Site icon Vistara News

Vedaant Madhavan: ಸ್ವಿಮ್ಮಿಂಗ್​ನಲ್ಲಿ 5 ಚಿನ್ನದ ಪದಕ ಗೆದ್ದ ನಟ ಮಾಧವನ್ ಪುತ್ರ ವೇದಾಂತ್

Vedaant Madhavan: Vedaant Madhavan is the son of actor Madhavan who won 5 gold medals in swimming

Vedaant Madhavan: Vedaant Madhavan is the son of actor Madhavan who won 5 gold medals in swimming

ಕೌಲಾಲಂಪುರ,(ಮಲೇಷ್ಯಾ): ಭಾರತದ ಸೆನ್ಸೇಷನಲ್ ಯುವ ಈಜು ಪಟು, ನಟ ಆರ್. ಮಾಧವನ್(R Madhavan) ಅವರ ಪುತ್ರ ವೇದಾಂತ್ ಮಾಧವನ್​(Vedaant Madhavan) ಅವರು “ಮಲೇಷ್ಯಾದ ಆಹ್ವಾನಿತ ವಯೋಮಾನದ ಈಜು ಚಾಂಪಿಯನ್​ಶಿಪ್”​ ಕೂಟದಲ್ಲಿ 5 ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಅವರ ಈ ಸಾಧನೆಗೆ ಮಾಜಿ ‘ಭುವನ ಸುಂದರಿ’, ನಟಿ ಲಾರಾ ದತ್ತಾ ಸೇರಿದಂತೆ ಹಲವು ಗಣ್ಯ ವ್ಯಕ್ತಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸೋಮವಾರ ಇಲ್ಲಿ ಮುಕ್ತಾಯ ಕಂಡ ಈ ಟೂರ್ನಿಯಲ್ಲಿ ವೇದಾಂತ್ ಅಮೋಘ ಪ್ರದರ್ಶನ ತೋರುವ ಮೂಲಕ ಭಾರತಕ್ಕೆ 5 ಚಿನ್ನದ ಪದಕ ಗೆದ್ದು, ದೇಶದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದರು. ಅವರು ಪಾಲ್ಗೊಂಡ ಎಲ್ಲ ಫ್ರೀ-ಸ್ಟೈಲ್ ವಿಭಾಗದಲ್ಲಿ ಚಿನ್ನ ಗೆದ್ದಿರುವುದು ವಿಶೇಷ. ವೇದಾಂತ್​ (50ಮೀ. 100 ಮೀ. 200 ಮೀ. 400 ಮೀ ಮತ್ತು 1500 ಮೀ. ವಿಭಾಗದಲ್ಲಿ) ಸ್ಪರ್ಧಿಸಿದ್ದರು.

ವೇದಾಂತ್​ ಅವರ ಈ ಸಾಧನೆಗೆ ತಂದೆ ಆರ್​. ಮಾಧವನ್​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ ಮಾಧವನ್ “ಮಗನ ಈ ಸಾಧನೆ ಹೆಮ್ಮೆಪಡುವಂತೆ ಮಾಡಿದೆ. ಆತನ ಮುಂದಿನ ಎಲ್ಲ ಪ್ರಯತ್ನಕ್ಕೂ ನನ್ನ ಬೆಂಬಲ ಸಾದಾ ಇರುತ್ತದೆ. ಇನ್ನೂ ದೊಡ್ಡ ಮಟ್ಟದ ಸಾಧನೆ ಮಾಡುವ ಮೂಲಕ ದೇಶದ ಕೀರ್ತಿ ಹೆಚ್ಚಿಸುವಂತೆ ಮಾಡಲಿ” ಎಂದು ಟ್ವೀಟ್​ ಮೂಲಕ ಹಾರೈಸಿದ್ದಾರೆ. ಜತೆಗೆ ಮಾಜಿ ‘ಭುವನ ಸುಂದರಿ’, ನಟಿ ಲಾರಾ ದತ್ತಾ ಅವರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದು ‘ಇದೊಂದು ಅಮೋಘ ಸಾಧನೆ. ಇದೇ ರೀತಿ ಸಾಧನೆ ಮಾಡಲು ನಿಮಗೆ ದೇವರು ಇನ್ನಷ್ಟು ಶಕ್ತಿ ನೀಡಲಿ’ ಎಂದು ಹೇಳಿದರು.

ಭಾರತದ ಭರವಸೆಯ ಈಜು ಪಟು

17 ವರ್ಷದ ವೇದಾಂತ್ ಮಾಧವನ್ ಅವರು ಭಾರತದ ಭರವಸೆಯ ಈಜು ಪಟುವಾಗಿ ಗುರುತಿಸಿಕೊಂಡಿದ್ದಾರೆ. 2022ರಲ್ಲಿ ಡೆನ್ಮಾರ್ಕ್‌ನ ಕೋಪನ್‌ ಹೇಗನ್‌ನಲ್ಲಿ ನಡೆದ ಡ್ಯಾನಿಶ್‌ ಓಪನ್ ಈಜುಕೂಟದಲ್ಲಿ 800 ಮೀಟರ್ಸ್‌ ಹಾಗೂ 1500 ಮೀಟರ್ಸ್ ಫ್ರೀಸ್ಟೈಲ್ ವಿಭಾಗದಲ್ಲಿ ಸ್ಪರ್ಧಿಸಿದ್ದ ವೇದಾಂತ್‌ ಮಾಧವನ್ ವೈಯಕ್ತಿಕ ಶ್ರೇಷ್ಠ ಸಾಧನೆಯೊಂದಿಗೆ ಚಿನ್ನ ಮತ್ತು ಬೆಳ್ಳಿ ಪದಕ ಜಯಿಸಿದ್ದರು. 800 ಮೀಟರ್ಸ್ ಗುರಿಯನ್ನು 8 ನಿಮಿಷ 17.28 ಸೆಕೆಂಡ್‌ಗಳಲ್ಲಿ ತಲುಪಿ ವಿಶೇಷ ದಾಖಲೆ ಬರೆದಿದ್ದರು.

ಇತ್ತೀಚೆಗೆ ನಡೆದಿದ್ದ ಖೇಲೋ ಇಂಡಿಯಾ ಯೂತ್ ಗೇಮ್ಸ್​ನಲ್ಲಿ ಮಹಾರಾಷ್ಟ್ರ ತಂಡದ ಪರ ಆಡಿದ್ದ ವೇದಾಂತ್ ಅವರು ಇಲ್ಲಿಯೂ 5 ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದರು. ಸದ್ಯ ಈಜಿನಲ್ಲಿ ಅಮೋಘ ಸಾಧನೆ ಮಾಡುತ್ತಿರುವ ಅವರು ಮುಂದಿನ ದಿನಗಳಲ್ಲಿ ಒಲಿಂಪಿಕ್ಸ್​ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದರೂ ಅಚ್ಚರಿಯಿಲ್ಲ.

Exit mobile version