Site icon Vistara News

U-19 World Cup 2024: ನೇಪಾಳವನ್ನು ಮಣಿಸಿ ಸೆಮಿಫೈನಲ್​ ಪ್ರವೇಶಿಸಿದ ಭಾರತ

The Indian players get into a huddle

ಬ್ಲೋಮ್‌ಫಾಂಟೇನ್‌: 19ರ ವಯೋಮಿತಿಯ ಐಸಿಸಿ ಏಕದಿನ ವಿಶ್ವಕಪ್​ ಟೂರ್ನಿಯ(U-19 World Cup 2024) ಸೂಪರ್​ ಸಿಕ್ಸ್​(Super Six) ಹಂತದ ತನ್ನ ಎರಡನೇ ಹಾಗೂ ಅಂತಿಮ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಭಾರತ ತಂಡ ನೇಪಾಳ ವಿರುದ್ಧ ಭರ್ಜರಿ 132 ರನ್​ಗಳ ಗೆಲುವು ಸಾಧಿಸಿ ಸೆಮಿಫೈನಲ್​ಗೆ ಲಗ್ಗೆಯಿಟ್ಟಿದೆ. ಜತೆಗೆ ದಾಖಲೆಯ ಆರನೇ ಬಾರಿಗೆ ಪ್ರಶಸ್ತಿ ಗೆಲ್ಲುವ ಕನಸನ್ನು ಜೀವಂತವಿರಿಸಿದೆ.

ಬ್ಲೋಮ್‌ಫಾಂಟೇನ್​ನಲ್ಲಿ ಶುಕ್ರವಾರ ನಡೆದ ಈ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಭಾರತ ನಾಯಕ ಉದಯ್‌ ಸಹರನ್‌(100) ಮತ್ತು ಸಚಿನ್​ ದಾಸ್​(116) ಅಮೋಗ ಶತಕದಾಟದ ನೆರವಿನಿಂದ ನಿಗದಿತ 50 ಓವರ್​ಗಳಲ್ಲಿ 5 ವಿಕೆಟ್​ಗೆ 297 ರನ್​ ಬಾರಿಸಿತು. ಗುರಿ ಬೆನ್ನಟ್ಟಿದ ನೇಪಾಳ ಉತ್ತಮ ಆರಂಭ ಪಡೆದರೂ ಆ ಬಳಿಕ ನಾಟಕೀಯ ಕುಸಿತ ಕಂಡು 9 ವಿಕೆಟ್​ ನಷ್ಟಕ್ಕೆ 165 ರನ್​ ಗಳಿಸಿ ಶರಣಾಯಿತು.

ಇನಿಂಗ್ಸ್​ ಆರಂಭಿಸಿದ ಭಾರತದ ಇನಿಂಗ್ಸ್​ ಉತ್ತಮವಾಗಿರಲ್ಲ. 62 ರನ್​ಗೆ 3 ವಿಕೆಟ್​ ಕಳೆದುಕೊಂಡಿತು. ಈ ವೇಳೆ ನಾಲ್ಕನೇ ವಿಕೆಟ್​ಗೆ ಜತೆಯಾದ ನಾಯಕ ಉದಯ್‌ ಸಹರನ್‌ ಮತ್ತು ಸಚಿನ್​ ದಾಸ್ ತಾಳ್ಮೆಯುತ ಬ್ಯಾಟಿಂಗ್​ ನಡೆಸಿ ಕುಸಿದ ತಂಡಕ್ಕೆ ಆಸರೆಯಾದರು. ಉಭಯ ಆಟಗಾರರು ಕೂಡ ಶತಕ ಬಾರಿಸಿ ಸಂಭ್ರಮಿಸಿದರು. ಈ ಜೋಡಿ 4 ವಿಕೆಟ್​ಗೆ ಬರೋಬ್ಬರಿ 215 ರನ್​ಗಳ ಜತೆಯಾಟ ನಡೆಸಿತು.

107 ಎಸೆತ ಎದುರಿಸಿದ ಉದಯ್‌ ಸಹರನ್‌ 9 ಬೌಂಡರಿ ಬಾರಿಸಿ ಭರ್ತಿ 100 ರನ್​ ಗಳಿಸಿ ಔಟಾದರು. ಸಚಿನ್​ ದಾಸ್​ 11 ಬೌಂಡರಿ ಮತ್ತು 3 ಸೊಗಸಾದ ಸಿಕ್ಸರ್​ ಸಿಡಿಸಿ 116 ಬಾರಿಸಿದರು. ಭಾರತ ಪರ ಬೌಲಿಂಗ್​ನಲ್ಲಿ ಸೌಮಿ ಪಾಂಡೆ ಘಾತಕ ದಾಳಿ ನಡೆಸಿ 1 ಮೇಡನ್​ ಸಹಿತ 29 ನೀಡಿ ಪ್ರಮುಖ ನಾಲ್ಕು ವಿಕೆಟ್​ ಕಿತ್ತರು. ನೇಪಾಳ ಪರ ಗುಲ್ಸನ್ ಝಾ 3 ವಿಕೆಟ್​ ಪಡೆದರು.

ಇದನ್ನೂ ಓದಿ IND vs ENG: ಜೈಸ್ವಾಲ್​ ಸಾಧನೆಯನ್ನು ಕೊಂಡಾಡಿದ ಇರ್ಫಾನ್​ ಪಠಾಣ್

ಪ್ರತಿ ಬಣದ ಎರಡು ತಂಡಗಳು ಸೆಮಿಫೈನಲಿಗೇರಲಿವೆ. ಫೆ. 6 ಮತ್ತು 8ರಂದು ಸೆಮಿಫೈನಲ್ಸ್‌ ನಡೆಯಲಿದ್ದರೆ ಫೆ. 11ರಂದು ಫೈನಲ್‌ ಪಂದ್ಯ ಜರಗಲಿದೆ. ಭಾರತ ಗ್ರೂಪ್​ 1ರಲ್ಲಿ ಆಡಿದ ನಾಲ್ಕು ಪಂದ್ಯ ಗೆದ್ದು 8 ಅಂಕ ಪಡೆದು ಅಗ್ರಸ್ಥಾನಿಯಾಗಿ ಸೆಮಿ ಟಿಕೆಟ್​ ಪಡೆದಿದೆ. ಭಾರತ ಬದ್ಧ ಎದುರಾಳಿ ಇದೇ ಗ್ರೂಪ್​ನಲ್ಲಿ ದ್ವಿತೀಯ ಸ್ಥಾನ ಪಡೆದಿದೆ. ಪಾಕ್​ ಕೂಡ ಆಡಿದ ಮೂರು ಪಂದ್ಯಗಳಲ್ಲಿಯೂ ಗೆಲುವು ದಾಖಲಿಸಿ ಅಜೇಯವಾಗಿದೆ. ಶನಿವಾರ ನಡೆಯುವ ತನ್ನ ಕೊನೆಯ ಸೂಪರ್​ ಸಿಕ್ಸ್​ ಹಂತದ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ. ಇಲ್ಲಿ ಪಾಕ್​ ಗೆದ್ದರೆ ಭಾರತದಷ್ಟೇ 8 ಅಂಕ ಸಿಗಲಿದೆ. ಆದರೆ ರನ್​ ರೇಟ್​ ಧಾರಣೆಯಲ್ಲಿ ಮುಂದಿರುವ ಕಾರಣ ಭಾರತ ಅಗ್ರಸ್ಥಾನದಲ್ಲೇ ಉಳಿಯಲಿದೆ. ಒಂದೊಮ್ಮೆ ಪಾಕ್​ ತಂಡ ಭಾರೀ ಅಂತರದಿಂದ ಸೋತರೆ ಆಗ ಬಾಂಗ್ಲಾದೇಶ ಉತ್ತಮ ರನ್​ ರೇಟ್​ ಆಧಾರದಲ್ಲಿ ಸೆಮಿಗೇರುವ ಅವಕಾಶವಿದೆ.

Exit mobile version