುಮಾಲ್, ದೀಪಕ್ ಪ್ರಸಾದ್ ಡುಮ್ರೆ, ಹೇಮಂತ್ ಧಾಮಿ, ಉತ್ತಮ್ ರಂಗು ಥಾಪಾ ಮಗರ್ (ವಿಕೆಟ್​ ಕೀಪರ್​), ದೀಪೇಶ್ ಕಾಂಡೇಲ್, ಆಕಾಶ್ ಚಂದ್, ಸುಭಾಷ್ ಭಂಡಾರಿ, ದೀಪಕ್ ಬೋಹರಾ, ಗುಲ್ಸನ್ ಝಾ, ದೀಪಕ್ ಬೊಹಾರಾ.

Exit mobile version