Site icon Vistara News

WPL 2023 : ಡಬ್ಲ್ಯುಪಿಎಲ್​ನಂತೆ ಐಪಿಎಲ್​ನಲ್ಲೂ ವೈಡ್​ ಬಾಲ್, ನೋ ಬಾಲ್​​ ಪರೀಕ್ಷೆಗೆ ಡಿಆರ್​ಎಸ್​ ಬಳಕೆ?

Use of DRS for wide ball, no ball test in IPL like WPL?

#image_title

ಮುಂಬಯಿ: ಉದ್ಘಾಟನಾ ಆವೃತ್ತಿಯ ಮಹಿಳೆಯರ ಪ್ರೀಮಿಯರ್​ ಲೀಗ್​ನಲ್ಲಿ (WPL 2023) ವೈಡ್​ ಬಾಲ್​ ವೀಕ್ಷಣೆಗೂ ಡಿಆರ್​ಎಸ್​ (ಅಂಪೈರ್​ ತೀರ್ಪು ಮರುಪರಿಶೀಲನೆ) ಬಳಸಲಾಗುತ್ತಿದೆ. ಟೂರ್ನಿಯಲ್ಲಿ ಈಗಾಗಲೇ ಮುಕ್ತಾಯಗೊಂಡಿರುವ ಮೂರು ಪಂದ್ಯಗಳಲ್ಲಿ ಇಂಥ ದೃಶ್ಯಗಳನ್ನು ಅಭಿಮಾನಿಗಳು ವೀಕ್ಷಿಸಿದ್ದಾರೆ. ಇದೇ ನಿಯಮ ಮುಂಬರುವ ಐಪಿಎಲ್​ಗೂ ಅನ್ವಯವಾಗಲಿದೆ ಎಂದು ವರದಿಯಾಗಿದೆ. ಮಹಿಳೆಯರ ಐಪಿಎಲ್​ನಲ್ಲಿ ನೋ ಬಾಲ್​ ಹಾಗೂ ವೈಡ್​ ಪರಿಶೀಲನೆ ಮಾಡಲು ಡಿಆರ್​ಎಸ್​ ಬಳಸಲು ತಂಡದ ಆಟಗಾರರಿಗೆ ಅವಕಾಶ ನೀಡಲಾಗಿದ್ದು, ಅದೇ ಅವಕಾಶ ಪುರುಷ ಕ್ರಿಕೆಟಿಗರಿಗೂ ಲಭ್ಯವಾಗಲಿದೆ ಎನ್ನಲಾಗಿದೆ.

ಕ್ರಿಕ್​ಇನ್ಫೋ ಈ ಬಗ್ಗೆ ವರದಿ ಮಾಡಿದ್ದು ತಂಡವೊಂದು ಔಟ್​ ತೀರ್ಪು ಪರಿಶೀಲನೆ ಮಾಡುವ ಜತೆಗೆ ವೈಡ್​, ನೋಬಾಲ್​ ಕೂಡ ಪರಿಶೀಲನೆ ಮಾಡಬಹುದು ಎಂದು ಹೇಳಲಾಗಿದೆ.

ಆನ್​ಫೀಲ್ಡ್​ ಅಂಪೈರ್​ಗಳು ನೀಡಿರುವ ಎಲ್ಲ ತೀರ್ಪನ್ನು ಪರಿಶೀಲನೆ ಮಾಡಲು ಅಂಪೈರ್​ಗಳಿಗೆ ಅವಕಾಶ ನೀಡಲಾಗಿದೆ ಎಂದು ಡಬ್ಲ್ಯುಪಿಎಲ್​ ಪ್ರಕಟಣೆಯಲ್ಲಿ ತಿಳಿಸಲಾಗಿತ್ತು.

ಇದನ್ನೂ ಓದಿ : WPL 2023: ಮಹಿಳಾ ಪ್ರೀಮಿಯರ್​ ಲೀಗ್​ ಅಂಕ ಪಟ್ಟಿ

ಮಹಿಳೆಯರ ಪ್ರೀಮಿಯರ್ ಲೀಗ್​ನಲ್ಲಿ ಈವರೆಗಿನ ಮೂರು ಪಂದ್ಯಗಳಲ್ಲಿ ಈ ಅವಕಾಶವನ್ನು ಬಳಸಿಕೊಳ್ಳಲಾಗಿದೆ. ಮುಂಬಯಿ ಇಂಡಿಯನ್ಸ್​​ ತಂಡದ ನಾಯಕಿ ಹರ್ಮನ್​ಪ್ರೀತ್​ ಕೌರ್ ವೈಡ್ ಪರಿಶೀಲನೆಗೆ ಡಿಆರ್​ಎಸ್​ ಬಳಸಿಕೊಂಡಿದ್ದರೆ, ಡೆಲ್ಲಿ ತಂಡದ ಜೆಮಿಮಾ ಕೂಡಾ ತಾಂತ್ರಿಕ ನೆರವು ಪಡೆದುಕೊಂಡಿದ್ದರು. ಆರ್​ಸಿಬಿ ತಂಡದ ಮೇಗನ್​ ಶೂಟ್​ ನೋಬಾಲ್​ ತೀರ್ಪನ್ನು ಪ್ರಶ್ನಿಸಿದ್ದರು. ಗುಜರಾತ್​ ತಂಡದ ಸ್ನೇಹಾ ರಾಣಾ ವೈಡ್​ ತೀರ್ಪನ್ನು ಪರಿಶೀಲನೆಗೆ ಒಳಪಡಿಸಿದ್ದರು.

Exit mobile version