Site icon Vistara News

ICC T20 World Cup 2024 : ಕ್ರಿಕೆಟ್​ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಉಗಾಂಡ ತಂಡ

Uaganda cricke team

ಬೆಂಗಳೂರು: ನಮೀಬಿಯಾದ ವಿಂಡ್​ಹೋಕ್​ನಲ್ಲಿ ಗುರುವಾರ (ನವೆಂಬರ್ 30) ನಡೆದ ಐಸಿಸಿ ಪುರುಷರ ಟಿ 20 ವಿಶ್ವಕಪ್​ಗೆ (ICC T20 World Cup 2024) ಆಫ್ರಿಕನ್ ಪ್ರಾದೇಶಿಕ ಅರ್ಹತಾ ಸುತ್ತಿನ ಅಂತಿಮ ಸುತ್ತಿನ ಪಂದ್ಯದಲ್ಲಿ ರವಾಂಡಾವನ್ನು ಒಂಬತ್ತು ವಿಕೆಟ್​ಗಳಿಂದ ಸೋಲಿಸಿದ ಉಗಾಂಡ ತಂಡ ಐಸಿಸಿ ಪುರುಷರ ಟಿ 20 ವಿಶ್ವಕಪ್ 2024 ಗೆ ಅರ್ಹತೆಯನ್ನು ಗಳಿಸಿದೆ. ಈ ಮೂಲಕ ತಂಡವು ಮೊಟ್ಟ ಮೊದಲ ಬಾರಿಗೆ ಐಸಿಸಿ ವಿಶ್ವ ಕಪ್​ಗೆ ಅರ್ಹತೆ ಪಡೆದ ದಾಖಲೆ ಮಾಡಿತು. ವಿಶೇಷವೆಂದರೆ, ಬ್ರಿಯಾನ್ ಮಸಾಬಾ ನೇತೃತ್ವದ ಉಗಾಂಡ ತಂಡ ತನ್ನ ಮೂರನೇ ಪಂದ್ಯದಲ್ಲಿ ಜಿಂಬಾಬ್ವೆಯನ್ನು ಐದು ವಿಕೆಟ್​ಗಳಿಂದ ಸೋಲಿಸಿತ್ತು.

ಈ ಗೆಲುವಿನೊಂದಿಗೆ ಉಗಾಂಡಾ ಏಳು ತಂಡಗಳ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದು ನಮೀಬಿಯಾದೊಂದಿಗೆ ಮೆಗಾ ಈವೆಂಟ್​ಗೆ ಅರ್ಹತೆ ಪಡೆಯಿತು. ಹಿರಿಯ ಅಂತಾರಾಷ್ಟ್ರೀಯ ಪುರುಷರ ಐಸಿಸಿ ಪಂದ್ಯಾವಳಿಯಲ್ಲಿ ಎಂದಿಗೂ ಭಾಗವಹಿಸದ ಉಗಾಂಡಾಕ್ಕೆ ಇದು ಶ್ರೇಷ್ಠ ಪ್ರದರ್ಶನ ಎನಿಸಿಕೊಳ್ಳಲಿದೆ.

ವಿಶ್ವ ಕಪ್​ಗೆ 20 ತಂಡಗಳ ಆಯ್ಕೆ

ಉಗಾಂಡಾದ ಸೇರ್ಪಡೆಯ ನಂತರ 2024 ರ ಟಿ20 ವಿಶ್ವಕಪ್​​ನಲ್ಲಿ ಭಾಗವಹಿಸುವ ಎಲ್ಲಾ 20 ರಾಷ್ಟ್ರಗಳು ಅಂತಿಮಗೊಂಡಿವೆ . ಆಸ್ಟ್ರೇಲಿಯಾ, ಭಾರತ, ಪಾಕಿಸ್ತಾನ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ನೆದರ್ಲ್ಯಾಂಡ್ಸ್, ಶ್ರೀಲಂಕಾ ಮತ್ತು ನ್ಯೂಜಿಲೆಂಡ್ 2022ರ ಆಸ್ಟ್ರೇಲಿಯಾದಲ್ಲಿ ನಡೆದ ಹಿಂದಿನ ಆವೃತ್ತಿಯ ಅಗ್ರ ಎಂಟು ತಂಡಗಳಾಗಿದ್ದವು. ಜತೆಗೆ ವೆಸ್ಟ್ ಇಂಡೀಸ್ ಮತ್ತು ಯುಎಸ್ಎ ಟಿ20 ಆತಿಥ್ಯದ ಮೂಲಕ ನೇರ ಅರ್ಹತೆಯನ್ನು ಗಳಿಸಿವೆ. ಇದಲ್ಲದೆ, ಮುಂದಿನ ಅತ್ಯುತ್ತಮ ಶ್ರೇಯಾಂಕದ ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ಕೂಡ ನೇರವಾಗಿ ಅರ್ಹತೆ ಪಡೆದಿವೆ.‘

ಉಳಿದ ಎಂಟು ತಂಡಗಳನ್ನು ಏಷ್ಯಾ, ಆಫ್ರಿಕಾ, ಅಮೆರಿಕ, ಪೂರ್ವ ಏಷ್ಯಾ ಪೆಸಿಫಿಕ್ ಮತ್ತು ಯುರೋಪ್​ನಲ್ಇಲ ಪ್ರಾದೇಶಿಕ ಅರ್ಹತಾ ಸ್ಪರ್ಧೆಗಳ ಮೂಲಕ ನಿರ್ಧರಿಸಲಾಯಿತು, ಅಲ್ಲಿ ಐರ್ಲೆಂಡ್, ಸ್ಕಾಟ್ಲೆಂಡ್, ನಮೀಬಿಯಾ, ಉಗಾಂಡಾ, ನೇಪಾಳ, ಒಮಾನ್, ಪಿಎನ್​​ಜಿ ಮತ್ತು ಕೆನಡಾ ತಮ್ಮ ಸ್ಥಾನಗಳನ್ನು ಭದ್ರಪಡಿಸಿಕೊಂಡವು.

ಇದನ್ನೂ ಓದಿ : Ind vs Sa : ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಕೊಹ್ಲಿ, ರೋಹಿತ್ ಅಲಭ್ಯತೆಗೆ ಕಾರಣ ತಿಳಿಸಿದ ಬಿಸಿಸಿಐ

ಟಿ 20 ವಿಶ್ವಕಪ್ ಜೂನ್ 3 ರಿಂದ ಪ್ರಾರಂಭವಾಗುವ ಸಾಧ್ಯತೆಯಿದೆ. ಅಲ್ಲಿ ಭಾಗವಹಿಸುವ 20 ತಂಡಗಳನ್ನು ತಲಾ ನಾಲ್ಕು ತಂಡಗಳ ಐದು ಗುಂಪುಗಳಾಗಿ ವಿಂಗಡಿಸಲಾಗುವುದು. ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಸೂಪರ್ 8 ಹಂತಕ್ಕೆ ಪ್ರವೇಶಿಸುತ್ತವೆ. ಅಲ್ಲಿ ಅವರನ್ನು ಮತ್ತೆ ನಾಲ್ಕು ತಂಡಗಳ ಎರಡು ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಸೂಪರ್ 8 ರ ಎರಡು ಗುಂಪುಗಳಿಂದ ಅಗ್ರ ಎರಡು ತಂಡಗಳು ಸೆಮಿಫೈನಲ್​​ಗೆ ಅರ್ಹತೆ ಪಡೆಯುತ್ತವೆ. ಸೆಮಿಫೈನಲ್ಸ್​ ವಿಜೇತರು ಫೈನಕ್​​ಬ ಮುಖಾಮುಖಿಯಾಗುತ್ತಾರೆ.

Exit mobile version