Site icon Vistara News

Paris Olympics 2024 : ನಮ್ಮ ರಾಜಕಾರಣಿಗಳು ಕ್ರೀಡಾಕ್ಷೇತ್ರದಲ್ಲೂ ರಾಜಕೀಯ ಮಾಡ್ತಾರೆ; ಉಕ್ರೇನ್​ ಸಂಸದ ದೇಶಕ್ಕಾಗಿ ಪದಕಗಳನ್ನು ಗೆದ್ದಿದ್ದಾರೆ!

Paris Olympics 2024

ಬೆಂಗಳೂರು : ಭಾರತದಲ್ಲಿ ಕ್ರೀಡಾಕ್ಷೇತ್ರದಲ್ಲಿ ರಾಜಕಾರಣಿಗಳ ಹಸ್ತಕ್ಷೇಪ ಜೋರಾಗಿದೆ. ಪ್ರತಿಭೆಗಳಿಗಿಂತ ಪ್ರಭಾವಿಗಳೇ ಹೆಚ್ಚು ಮೆರೆಯುತ್ತಾರೆ. ಕ್ರೀಡಾ ಸಂಸ್ಥೆಗಳಲ್ಲಿ ಕುಳಿತಿರುವವರಲ್ಲಿ ಬಹುತೇಕರು ರಾಜಕೀಯ ಪಕ್ಷಗಳ ಕೃಪಕಟಾಕ್ಷವನ್ನು ಹೊಂದಿರುವವರು ಅಥವಾ ನೇರ ಸಂಬಂಧ ಹೊಂದಿರುವವರು. ಅವರು ಆಗಬಾರದು ಎಂಬ ನಿಯಮವೇನೂ ಇಲ್ಲ. ಆದರೆ, ಅವರ ರಾಜಕೀಯ ಮನಸ್ಥಿತಿಯನ್ನು ಕ್ರೀಡಾಕ್ಷೇತ್ರದಲ್ಲಿ ತೋರಿಸುವ ಕಾರಣ ಜಾಗತಿಕವಾಗಿ ಕ್ರೀಡೆಯಲ್ಲಿ ಭಾರತ ಹಿಂದುಳಿಯುತ್ತಿದೆ ಎಂಬ ವಾದವಿದೆ. ಆದರೆ, ಕೆಲವು ಪಾಶ್ಚಿಮಾತ್ಯ ದೇಶಗಳು ಅಥವಾ ನೈಜ ಕ್ರೀಡಾ ಪ್ರೋತ್ಸಾಹಕ ದೇಶಗಳು ಇಂಥದ್ದಕ್ಕೆಲ್ಲ ಅವಕಾಶ ಕೊಡುವುದಿಲ್ಲ. ಇನ್ನೂ ಹೆಚ್ಚೆಂದರೆ ಕೆಲವು ದೇಶಗಳಲ್ಲಿ ರಾಜಕಾರಣ ಮಾಡುತ್ತಿರುವ ಮಂದಿಯೇ ಅಂತಾರಾಷ್ಟ್ರೀಯ ಕ್ರೀಡಾಪಟುಗಳು. ಅವರೇ ಒಲಿಂಪಿಕ್ಸ್​ನಲ್ಲಿ ಪದಕ (Paris Olympics 2024) ಗೆಲ್ಲುತ್ತಾರೆ. ಅದಕ್ಕೊಂದು ಸೂಕ್ತ ಉದಾಹರಣೆ ಇಲ್ಲಿದೆ.

ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಕಂಚಿನ ಪದಕ ಗೆದ್ದ ನಂತರ ಉಕ್ರೇನಿಯನ್ ಕುಸ್ತಿಪಟು ಝಾನ್ ಬೆಲೆನಿಕ್ ಅವರು ಅಲ್ಲಿನ ಸಂಸದರು. ಅಂದ ಹಾಗೆ ಅವರು ಇದೇ ಮೊದಲ ಬಾರಿಗೆ ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸುತ್ತಿರುವುದಲ್ಲ. ಟೋಕಿಯೊ ಒಲಿಂಪಿಕ್ಸ್ 2021 ಮತ್ತು ರಿಯೋ ಒಲಿಂಪಿಕ್ಸ್ 2016 ರಲ್ಲಿ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ವಿಜೇತ ಗೆದ್ದವರು. ಅಂದ ಹಾಗೆ ಅವರೀಗ ಮೂರನೇ ಪದಕ ಗೆದ್ದು ನಿವೃತ್ತಿ ಹೇಳಿದ್ದಾರೆ. ಇನ್ನು ಮುಂದೆ ತಮ್ಮ ರಾಜಕೀಯ ವೃತ್ತಿಜೀವನದ ಮೇಲೆ ಹೆಚ್ಚು ಗಮನ ಹರಿಸುವೆ ಎಂದಿದ್ದಾರೆ.

ಪುರುಷರ 85 ಕೆಜಿ ಗ್ರೀಕೋ-ರೋಮನ್ ಸ್ಪರ್ಧೆಯಲ್ಲಿ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ 33 ವರ್ಷದ ಬೆಲೆನಿಕ್​ ಸೈನಾ ಪೋಲೆಂಡ್​ನ ಅರ್ಕಾಡಿಯಸ್ಜ್ ಕುಲಿನಿಜ್ ಅವರನ್ನು 3-1 ಅಂತರದಿಂದ ಸೋಲಿಸಿದ್ದಾರೆ. ಅಂದ ಹಾಗೆ ಬೆಲೆನಿಕ್ 2019 ರಲ್ಲಿ ಉಕ್ರೇನಿಯನ್ ಸಂಸತ್​ ಸದಸ್ಯರಾದರು. ಅಂದ ಹಾಗೆ ಅಲ್ಲಿನ ಸಂಸತ್​ನ ಮೊದಲ ಕಪ್ಪು ವರ್ಣದ ಸದಸ್ಯ.

ಇದನ್ನೂ ಓದಿ: Claudia Mancinelli : ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಕಂಡ ಈ ಸುಂದರಿ ಜಿಮ್ನಾಸ್ಟಿಕ್​ ಕೋಚ್​​ ಈಗ ಇಂಟರ್ನೆಟ್​ ಸೆನ್ಷೇಷನ್​

ಪ್ಯಾರಿಸ್ 2024 ನಲ್ಲಿ ಕಂಚಿನ ಪದಕ ಗೆದ್ದ ನಂತರ, ಬೆಲೆನುಯಿಕ್ ರಷ್ಯಾದೊಂದಿಗಿನ ಯುದ್ಧದ ಕಾರಣ ಉಕ್ರೇನ್ ಭವಿಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. “ಇಂದು, ನಾನು ಪದಕವನ್ನು ತೆಗೆದುಕೊಳ್ಳಲು ಸಾಧ್ಯವಾಯಿತು ಎಂದು ನನಗೆ ತುಂಬಾ ಸಂತೋಷವಾಗಿದೆ. ಆದರೆ ನನಗೆ, ಉಕ್ರೇನಿಯನ್ ಪ್ರಜೆಯಾಗಿ ಉಕ್ರೇನಿಯನ್ ಕ್ರೀಡಾಪಟುವಾಗಿ, ಭವಿಷ್ಯದಲ್ಲಿ ಉಕ್ರೇನ್ ಇರುವುದು ಬಹಳ ಮುಖ್ಯ. ಏಕೆಂದರೆ ದುರದೃಷ್ಟವಶಾತ್ ನಮ್ಮ ಭವಿಷ್ಯದ ಬಗ್ಗೆ ನಮಗೆ ತಿಳಿದಿಲ್ಲ” ಎಂದು ಬೆಲೆನುಯಿಕ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕುಸ್ತಿ ಸುಂದರವಾದ ವೃತ್ತಿಜೀವನವಾಗಿತ್ತು, ಮತ್ತು ಪ್ರತಿಯೊಬ್ಬರೂ ತಮ್ಮ ವೃತ್ತಿಜೀವನದ ಭವ್ಯವಾದ ಅಂತ್ಯವನ್ನು ಹೊಂದಬೇಕೆಂದು ನಾನು ಬಯಸುತ್ತೇನೆ. ಅದಕ್ಕಾಗಿಯೇ ಈ ಪದಕ ನನಗೆ ತುಂಬಾ ಅಮೂಲ್ಯವಾಗಿದೆ. ನಾನು ಅದನ್ನು ನನ್ನ ದೇಶದ ಪ್ರಜೆಗಳೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಈಗ ಯುದ್ಧದಲ್ಲಿರುವ ಸೈನಿಕರಿಗೆ ನಾನು ಅದನ್ನು ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.

ಝಾನ್ ಬೆಲೆನಿಕ್ ಯಾರು?

ಮೂರು ಬಾರಿ ಒಲಿಂಪಿಕ್ ಪದಕ ವಿಜೇತರಾದ ಬೆಲೆನುಯಿಕ್ 1991ರಲ್ಲಿ ಕಿಯೇವ್​​ನ್ಲಿ ರುವಾಂಡಾದ ತಂದೆ ಮತ್ತು ಉಕ್ರೇನಿಯನ್ ತಾಯಿಗೆ ಜನಿಸಿದರು. ಅವರು ಒಂಬತ್ತು ವರ್ಷದವರಿದ್ದಾಗ 2000ರಲ್ಲಿ ಕುಸ್ತಿ ಕ್ಷೇತ್ರಕ್ಕೆ ಪ್ರವೇಶಿಸಿದ್ದರು. 2019 ರಲ್ಲಿ, ಉಕ್ರೇನಿಯನ್ ಸಂಸದೀಯ ಚುನಾವಣೆಯ ಸಮಯದಲ್ಲಿ, ಬೆಲೆನುಯಿಕ್ ಸರ್ವೆಂಟ್ ಆಫ್ ದಿ ಪೀಪಲ್ ರಾಜಕೀಯ ಪಕ್ಷದ ಸದಸ್ಯರಾಗಿ ಆಯ್ಕೆಯಾದರು.

ತನ್ನ ಕುಸ್ತಿ ವೃತ್ತಿಜೀವನದ ಹೊರತಾಗಿ, ಬೆಲೆನುಯಿಕ್ ಉಕ್ರೇನ್ ರಾಷ್ಟ್ರೀಯ ಒಲಿಂಪಿಕ್ ಸಮಿತಿಯಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ಹೊಸ ಅಧ್ಯಕ್ಷ ವಡಿಮ್ ಗುಟ್ಜೆಟ್ ಅವರೊಂದಿಗಿನ ವಿವಾದದ ಹಿನ್ನೆಲೆಯಲ್ಲಿ 2023 ರಲ್ಲಿ ಹುದ್ದೆಗೆ ರಾಜೀನಾಮೆ ನೀಡಿದರು. ಬೆಲೆನುಯಿಕ್ ಎರಡು ಬಾರಿ ವಿಶ್ವ ಕುಸ್ತಿ ಚಾಂಪಿಯನ್ ಆಗಿದ್ದು, ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಒಂದು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳನ್ನು ಗೆದ್ದಿದ್ದಾರೆ.

Exit mobile version