Site icon Vistara News

Viral Video: ಧೋತಿ-ಕುರ್ತಾ ಧರಿಸಿ ಕ್ರಿಕೆಟ್ ಆಡಿದ ಪಂಡಿತರು; ಗೆದ್ದರೆ ಅಯೋಧ್ಯೆ ಪ್ರವಾಸ

Unique cricket tournament

ಭೋಪಾಲ್: ಮಹರ್ಷಿ ಮಹೇಶ್ ಯೋಗಿ ಅವರ ಜನ್ಮದಿನದ ಅಂಗವಾಗಿ ನಡೆಸುವ ವೈದಿಕ ಕುಟುಂಬದ ಕ್ರಿಕೆಟ್​ ಪಂದ್ಯಾಟ ಈ ಬಾರಿ ಹೆಚ್ಚು ಗಮನ(Viral Video) ಸೆಳೆದಿದೆ. ಪಂದ್ಯಾಕೂಟದಲ್ಲಿ ಗೆದ್ದ ತಂಡಕ್ಕೆ ಜನವರಿ 22 ರಂದು ರಾಮ ದೇವಾಲಯದ ಪ್ರತಿಷ್ಠಾಪನೆ ನಡೆಯಲಿರುವ ಅಯೋಧ್ಯೆಗೆ ಭೇಟಿ ನೀಡುವ ಸುವರ್ಣಾವಕಾಶ ಸಿಗಲಿದೆ.


ಕಳೆದ ಬಾರಿಯೂ ಈ ಕ್ರಿಕೆಟ್​ ಟೂರ್ನಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದು ಮಾಡಿತ್ತು. ಇದಕ್ಕೆ ಕಾರಣ ಈ ಟೂರ್ನಿಯಲ್ಲಿ ಆಟಗಾರರು ಹಣೆಗೆ ವಿಭೂತಿ, ಸಾಂಪ್ರದಾಯಿಕ ಉಡುಗೆ, ಧೋತಿ-ಕುರ್ತಾ ಧರಿಸಿ ಆಡಿದ್ದರು. ಜತೆಗೆ ಪಂದ್ಯದ ಕಾಮೆಂಟ್ರಿಯನ್ನು ಸಂಸ್ಕೃತದಲ್ಲೇ ಮಾಡಲಾಗಿತ್ತು. ವೈದಿಕ ಕುಟುಂಬದಲ್ಲಿ ಸಂಸ್ಕೃತ ಮತ್ತು ಕ್ರೀಡಾ ಮನೋಭಾವ ಉತ್ತೇಜಿಸುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ. ಈ ಬಾರಿಯೂ ಇದೇ ರೀತಿಯಲ್ಲಿ ಪಂದ್ಯಕೂಡ ನಡೆಸಲಾಗಿದೆ.

ಅಂಕುರ್ ಮೈದಾನದಲ್ಲಿ ಶುಕ್ರವಾರದಿಂದ ನಾಲ್ಕು ದಿನಗಳ ಪಂದ್ಯಾವಳಿ ಪ್ರಾರಂಭವಾಗಿದ್ದು, ಆಟಗಾರರು ಮತ್ತು ಅಂಪೈರ್‌ಗಳು ನಿರರ್ಗಳವಾಗಿ ಸಂಸ್ಕೃತದಲ್ಲಿ ಸಂವಹನ ನಡೆಸಿದ್ದಾರೆ. ಪಂದ್ಯಾಕೂಟದ ವಿಜೇತರಿಗೆ 21,000 ರೂ. ನಗದು, ರನ್ನರ್ ಅಪ್ ತಂಡಕ್ಕೆ 11,000 ರೂ. ನಗದು ಬಹುಮಾನ ಸಿಗಲಿದೆ. ಬಹುಮಾನಗಳ ಹೊರತಾಗಿ, ಆಟಗಾರರಿಗೆ ವೈದಿಕ ಪುಸ್ತಕಗಳು ಮತ್ತು 100 ವರ್ಷಗಳ ‘ಪಂಚಾಂಗ’ ನೀಡಿ ಗೌರವಿಸಲಾಗುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ. ಗೆದ್ದ ತಂಡ ಅಯೋಧ್ಯೆಗೆ ಹೋಗುವ ಅವಕಾಶವಿದೆ. 

ಇದನ್ನೂ ಓದಿ Viral Video: ಔಟ್​ ನೀಡಿದ ಮೂರನೇ ಅಂಪೈರ್​; ನಾಟೌಟ್ ಎಂದ ಫೀಲ್ಡ್​ ಅಂಪೈರ್​


ರಾಮ ಮಂದಿರ (Ram Mandir) ಉದ್ಘಾಟನೆಗೆ ದಿನಗಣನೆ ಶುರುವಾಗಿದೆ. ಜನವರಿ 22ರಂದು ಮಧ್ಯಾಹ್ನ 12.20 ಪ್ರಾಣ ಪ್ರತಿಷ್ಠಾಪನೆ ನರವೇರಲಿದೆ. ಆದರೆ, ಇದೇ ದಿನಾಂಕದಂದು ಯಾಕೆ ಪ್ರಾಣ ಪ್ರತಿಷ್ಠಾಪನೆಗೆ (Pran Pratishtapane) ನಿರ್ಧರಿಸಲಾಯಿತು ಎಂಬ ಪ್ರಶ್ನೆ ಇದ್ದರೆ, ಅದಕ್ಕೆ ಇಲ್ಲಿದೆ ಉತ್ತರ. ಈ ಪ್ರಾಣ ಪ್ರತಿಷ್ಠಾಪನೆಯ ಧಾರ್ಮಿಕ ವಿಧಿ ವಿಧಾನ ಪ್ರಕ್ರಿಯೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಪಾಲ್ಗೊಳ್ಳಲಿದ್ದಾರೆ.

ಪ್ರಾಣ ಪ್ರತಿಷ್ಠಾಪನೆಯ ಕಾರ್ಯಕ್ರಮಗಳು ಜನವರಿ 15ರಿಂದಲೇ ಶುರುವಾಗುತ್ತವೆ. ಅಂದರೆ, ಮಕರ ಸಂಕ್ರಾಂತಿಯ ಮಾರನೇ ದಿನದಿಂದ ಶುರುವಾಗುತ್ತವೆ ಮತ್ತು ಜನವರಿ 22ರಂದು ಪ್ರಾಣ ಪ್ರತಿಷ್ಠಾಪನೆ ನಡೆಯುತ್ತಿದೆ. ಜನವರಿ 22 ಅತ್ಯಂತ ಪವಿತ್ರ ದಿನವಾಗಿದೆ. ಮೃಗಶಿರ ನಕ್ಷತ್ರ ಮತ್ತು ಅಮೃತ ಸಿದ್ಧಿಯೋಗ ಮತ್ತು ಸರ್ವತಾ ಸಿದ್ಧಿ ಯೋಗ ಸಮಯವು ಇರುವುದರಿಂದ ಇದೇ ದಿನ ಹಾಗೂ ಮುಹೂರ್ತದಂದು ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಗೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನಿರ್ಧರಿಸಿದೆ.

Exit mobile version