Site icon Vistara News

Urvashi Rautela: ಪಂತ್​ ಜತೆ ಮದುವೆಯಾಗುತ್ತೀರಾ?; ಅಭಿಮಾನಿಯ ಪ್ರಶ್ನೆಗೆ ಉತ್ತರಿಸಿದ ಊರ್ವಶಿ ರೌಟೇಲಾ; ವಿಡಿಯೊ ವೈರಲ್​

Urvashi Rautela

ಮುಂಬಯಿ: ಟೀಮ್​ ಇಂಡಿಯಾದ ಸ್ಟಾರ್​ ವಿಕೆಟ್​ ಕೀಪರ್​ ಕಮ್​ ಬ್ಯಾಟರ್​ ರಿಷಭ್​ ಪಂತ್(Rishabh Pant)​ ಜತೆ ಮದುವೆಯ ವಿಚಾರಕ್ಕೆ ಸಂಬಂಧಿಸಿ ಬಾಲಿವುಡ್ ನಟಿ ಊರ್ವಶಿ ರೌಟೇಲಾ(Urvashi Rautela) ನೀಡಿದ ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್(viral video)​ ಆಗಿದೆ.

ರಿಷಭ್​ ಪಂತ್ ಮತ್ತು ಊರ್ವಶಿ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಕೆಲ ವರ್ಷಗಳ ಹಿಂದೆ ಬಾರೀ ಸದ್ದು ಮಾಡಿತ್ತು. ಇದೇ ವೇಳೆ ಊರ್ವಶಿ ಮಾಧ್ಯಮವೊಂದಕ್ಕೆ ಹೇಳಿಕೆ ನೀಡುವಾಗ ರಿಷಭ್‌ ಪಂತ್ ನನ್ನ ಭೇಟಿ ಮಾಡಲು ಹಲವು ಗಂಟೆ ಕಾದಿದ್ದರು ಎಂದಿದ್ದರು. ಈ ಬಗ್ಗೆ ರಿಷಭ್‌ ನಟಿಗೆ ಖಡಕ್ ತಿರುಗೇಟು ನೀಡಿದ್ದರು. ಇದೇ ವಿಚಾರವಾಗಿ ಇವರಿಬ್ಬರ ಮಧ್ಯೆ ಟ್ವೀಟ್​ ವಾರ್​ ಕೂಡ ನಡೆದಿತ್ತು. ಈ ಘಟನೆ ನಡೆದ ಬಳಿಕ ಇವರಿಬ್ಬರು ಬ್ರೇಕಪ್​ ಆಗಿದ್ದಾರೆ ಎನ್ನಲಾಗಿತ್ತು. ಇದೀಗ ಅಭಿಮಾನಿಗಳ ಬಯಕೆಯಂತೆ ಪಂತ್​ ಅವರನ್ನು ವಿವಾಹವಾಗುತ್ತೀರ ಎಂದು ಕೇಳಿದ ಪ್ರಶ್ನೆಗೆ ಊರ್ವಶಿ ಸ್ಪಷ್ಟ ಉತ್ತರ ನೀಡಿದ್ದಾರೆ.

ಇದನ್ನೂ ಓದಿ Urvashi Rautela: ಕ್ರಿಕೆಟಿಗರಾದ ಪಂತ್​,ನಸೀಮ್​ಗೆ ಕೈಕೊಟ್ಟು ಖ್ಯಾತ ಫುಟ್ಬಾಲರ್​ ಜತೆ ಡೇಟಿಂಗ್ ಆರಂಭಿಸಿದ ಊರ್ವಶಿ ರೌಟೇಲಾ​

ಪಾಡ್‌ಕಾಸ್ಟ್‌ವೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಅಭಿಮಾನಿಗಳು ಸೋಶಿಯಲ್‌ ಮೀಡಿಯಾಗಳಲ್ಲಿ ಕೇಳಲಾದ ಪ್ರಶ್ನೆಗಳನ್ನು ಊರ್ವಶಿಗೆ ಸಂದರ್ಶಕ ಕೇಳಿದ್ದಾರೆ. ʻರಿಷಭ್‌ ಪಂತ್ ನಿಮ್ಮನ್ನು ತುಂಬಾ ಗೌರವಿಸುತ್ತಾರೆ, ತುಂಬಾ ಚೆನ್ನಾಗಿಯೂ ನೋಡಿಕೊಳ್ಳುತ್ತಾರೆ, ನೀವು ಅವರನ್ನು ಮದುವೆಯಾಗಬೇಕು ಅನ್ನೋದು ನಮ್ಮ ಬಯಕೆ, ಇದಕ್ಕೆ ಏನಂತೀರಾ?ʼ ಎಂದು ನೆಟ್ಟಿಗನ ಪ್ರಶ್ನೆಯೊಂದನ್ನು ಪ್ರಸ್ತಾಪಿಸಿದರು. ಆದರೆ ಊರ್ವಶಿ ಇದಕ್ಕೆ ನೋ ಕಾಮೆಂಟ್ಸ್‌ ಎಂದು ಮದುವೆ ಪ್ರಸ್ತಾವವನ್ನು ತಿರಸ್ಕರಿಸಿದ್ದಾರೆ. ಪಂತ್​ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದಾಗ ಆರೋಗ್ಯ ಸುಧಾರಿಸಿಕೊಳ್ಳಲಿ ಇದಕ್ಕಾಗಿ ಹ್ಯಾಶ್​ ಟ್ಯಾಗ್​ ಹೆಲ್ತ್​ ಎಂದು ಉತ್ತರಿಸಿದರು.  ಪಂತ್​ ಅವರು ಕಾರು ಅಪಘಾತಗೊಂಡಾದ ಚೇತರಿಕೆಗಾಗಿ ದೇವರಲ್ಲಿ ಪ್ರಾರ್ಧಿಸುವೆ ಎಂಬ ಪೋಸ್ಟರ್​ ಕೂಡ ಹಾಕಿದ್ದರು. 

ಪಾಕ್​ ಆಟಗಾರ ಬಗ್ಗೆ ಮೆಚ್ಚುಗೆ


ಪಾಕಿಸ್ತಾನ ತಂಡದ ಸ್ಟಾರ್‌ ಯುವ ವೇಗಿ ನಸೀಮ್‌ ಶಾ (Naseem Shah) ಬಗ್ಗೆ ಪ್ರಶ್ನೆ ಕೇಳಿದಾಗ, ಖುಷಿಯಿಂದಲೇ ಉತ್ತರಿಸಿದ ಊರ್ವಶಿ ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್‌ ಬೌಲರ್‌ ಎಂದು ಹೇಳಿದರು. ನಸೀಮ್‌ ಒಳ್ಳೆಯ ಬೌಲರ್‌, ಭಾರತ ಮತ್ತು ಪಾಕಿಸ್ತಾನ ಪಂದ್ಯಗಳಲ್ಲಂತೂ ಹೆಚ್ಚು ಜನಪ್ರಿಯರಾಗಿದ್ದಾರೆ ಎಂದು ಹೇಳಿದರು. ಸದ್ಯ ನಟಿ ನೀಡಿರುವ ಪ್ರತಿಕ್ರಿಯೆಗೆ ಸೋಶಿಯಲ್‌ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕಳೆದ ವರ್ಷ ನಡೆದಿದ್ದ ಏಷ್ಯಾಕಪ್​(Asia cup 2023) ವೇಳೆ ಊರ್ವಶಿ ರೌಟೇಲಾ ಪಾಕಿಸ್ತಾನ ಆಟಗಾರ ನಸೀಮ್ ಶಾ ಅವರು ಸಹ ಆಟಗಾರರೊಂದಿಗಿರುವ ಫೋಟೊವನ್ನು ತಮ್ಮ ಸಾಮಾಜಿಕ ಜಾಲತಾಣವಾದ ಇನ್​ಸ್ಟಾಗ್ರಾಮ್​ನಲ್ಲಿ ಹಾಕಿದ್ದರು. ದುಬೈನಲ್ಲಿ ಪಾಕಿಸ್ತಾನ ಮತ್ತು ಭಾರತ ನಡುವಿನ ಪಂದ್ಯಕ್ಕೆ ಹಾಜರಾಗಿದ್ದರು. ಅಲ್ಲದೆ ನಸೀಮ್ ಶಾ ಅವರ ದೊಡ್ಡ ಅಭಿಮಾನಿ ಎಂದು ಪೋಸ್ಟ್​ ಕೂಡ ಹಾಕಿದ್ದರು. ಇದು ಮಾತ್ರವಲ್ಲದೆ ನಸೀಮ್‌ ಶಾ ಅವರ ಹುಟ್ಟುಹಬ್ಬಕ್ಕೂ ಶುಭಾಶಯ ಕೋರಿದ್ದರು. ಶುಭಾಶಯದ ಜತೆಗೆ ಡಿಎಸ್‌ಪಿ ಗೌರವ ಪಡೆದಿದ್ದಕ್ಕೂ ನಸೀಮ್ ಶಾ ಅವರಿಗೆ ಊರ್ವಶಿ ಅಭಿನಂದಿಸಿದ್ದರು. ಇದಕ್ಕೆ ನಸೀಮ್ ಶಾ, ‘ಧನ್ಯವಾದಗಳು’ ಎಂದು ಪ್ರತಿಕ್ರಿಕೆ ನೀಡಿದ್ದರು. ಈ ವೇಳೆ ನೆಟ್ಟಿಗರು ಇವರಿಬ್ಬರ ಮಧ್ಯೆ ಪ್ರೇಮಾಂಕುರ ಆಗಿದೆ ಎಂದಿದ್ದರು. ಇದೀಗ ಮತ್ತೆ  ನಸೀಮ್‌ ಅವರನ್ನು ಹೊಗಳಿದ್ದು ನೋಡಿದರೆ ಇವರಿಬ್ಬರು ಪ್ರೀತಿಯ ಬಲೆಯಲ್ಲಿ ಬಿದ್ದಿರುವುದು ನಿಜ ಎನ್ನುವಂತಿದೆ.

Exit mobile version