ಲಾರ್ಡ್ಸ್: ಇಂಗ್ಲೆಂಡ್ ವಿರುದ್ಧ ದ್ವಿತೀಯ ಟೆಸ್ಟ್(Ashes 2023) ಪಂದ್ಯವನ್ನು ಆಸ್ಟ್ರೇಲಿಯಾ 43ರನ್ಗಳ ಅಂತರದಿಂದ ಗೆದ್ದು ಬೀಗಿದೆ. ಈ ಗೆಲುವಿನೊಂದಿಗೆ 5 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಕಾಯ್ದುಕೊಂಡಿದೆ. ಆದರೆ ಅಂತಿಮ ದಿನವಾದ ಭಾನುವಾರ ಆಸೀಸ್ ಆಟಗಾರರಾದ ಡೇವಿಡ್ ವಾರ್ನರ್(David Warner) ಮತ್ತು ಉಸ್ಮಾನ್ ಖವಾಜ(Usman Khawaja) ಅವರು ಲಾರ್ಡ್ಸ್ ಮೈದಾನದ ಲಾಂಗ್ ರೂಮ್ನಲ್ಲಿ ಅಧಿಕಾರಿಗಳೊಂದಿಗೆ ನಡೆಸಿದ ವಾಗ್ವಾದ ವಿಡಿಯೊವೊಂದು ವೈರಲ್(viral video) ಆಗಿದೆ. ಆಟಗಾರರ ಈ ವರ್ತನೆಗೆ ಅನೇಕ ಮಾಜಿ ಆಟಗಾರರು ಛೀಮಾರಿ ಹಾಕಿದ್ದಾರೆ.
ಅಂತಿಮ ದಿನದ ಊಟದ ವಿರಾಮದ ವೇಳೆ ಈ ಘಟನೆ ನಡೆದಿದೆ. ಬೆಳಗಿನ ಸೆಷನ್ ಬಳಿಕ ಊಟಕ್ಕೆಂದು ಡ್ರೆಸಿಂಗ್ ರೋಮ್ಗೆ ತೆರಳುತ್ತಿದ್ದ ವೇಳೆ ಉಸ್ಮಾನ್ ಖವಾಜಾ ಅವರು ಲಾಂಗ್ ರೂಮ್ನಲ್ಲಿದ್ದ ಅಧಿಕಾರಿಗೊಳೊಂದಿ ಏನೋ ವಾಗ್ವಾದ ನಡೆಸಿ ತೆರಳಿದ್ದಾರೆ. ಇದೇ ವೇಳೆ ಹಿಂದಿನಿಂದ ಬಂದ ವಾರ್ನರ್ ಕೊಂಚ ಆಕ್ರೋಶ ಭರಿತವಾಗಿಯೇ ಮಾತಿನ ಚಕಮಕಿ ನಡೆಸಿದ್ದಾರೆ. ಸಣ್ಣ ಮಟ್ಟಿನ ತಳ್ಳಾಟ ಕೂಡ ನಡೆದಿದೆ. ತಕ್ಷಣ ಎಚ್ಚೆತ್ತುಕೊಂಡ ಅಧಿಕಾರಿಗಳು ವಾರ್ನರ್ ಮತ್ತು ಖವಾಜಾ ಅವರನ್ನು ಅಲ್ಲಿಂದ ತೆರಳುವಂತೆ ಮಾಡಿದ್ದಾರೆ. ಸದ್ಯ ಯಾವ ಕಾರಣಕ್ಕೆ ಈ ಗಲಾಟೆ ನಡೆದಿದೆ ಎಂದು ತಿಳಿದು ಬಂದಿಲ್ಲ.
ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಇಂಗ್ಲೆಂಡ್ ಕ್ರಿಕೆಟ್ ತಂಡದ ವಿಶ್ವ ಕಪ್ ವಿಕೇತ ಮಾಜಿ ನಾಯಕ ಇಯಾನ್ ಮಾರ್ಗನ್, ತನ್ನ ಇಷ್ಟು ವರ್ಷದ ಕ್ರಿಕೆಟ್ ಬಾಳ್ವೆಯಲ್ಲಿ ಈ ರೀತಿಯ ಘಟನೆಯನ್ನು ಇಲ್ಲಿ ನೋಡುತ್ತಿರುವು ಇದೇ ಮೊದಲು ಎಂದಿದ್ದಾರೆ. ಮಾರ್ಗನ್ ಮಾತ್ರವಲ್ಲದೆ ಇನ್ನೂ ಹಲವು ಇಂಗ್ಲೆಂಡ್ನ ಮಾಜಿ ಆಟಗಾರರು ಆಸೀಸ್ ಆಟಗಾರರ ಈ ದುರಂಕಾರದ ವರ್ತನೆಯನ್ನು ಖಂಡಿಸಿದ್ದಾರೆ. ಇವರ ವಿರುದ್ಧ ಐಸಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ Ashes 2023: ಚರ್ಚೆಗೆ ಕಾರಣವಾದ ಜಾನಿ ಬೇರ್ಸ್ಟೋ ಔಟ್; ಕ್ರೀಡಾಸ್ಫೂರ್ತಿ ಮರೆತರೇ ಆಸೀಸ್ ಆಟಗಾರರು?
Usman Khawaja was pulled back by security after speaking to one the members inside the long room 😳
— Sky Sports Cricket (@SkyCricket) July 2, 2023
🗣️ "I've NEVER seen scenes like that!" pic.twitter.com/2RnjiNssfw
ಪಂದ್ಯ ಸೋತ ಇಂಗ್ಲೆಂಡ್
ಅತ್ಯಂತ ಕುತೂಹಲ ಮೂಡಿಸಿದ್ದ ಈ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಬೆನ್ಸ್ಟೋಕ್ಸ್ ಅವರ ವಿರೋಚಿತ ಶತಕದ (155 ರನ್) ನಡುವೆಯೂ ಇಂಗ್ಲೆಂಡ್ ಸೋಲಿನ ಸುಳಿಗೆ ಸಿಲುಕಿತು. ಎರಡನೇ ಪಂದ್ಯದ ಕೊನೇ ದಿನವಾದ ಭಾನುವಾರ ಇಂಗ್ಲೆಂಡ್ ಬಳಗದ ಗೆಲುವಿಗೆ 257 ರನ್ಗಳ ಅವಶ್ಯಕತೆ ಇತ್ತು. ಆದರೆ, ಗುರಿ ಮೀರಲು ಇಂಗ್ಲೆಂಡ್ ತಂಡಕ್ಕೆ ಸಾಧ್ಯವಾಗಲಿಲ್ಲ. ಗೆಲುವಿಗೆ ಎರಡನೇ ಇನಿಂಗ್ಸ್ನಲ್ಲಿ 371 ರನ್ಗಳ ಅಗತ್ಯವಿತ್ತು. ಆದರೆ, 81 ಓವರ್ಗಳನ್ನು ಎದುರಿಸಿದ ಆಂಗ್ಲರ ಪಡೆ 327 ರನ್ಗೆ ಆಲ್ಔಟ್ ಅಯಿತು. ಬೆನ್ಸ್ಟೋಕ್ಸ್ ಹಾಗೂ ಬೆನ್ ಡೆಕೆಟ್ (83) ಉತ್ತಮ ಜತೆಯಾಟ ನೀಡುವ ಮೂಲಕ ಗೆಲುವಿನ ಅವಕಾಶ ಸೃಷ್ಟಿಸಿದ್ದರೂ ಉಳಿದ ಆಟಗಾರರಿಗೆ ಅಗತ್ಯ ನೆರವು ದೊರೆಯಲಿಲ್ಲ. ಹೀಗಾಗಿ ಮತ್ತೊಂದು ಪರಾಭವಕ್ಕೆ ಒಳಗಾಗಬೇಕಾಯಿತು.