ಬೆಂಗಳೂರು: ಐಪಿಎಲ್ 17ನೇ(IPL 2024) ಆವೃತ್ತಿಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಮಾರ್ಚ್ 22ರಂದು ನಡೆಯುವ ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್(CSK vs RCB) ಮತ್ತು ಆರ್ಸಿಬಿ ಮುಖಾಮುಖಿಯಾಗಿದೆ. ಈ ಪಂದ್ಯ ಚೆನ್ನೈಯ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದೆ. ಇದಕ್ಕೂ ಮುನ್ನ ಆರ್ಸಿಬಿ ಅಭಮಾನಿಗಳಿಗಾಗಿ ಮಾರ್ಚ್ 19ರಂದು ‘ಆರ್ಸಿಬಿ ಅನ್ಬಾಕ್ಸ್'(RCB Unbox) ಎಂಬ ಕಾರ್ಯಕ್ರಮ ನಡೆಸಲಿದೆ. ಈ ಸಮಾರಂಭದ ಪ್ರೋಮೊವೊಂದು ಬಿಡುಗಡೆಯಾಗಿದ್ದು, ಕಂಬಳದ ಕೋಣಗಳೊಂದಿಗೆ ನಟ ರಿಷಬ್ ಶೆಟ್ಟಿ(Rishab Shetty) ಕಾಣಿಸಿಕೊಂಡಿದ್ದಾರೆ. ಇದೇ ವೇಳೆ ಅವರು ಹೇಳಿದ ಡೈಲಾಗ್ ಒಂದು ಆರ್ಸಿಬಿಯ ಹೆಸರು ಬದಲಾವಣೆಯಾಗುವ ಸುಳಿವೊಂದನ್ನು ನೀಡಿದಂತಿದೆ.
ಆರ್ಸಿಬಿ ತನ್ನ ಅಭಿಯಾನ ಆರಂಭಿಸುವ ಮುನ್ನ ಪೂರ್ವಭಾವಿಯಾಗಿ ಅಭಿಮಾನಿಗಳಿಗಾಗಿ ಈ ಸಲವೂ ವಿಶೇಷ ಕಾರ್ಯಕ್ರಮವೊಂದನ್ನು ಏರ್ಪಡಿಸಿದ್ದು ಈಗಾಗಲೇ ಎಲ್ಲರಿಗೂ ತಿಳಿದಿದೆ. ಕಳೆದೆರಡು ವರ್ಷಗಳಿಂದ ಆರ್ಸಿಬಿ ಅನ್ಬಾಕ್ಸ್(RCB’s Unbox Event) ಹೆಸರಿನಲ್ಲಿ ನಡೆಯುತ್ತ ಬಂದಿರುವ ಕಾರ್ಯಕ್ರಮ ಈ ಬಾರಿ ಮಾರ್ಚ್ 19ರಂದು ನಿಗದಿಯಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ರಿಷಬ್ ಶೆಟ್ಟಿ ಎನ್ ಹೇಳ್ತಿದ್ದಾರೆ ಅರ್ಥ ಆಯ್ತಾ?
— Royal Challengers Bangalore (@RCBTweets) March 13, 2024
Understood what Rishabh Shetty is trying to say?
You’ll find out at RCB Unbox. Buy your tickets now. 🎟️@shetty_rishab #RCBUnbox #PlayBold #ArthaAytha #ನಮ್ಮRCB pic.twitter.com/sSrbf5HFmd
ಆರ್ಸಿಬಿ ಅನ್ಬಾಕ್ಸ್ನಲ್ಲಿ ತಂಡದ ಹೊಸ ಜೆರ್ಸಿಯನ್ನೂ ಅನಾವರಣಗೊಳಿಸಲಾಗುವುದು. ಜತೆಗೆ ಅಭಿಮಾನಿಗಳ ಎದುರು ಹಲವು ಅಚ್ಚರಿಯ ಮತ್ತು ವಿಶೇಷ ಘೋಷಣೆಗಳನ್ನು ಮಾಡಲಾಗುವುದು ಎಂದು ಆರ್ಸಿಬಿ ತಂಡ ಈಗಾಗಲೇ ತಿಳಿಸಿದೆ. ಈ ಬಾರಿಯ ಅಚ್ಚರಿ ಏನೆಂಬುದನ್ನು ಆರ್ಸಿಬಿ ಅಭಿಮಾನಿಗಳು ಕಾದು ಕುಳಿತಿದ್ದರು. ಇದರ ಬೆನ್ನಲೇ ಆರ್ಸಿಬಿ ಬಿಡುಗಡೆ ಮಾಡಿದ ಪೋಮೊವೊಂದು ಇದೀಗ ಅಭಿಮಾನಿಗಳಲ್ಲಿ ಇನಷ್ಟು ಕುತೂಹಲ ಮೂಡಿಸುವಂತೆ ಮಾಡಿದೆ.
ಇದನ್ನೂ ಓದಿ IPL 2024: ಪ್ರತಿ ಸೀಸನ್ನ ಐಪಿಎಲ್ನಲ್ಲಿ ಅತಿ ಹೆಚ್ಚು ಹಣ ಪಡೆದ ಆಟಗಾರರು
ಹೆಸರು ಬದಲಾವಣೆ?
ಕಾಂತಾರ ಸಿನೆಮಾ ಖ್ಯಾತಿಯ ನಟ ರಿಷಬ್ ಶೆಟ್ಟಿ ಅವರು ಈ ಪ್ರೋಮೊದಲ್ಲಿ ಕಾಣಿಸಿಕೊಂಡಿದ್ದಾರೆ. ಮೂರು ಕಂಬಳದ ಕೋಣಗಳ ಮೇಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ಬರೆದಿರುತ್ತದೆ. ಈ ವೇಳೆ ರಿಷಬ್ ಶೆಟ್ಟಿ ಬ್ಯಾಂಗಳೂರು ಹೆಸರಿನ ಕೋಣವನ್ನು ಇದು ಬೇಡ ಭಟ್ರೆ.. ತೆಗೆದುಕೊಂಡು ಹೋಗಿ ಎಂದು ಹೇಳಿ ಅರ್ಥ ಆಯ್ತಾ ಎಂದು ಹೇಳುತ್ತಾರೆ. ಆರ್ಸಿಬಿ ಕೂಡ ಈ ವಿಡಿಯೊಗೆ ‘ರಿಷಬ್ ಶೆಟ್ಟಿ ಎನ್ ಹೇಳ್ತಿದ್ದಾರೆ ಅರ್ಥ ಆಯ್ತಾ?’ ಎಂದು ಕ್ಯಾಪ್ಷನ್ ನೀಡಿದೆ. ಇದನ್ನು ಗಮನಿಸುವಾಗ ಈ ಬಾರಿ ಬ್ಯಾಂಗಳೂರು ಬದಲು ಬೆಂಗಳೂರು ಎಂದು ಹೆಸರು ಬದಲಿಸಲು ಫ್ರಾಂಚೈಸಿ ಮುಂದಾಗಿದೆ ಎನ್ನುವುದು ಸ್ಪಷ್ಟವಾಗಿ ತಿಳಿದುಬಂದಿದೆ. ಅಭಿಮಾನಿಗಳ ಬಹು ದಿನದ ಆಗ್ರಹವೂ ಕೂಡ ಇದಾಗಿತ್ತು. ಏನೇ ಬದಲಾವಣೆ ಇದ್ದರೂ ಕೂಡ ಮಾರ್ಚ್ 19ರ ತನಕ ಕಾಯಲೇ ಬೇಕು.