ಬೆಂಗಳೂರು: ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 1 ರನ್ಗಳ ಸೋಲಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಪ್ಲೇ ಆಫ್ ತಲುಪುವ ಆಸೆ ಭಗ್ನಗೊಂಡಿದೆ. ಎಂಟು ಪಂದ್ಯಗಳಲ್ಲಿ ಏಳನೇ ಸೋಲಿನೊಂದಿಗೆ ಉಳಿದ ಎಲ್ಲಾ ಪಂದ್ಯಗಳನ್ನು ಗೆದ್ದರೂ ಆರ್ಸಿಬಿ ಪ್ಲೇಆಫ್ ಸ್ಥಾನ ಪಡೆಯುವುದಿಲ್ಲ. ಆದರೆ, ಆರ್ಸಿಬಿ ಸೋಲಿಗೆ ಅಂಪೈರ್ಗಳೇ ಕಾರಣ ಎಂಬ ಆರೋಪಗಳು ಕೇಳಿ ಬಂದಿವೆ. ಆರ್ಸಿಬಿ ಬ್ಯಾಟರ್ಗಳು ಹೊಡೆದ ಸಿಕ್ಸರ್ಗೆ ಫೋರ್ ಕೊಡುವ ಮೂಲಕ ಒಂದು ರನ್ನಿಂದ ಸೋಲುವಂತೆ ಮಾಡಿದೆ. ಇಲ್ಲದೇ ಹೋಗಿದ್ದರೆ ಗೆಲುವು ಸಿಗುತ್ತಿತ್ತು.
It was a clear six but the shameless & biased umpiring against RCB took it away match from us .#RCBvsKKR pic.twitter.com/XlzDRPy09c
— Ayush (@vkkings007) April 21, 2024
223 ರನ್ಗಳ ಗುರಿ ಬೆನ್ನತ್ತಿದ ಆರ್ಸಿಬಿ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ರಜತ್ ಪಾಟಿದಾರ್ (52) ಮತ್ತು ವಿಲ್ ಜಾಕ್ಸ್ (55) ತಂಡವನ್ನು 100 ರನ್ಗೂ ಅಧಿಕ ಜೊತೆಯಾಟದೊಂದಿಗೆ ಗೆಲುವಿನ ವಿಶ್ವಾಸ ಮೂಡಿತ್ತು. ಆ ಬಳಿಕ ಉಂಟಾದ ಭಾರಿ ಕುಸಿತದಿಂದಾಗಿ 137 ರನ್ಗಳಿಂದ 2 ವಿಕೆಟ್ ಕಳೆದುಕೊಡಿದ್ದ ಆರ್ಸಿಬಿ 155 ರನ್ಗೆ 6 ವಿಕೆಟ್ ನಷ್ಟ ಮಾಡಿಕೊಡಿತು.
ಅಂತಿಮ ಒವರ್ನಲ್ಲಿ 21 ರನ್ಗಳ ಅವಶ್ಯಕತೆಯಿತ್ತು. ಮಿಚೆಲ್ ಸ್ಟಾರ್ಕ್ ಅವರನ್ನು ಎದುರಿಸಲು ಕರಣ್ ಶರ್ಮಾ ಮತ್ತು ಮೊಹಮ್ಮದ್ ಸಿರಾಜ್ ಕ್ರೀಸ್ನಲ್ಲಿದ್ದರು. ಸ್ಟಾರ್ಕ್ ಅವರ ಮೊದಲ ನಾಲ್ಕು ಎಸೆತಗಳಲ್ಲಿ ಸತತ ಮೂರು ಸಿಕ್ಸರ್ಗಳನ್ನು ಬಿಟ್ಟುಕೊಟ್ಟರು. ಆದರೆ, ಶರ್ಮಾ ಐದನೇ ಎಸೆತದಲ್ಲಿ ಔಟಾದರು. ಕೊನೇ ಎಸೆತದಲ್ಲಿ ಲಾಕಿ ಫರ್ಗ್ಯೂಸನ್ ಔಟಾದರು.
ವಿಡಿಯ ವೈರಲ್
ಅಂಪೈರಿಂಗ್ ದೋಷದಿಂದಾಗಿ ಆರ್ಸಿಬಿ ಪಂದ್ಯ ಕಳೆದುಕೊಂಡಿದೆ ಎಂದು ತೋರಿಸುವ ವೀಡಿಯೊ ಒಂದು ವೈರಲ್ ಆಗಿದೆ. 17ನೇ ಓವರ್ನಲ್ಲಿ ಆರ್ಸಿಬಿ ಬ್ಯಾಟರ್ ಸುಯಾಶ್ ಪ್ರಭುದೇಸಾಯಿ ವರುಣ್ ಚಕ್ರವರ್ತಿ ಎಸೆತವನ್ನು ಸಿಕ್ಸರ್ಗೆ ದಾಟಿಸಿದ್ದರು. ಆದಾಗ್ಯೂ, ಆನ್-ಫೀಲ್ಡ್ ಅಂಪೈರ್ಗಳ ಜತೆ ಪರಿಶೀಲನೆ ನಡೆಸದೇ ಬೌಂಡರಿ ಎಂದು ಸಿಗ್ನಲ್ ಕೊಟ್ಟರು. ಆರ್ಸಿಬಿಗೆ ಎರಡು ರನ್ಗಳನ್ಉ ನಿರಾಕರಿಸಿದರು. ಕೋಪಗೊಂಡಿರುವ ಆರ್ಸಿಬಿ ಅಭಿಮಾನಿಗಳು ಈ ತಪ್ಪು ನಿರ್ಧಾರ ಆರ್ಸಿಬಿಯ ಸೋಲಿಗೆ ಕಾರಣ ಎಂದಿದ್ದಾರೆ. ಅದು ಸಿಕ್ಸರ್ ಎಂದು ಘೋಷಿಸಿದ್ದರೆ ಆರ್ಸಿಬಿಗೆ ಎರಡು ರನ್ ಕೊರತೆ ಬೀಳುತ್ತಿರಲಿಲ್ಲ.
ಇದಕ್ಕೂ ಮುನ್ನ ವಿರಾಟ್ ಕೊಹ್ಲಿ ಔಟಾಗಿರುವುದೂ ವಿವಾದಕ್ಕೆ ಕಾರಣವಾಗಿತ್ತು. ಕೊಹ್ಲಿ ಫುಲ್ ಟಾಸ್ ಎಸೆತಕ್ಕೆ ಹೊಡೆಯಲು ಮುಂದಾಗಿದ್ದರು. ಬೌಲರ್ ಹರ್ಷಿತ್ ರಾಣಾ ರಿಟರ್ನ್ ಕ್ಯಾಚ್ ಪಡೆದಿದ್ದರು. ಸೊಂಟದ ಎತ್ತರಕ್ಕಿಂತ ಮೇಲಿದೆ ಎಂದು ನಂಬಿದ ಕೊಹ್ಲಿ ಡಿಆರ್ಎಸ್ ತೆಗೆದುಕೊಂಡರು. ಆದಾಗ್ಯೂ, ಕೊಹ್ಲಿ ಕ್ರೀಸ್ನಿಂದ ಹೊರಕ್ಕೆ ಬಂದಿದ್ದ ಕಾಣ ಮೂರನೇ ಅಂಪೈರ್ ಆನ್ಫೀಲ್ಡ್ ಅಂಪೈರ್ಗಳ ನಿರ್ಧಾರವನ್ನು ಸರಿ ಎಂದರು. ಇದು ಕೊಹ್ಲಿಗೆ ಕೋಪವನ್ನುಂಟು ಮಾಡಿತು. ಅಲ್ಲದೇ ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶಕ್ಕೆ ಕಾರಣವಾಯಿತು.
ಫಿಲ್ ಸಾಲ್ಟ್ (48 ರನ್) ಮತ್ತು ಶ್ರೇಯಸ್ ಅಯ್ಯರ್ (50 ರನ್) ಅವರ ಅರ್ಧಶತಕದ ನೆರವಿನಿಂದ ಕೆಕೆಆರ್ 20 ಓವರ್ಳಗಲ್ಲಿ 6 ವಿಕೆಟ್ ನಷ್ಟಕ್ಕೆ 222 ರನ್ ಗಳಿಸಿತು. ಇದು ಕೆಕೆಆರ್ ಆಡಿರುವ 7 ಪಂದ್ಯಗಳಲ್ಲಿ 5ನೇ ಗೆಲುವಾಗಿದ್ದು, 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ.