Site icon Vistara News

WPL 2023: ಮುಂಬೈ ವಿರುದ್ಧ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಯುಪಿ ವಾರಿಯರ್ಸ್‌

WPL 2023

WPL 2023

ಮುಂಬಯಿ: ಹ್ಯಾಟ್ರಿಕ್‌ ಗೆಲುವು ದಾಖಲಿಸಿರುವ ಮುಂಬೈ ಇಂಡಿಯನ್ಸ್‌ ತಂಡ ತನ್ನ ನಾಲ್ಕನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್‌ ವಿರುದ್ಧ ಟಾಸ್‌ ಸೋತು ಬೌಲಿಂಗ್‌ ಆಹ್ವಾನ ಪಡೆದಿದೆ. ಟಾಸ್‌ ಗೆದ್ದ ಯುಪಿ ಬ್ಯಾಟಿಂಗ್‌ ಆಯ್ದುಕೊಂಡಿದೆ.

ಮುಂಬಯಿಯ ಬ್ರಬೋರ್ನ್ ಸ್ಟೇಡಿಯಂನ ಟ್ರ್ಯಾಕ್‌’ ಬ್ಯಾಟಿಂಗಿಗೆ ಹೆಚ್ಚಿನ ನೆರವು ನೀಡಲಿರುವ ಕಾರಣ ಈ ಪಂದ್ಯದಲ್ಲಿ ದೊಡ್ಡ ಮೊತ್ತ ದಾಖಲಾಗುವ ಸಾಧ್ಯತೆ ಇದೆ. ಒಂದೊಮ್ಮೆ ಈ ಪಂದ್ಯದಲ್ಲಿ ಯುಪಿ ವಾರಿಯರ್ಸ್‌ ಗೆದ್ದರೆ ಮೂರನೇ ಸ್ಥಾನವನ್ನು ಭದ್ರ ಪಡಿಸಿಕೊಳ್ಳುವ ಮೂಲಕ ಫೈನಲ್‌ ಪ್ರವೇಶದ ರೇಸ್‌ನಲ್ಲಿ ಉಳಿದುಕೊಳ್ಳಲಿದೆ. ಮುಂಬೈ ಗೆದ್ದರೆ ಅಗ್ರ ಸ್ಥಾನದೊಂದಿಗೆ ಫೈನಲ್‌ ಟಿಕೆಟ್‌ ಬಹುತೇಕ ಖಚಿತ ಪಡಿಸಲಿದೆ.

ಇದನ್ನೂ ಓದಿ WPL 2023: ನಾಲ್ಕಕ್ಕೆ ನಾಗಾಲೋಟ ಬೆಳೆಸೀತೇ ಮುಂಬೈ ಇಂಡಿಯನ್ಸ್‌?

ಮುಂಬಯಿ ಇಂಡಿಯನ್ಸ್​: ಯಾಸ್ತಿಕಾ ಭಾಟಿಯಾ (ವಿಕೆಟ್​ಕೀಪರ್​), ಹೇಲಿ ಮ್ಯಾಥ್ಯೂಸ್, ನ್ಯಾಟ್ ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಅಮೆಲಿಯಾ ಕೆರ್, ಧಾರಾ ಗುಜ್ಜರ್‌, ಅಮಂಜೋತ್ ಕೌರ್, ಐಸ್ಸಿ ವೋಂಗ್‌, ಹುಮೈರಾ ಖಾಜಿ, ಜಿಂಟಿಮಣಿ ಕಲಿತಾ, ಸೈಕಾ ಇಶಾಕ್.

ಯುಪಿ ವಾರಿಯರ್ಸ್​: ದೇವಿಕಾ ವೈದ್ಯ,, ಅಲಿಸಾ ಹೀಲಿ (ನಾಯಕಿ), ಶ್ವೇತಾ ಸೆಹ್ರಾವತ್, ಕಿರಣ್ ನವಗಿರೆ, ತಹ್ಲಿಯಾ ಮೆಗ್ರಾತ್, ದೀಪ್ತಿ ಶರ್ಮಾ, ಸಿಮ್ರಾನ್ ಶೇಖ್, ಸೋಫಿ ಎಕ್ಲೆಸ್ಟೋನ್, ಶಬ್ನಿಮ್‌ ಇಸ್ಮಾಯಿಲ್‌. ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್ವಾಡ್.

Exit mobile version