ಬೆಂಗಳೂರು: ಜುಲೈ 6 ರಿಂದ ಆರಂಭವಾಗಲಿರುವ ಜಿಂಬಾಬ್ವೆ ವಿರುದ್ಧದ ಐದು ಪಂದ್ಯಗಳ ಟಿ 20 ಐ ಸರಣಿಗೆ ಬಿಸಿಸಿಐ ಸೋಮವಾರ 15 ಆಟಗಾರರನ್ನು ಒಳಗೊಂಡ ಭಾರತ ತಂಡದ (Team India) ಪಟ್ಟಿಯನ್ನು ಬಿಡುಗಡೆ ಮಾಡಿದೆ. ಟಿ 20 ವಿಶ್ವಕಪ್ 2024 ರ ಸ್ವಲ್ಪ ಸಮಯದ ನಂತರ ಸರಣಿ ಪ್ರಾರಂಭವಾಗುವುದರಿಂದ, ಆಯ್ಕೆದಾರರು ಯುವ ಮುಖಗಳಿಗೆ ಅವಕಾಶ ನೀಡಿದ್ದಾರೆ. ಹಿರಿಯ ಆಟಗಾರರಿಗೆ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಟಿ20 ವಿಶ್ವ ಕಪ್ (T20 World Cup 2024) ಮೊದಲು ಅವರೆಲ್ಲರೂ ಐಪಿಎಲ್ ಆಡಿದ್ದರು. ಹೀಗಾಗಿ ವಿಶ್ರಾಂತಿ ಅನಿವಾರ್ಯ ಎಂದು ಬಿಸಿಸಿಐ ಪರಿಗಣಿಸಿದೆ. ಏತನ್ಮಧ್ಯೆ, ಜಿಂಬಾಬ್ವೆ ತಂಡಕ್ಕೆ ತಮ್ಮನ್ನು ಆಯ್ಕೆ ಮಾಡದಿರುವುದಕ್ಕೆ ಕೆಕೆಆರ್ ತಂಡದ ಸ್ಪಿನ್ ಬೌಲರ್ ವರುಣ್ ಚಕ್ರವರ್ತಿ (Varun Chakravarthy) ಸಿಡಿದೆದ್ದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅಸಾಮಾಧಾನದ ಫೋಸ್ಟ್ ಪ್ರಕಟಿಸಿದ್ದಾರೆ.
Instagram story of Varun Chakravarthy. pic.twitter.com/GHGLl6svhB
— Johns. (@CricCrazyJohns) June 24, 2024
ಭಾರತ ತಂಡಕ್ಕೆ ಶುಬ್ಮನ್ ಗಿಲ್ ಅವರನ್ನು ನಾಯಕನನ್ನಾಗಿ ಹೆಸರಿಸಲಾಗಿದ್ದು, ನಿತೀಶ್ ಕುಮಾರ್ ರೆಡ್ಡಿ, ರಿಯಾನ್ ಪರಾಗ್ ಮತ್ತು ಅಭಿಷೇಕ್ ಶರ್ಮಾ ಅವರಂತಹ ಹಲವಾರು ಐಪಿಎಲ್ 2024 ಸ್ಟಾರ್ಗಳಿಗೆ ಭಾರತ ತಂಡದ ಮೊದಲ ಕರೆ ಸಿಕ್ಕಿದೆ. ಆದಾಗ್ಯೂ, ಕೆಕೆಆರ್ ಪರ ಅದ್ಭುತ ಪ್ರದರ್ಶನ ನೀಡಿದ ವರುಣ್ ಚಕ್ರವರ್ತಿಯಂತಹ ಹಲವಾರು ಆಟಗಾರರನ್ನು ಆಯ್ಕೆದಾರರು ನಿರ್ಲಕ್ಷಿಸಿದರು. ಅದರಲ್ಲಿ ಆ ತಂಡದ ನಾಯಕ ಶ್ರೇಯಸ್ ಅಯ್ಯರ್ ಕೂಡ ಸೇರಿದ್ದಾರೆ. ಆದರೆ ಶ್ರೇಯಸ್ ಅವರನ್ನು ಆಯ್ಕೆ ಮಾಡದೇ ಇರುವುದಕ್ಕೆ ಅವರು ಕೇಂದ್ರ ಗುತ್ತಿಗೆಯನ್ನು ತಪ್ಪಿಸಿಕೊಂಡಿರುವುದು ಕೂಡ ಒಂದು ಕಾರಣವಾಗಿದೆ.
ಇದನ್ನೂ ಓದಿ: Shreyas Iyer : ಶ್ರೇಯಸ್ ಅಯ್ಯರ್ಗೆ ಇಲ್ಲ ಸ್ಥಾನ; ಬಿಸಿಸಿಐ ವಿರುದ್ದ ಅಭಿಮಾನಿಗಳ ಅಸಮಾಧಾನ
ಚಕ್ರವರ್ತಿ ಬಗ್ಗೆ ಮಾತನಾಡುವುದಾದರೆ, ಅವರು ಈ ಋತುವಿನಲ್ಲಿ ಕೆಕೆಆರ್ ಪರ 21 ವಿಕೆಟ್ಗಳೊಂದಿಗೆ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು. ವರುಣ್ ಅವರ ಪ್ರದರ್ಶನವು ಕೆಕೆಆರ್ಗೆ 3 ನೇ ಐಪಿಎಲ್ ಪ್ರಶಸ್ತಿ ಗೆಲ್ಲಲು ಸಹಾಯ ಮಾಡಿತ್ತು. ಇದರ ಹೊರತಾಗಿಯೂ, ಅವರು ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾದರು. ಇದರಿಂದ ಅವರು ಸಹಜವಾಗಿಯೇ ಬೇಸರಗೊಂಡಿದ್ದಾರೆ. ತಮ್ಮನ್ನು ನಿರ್ಲಕ್ಷ್ಯ ಮಾಡುತ್ತಿರುವ ಆಯ್ಕೆದಾರರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ಘಟನೆಗಳಲ್ಲಿ, ವರುಣ್ ತಮ್ಮ ನಿರಾಶೆಯನ್ನು ವ್ಯಕ್ತಪಡಿಸಲು ಇನ್ಸ್ಟಾಗ್ರಾಮ್ ಸ್ಟೋರಿ ಹಾಕಿದ್ದಾರೆ. ಆ ಮೂಲಕ ಅವರು ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಮಂಡಳಿಯ ನಿರ್ಧಾರವನ್ನು ಪ್ರಶ್ನಿಸಿದ್ದಾರೆ.
ನನ್ನ ಬಳಿಕ ಹಣ ಕೊಟ್ಟು ಪ್ರಚಾರ ತೆಗೆದುಕೊಳ್ಳುವ ಪಿಆರ್ ಏಜೆನ್ಸಿ ಇರಬೇಕೆಂದು ನಾನು ಬಯಸುತ್ತೇನೆ!!, ಎಂದು ಪರೋಕ್ಷವಾಗಿ ಬರೆದಿದ್ದಾರೆ.
ವರುಣ್ 2021 ರಲ್ಲಿ ಭಾರತಕ್ಕಾಗಿ ಪಾದಾರ್ಪಣೆ ಮಾಡಿದ್ದರು. ಅವರು 2021 ರ ಟಿ 20 ವಿಶ್ವಕಪ್ನ ಭಾಗವಾಗಿದ್ದರು. ಆ ಆವೃತ್ತಿಯು ಅವರಿಗೆ ವಿಪತ್ತಾಗಿ ಪರಿಣಮಿಸಿತು, ಮತ್ತು ಸ್ಕಾಟ್ಲೆಂಡ್ ವಿರುದ್ಧದ ಭಾರತದ ಕೊನೆಯ ಗುಂಪು ಹಂತದ ಪಂದ್ಯವು ಅವರಿಗೆ ಕೊನೆಯ ಪಂದ್ಯವಾಯಿತು.
ಜಿಂಬಾಬ್ವೆ ಪ್ರವಾಸಕ್ಕೆ ಭಾರತ ತಂಡ:
ಭಾರತ ಮತ್ತು ಜಿಂಬಾಬ್ವೆ ನಡುವಿನ ಟಿ 20 ವಿಶ್ವಕಪ್ ಸರಣಿಗೆ ಭಾರತದ ಇಬ್ಬರು ಆಟಗಾರರನ್ನು ಮಾತ್ರ ಹೆಸರಿಸಲಾಗಿದೆ. ಯಶಸ್ವಿ ಜೈಸ್ವಾಲ್ ಮತ್ತು ಸಂಜು ಸ್ಯಾಮ್ಸನ್ ಆ ಪ್ರಮುಖ ಆಟಗಾರರು. ಜೈಸ್ವಾಲ್ ಅಥವಾ ಸ್ಯಾಮ್ಸನ್ ಟಿ20 ವಿಶ್ವ ಕಪ್ನಲ್ಲಿ ಇಲ್ಲಿಯವರೆಗೆ ಒಂದು ಪಂದ್ಯವನ್ನೂ ಆಡಿಲ್ಲ. ಸ್ಪರ್ಧೆಯ ಉಳಿದ ಭಾಗಕ್ಕೆ ಅವರು ಪ್ಲೇಯಿಂಗ್ ಹನ್ನೊಂದರಲ್ಲಿ ಅವಕಾಶ ಪಡೆಯುವ ಸಾಧ್ಯತೆಯಿಲ್ಲ.
ತಂಡ: ಶುಬ್ಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್, ಅಭಿಷೇಕ್ ಶರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ನಿತೀಶ್ ರೆಡ್ಡಿ, ರಿಯಾನ್ ಪರಾಗ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅವೇಶ್ ಖಾನ್, ಖಲೀಲ್ ಅಹ್ಮದ್, ಮುಖೇಶ್ ಕುಮಾರ್, ತುಷಾರ್ ದೇಶಪಾಂಡೆ.