ಬೆಂಗಳೂರು: ದಕ್ಷಿಣ ಆಫ್ರಿಕಾ ವಿರುದ್ಧ ವಿರಾಟ್ ಕೊಹ್ಲಿ ಬಾರಿಸಿದ ಅದ್ಭುತ ಶತಕದ (ಅಜೇಯ 101 ರನ್) ಬಗ್ಗೆ ಕೆಲವು ತಜ್ಞರು ಮತ್ತು ಅಭಿಮಾನಿಗಳು ವಿಸ್ಮಯಗೊಂಡಿದ್ದಾರೆ. ಅತ್ಯಂತ ಕಠಿಣ ಪಿಚ್ನಲ್ಲಿ ಅವರು ಬಾರಿಸಿರುವ ಮೂರಂಕಿ ಮೊತ್ತ ಇದುವರೆಗಿನ ಅತ್ಯುತ್ತಮ ಶತಕ ಎಂದು ಬಣ್ಣಿಸಿದ್ದಾರೆ. ಆದರೆ ಕೆಲವರು ಅವರ ಇನಿಂಗ್ಸ್ ನಿಧಾನವಾಗಿತ್ತು ಎಂದು ಟೀಕೆ ಮಾಡಿದ್ದಾರೆ. ಇನ್ನು ಕ್ರಿಕೆಟ್ ಆಟದ ಪರಿಸ್ಥಿತಿಯ ಬಗ್ಗೆ ಅರಿವಿಲ್ಲದವರು ಅವರನ್ನು ವೈಯಕ್ತಿಕ ದಾಖಲೆಗಳನ್ನು ಮಾಡುವ ಸ್ವಾರ್ಥಿ ಎಂದು ಕರೆದಿದ್ದರು. ಹೀಗಾಗಿ ಕೊಹ್ಲಿ ಶತಕದ ಬಳಿಕ ‘ಸ್ವಾರ್ಥಿ’ ಪದವು ಟ್ರೆಂಡ್ ಆಗಿತ್ತು. ಆದರೆ, ಭಾರತ ತಂಡದ ಮಾಜಿ ವೇಗದ ಬೌಲರ್ ವೆಂಕಟೇಶ್ ಪ್ರಸಾದ್ ಟೀಕಾಕಾರರಿಗೆ ಸಮರ್ಥ ಉತ್ತರ ಕೊಟ್ಟಿದ್ದಾರೆ. ಕೊಹ್ಲಿ ಸ್ವಾರ್ಥಿಯಲ್ಲ ಎಂಬುದನ್ನು ಬಗೆಬಗೆಯಾಗಿ ಬಣ್ಣಿಸಿ ಟ್ವೀಟ್ ಮಾಡಿದ್ದಾರೆ.
ಕೊಹ್ಲಿ ಅವರ ಆಕರ್ಷಕ ಶತಕದ ನೆರವಿನಿಂದ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 242 ರನ್ಗಳ ಭರ್ಜರಿ ಜಯ ದಾಖಲಿಸಿದೆ ಎಂಬುದಾಗಿಯೂ ಪ್ರಸಾದ್ ಹೇಳಿಕೆ ನೀಡಿದ್ದಾರೆ.
Hearing funny arguments about Virat Kohli being Selfish and obsessed with personal milestone.
— Venkatesh Prasad (@venkateshprasad) November 6, 2023
Yes Kohli is selfish, selfish enough to follow the dream of a billion people, selfish enough to strive for excellence even after achieving so much, selfish enough to set new benchmarks,… pic.twitter.com/l5RZRf7dNx
“ವಿರಾಟ್ ಕೊಹ್ಲಿ ಸ್ವಾರ್ಥಿ ಮತ್ತು ವೈಯಕ್ತಿಕ ಸಾಧನೆಗಳ ಗೀಳು ಹೊಂದಿದ್ದಾರೆ ಎಂಬ ತಮಾಷೆಯ ವಾದಗಳನ್ನು ಗಮನಿಸುತ್ತಿದ್ಧೇನೆ. ಹೌದು, ಕೊಹ್ಲಿ ಸ್ವಾರ್ಥಿ, ಶತಕೋಟಿ ಜನರ ಕನಸನ್ನು ಅನುಸರಿಸುವಷ್ಟು ಸ್ವಾರ್ಥಿ. ಹಲವು ಸಾಧನೆಗಳನ್ನು ಮಾಡಿದ ಬಳಿಕವೂ ಶ್ರೇಷ್ಠತೆಗಾಗಿ ಶ್ರಮಿಸುವಷ್ಟು ಸ್ವಾರ್ಥಿ, ಹೊಸ ಮಾನದಂಡಗಳನ್ನು ಸೃಷ್ಟಿಸುವಷ್ಟು ಸ್ವಾರ್ಥಿ, ತನ್ನ ತಂಡ ಗೆಲ್ಲುವುದನ್ನು ಖಚಿತಪಡಿಸಿಕೊಳ್ಳುವಷ್ಟು ಸ್ವಾರ್ಥಿ. ಹೌದು, ಕೊಹ್ಲಿ ಸ್ವಾರ್ಥಿ ಎಂದು ಪ್ರಸಾದ್ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ : Shakib Al Hasan : ಕ್ರೀಡಾ ಸ್ಫೂರ್ತಿ ಮರೆತ ಶಕಿಬ್ ವಿಶ್ವ ಕಪ್ ಟೂರ್ನಿಯಿಂದಲೇ ಔಟ್
ಕೊಹ್ಲಿ ಬಗ್ಗೆ ಹೇಳುವುದಾದರೆ, ಅವರು ವಿಶ್ವ ಕಪ್ನಲ್ಲಿ ಇದುವರೆಗೆ ಆಡಿರುವ ಏಳು ಪಂದ್ಯಗಳಲ್ಲಿ 523 ರನ್ ಗಳಿಸಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ವಿಶ್ವಕಪ್ನಲ್ಲಿ ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಶತಕಗಳನ್ನೂ ಬಾರಿಸಿದ್ದಾರೆ. ಆದಾಗ್ಯೂ, ಎರಡೂ ಶತಕಗಳಲ್ಲಿ, ಅವರು ಕಡಿಮೆ ಸ್ಟ್ರೈಕ್ ರೇಟ್ ಹೊಂದಿದ್ದರು. ಹೀಗಾಗಿ ಕ್ರಿಕೆಟ್ಅಭಿಮಾನಿಗಳು ಮತ್ತು ತಜ್ಞರು ಅವರನ್ನು ಟೀಕಿಸಿದ್ದರು.
ಹಾಗೆಂದು ಅಭಿಮಾನಿಗಳ ಕೋಪಕ್ಕೆ ಅರ್ಥವಿಲ್ಲ. ಏಕೆಂದರೆ ಕೊಹ್ಲಿ ಭಾರತ ತಂಡದ ಸ್ಕೋರ್ ಬೋರ್ಡ್ ಅನ್ನು ಬೆಳೆಸುತ್ತಲೇ ಇದ್ದರು ಹಾಗೂ ಜತೆಗಾರ ಬ್ಯಾಟರ್ಗೆ ಆಕ್ರಮಣಕಾರಿಯಾಗಿ ಆಡಲು ಅವಕಾಶ ಮಾಡಿಕೊಡುತ್ತಿದ್ದರು . ಹೀಗಾಗಿ ಕೊಹ್ಲಿ 100ರ ಸಮೀಪಕ್ಕೆ ಬಂದಾಗ ಭಾರತದ ನೆಟ್ ರನ್ ರೇಟ್ ಅಥವಾ ಆಟದ ಒಟ್ಟು ಗತಿಯ ಮೇಲೆ ಯಾವುದೇ ಪರಿಣಾಮ ಬೀರಿರಲಿಲ್ಲ.
100 ಕ್ಕಿಂತ ಶತಮಾನ ಮುಖ್ಯವೇ?
ಆಟಗಾರನಿಗೆ ಶತಕ ಮುಖ್ಯವೇ ಎಂಬ ಚರ್ಚೆ ಎಂದಿಗೂ ಕೊನೆಗೊಳ್ಳುವುದಿಲ್ಲ. ಆದರೆ ತಂಡದ ಗೆಲುವು ಯಾವಾಗಲೂ ಮುಖ್ಯವಾಗಿರುತ್ತದೆ. ತಂಡವು ಗೆದ್ದಾಗ ಶತಕದ ಸಾಧನೆಗೆ ಹೆಚ್ಚು ಬೆಲೆ. ಕೊಹ್ಲಿಯ ವಿಷಯದಲ್ಲಿ ತಂಡವು ಗೆಲ್ಲುತ್ತಿದೆ ಹೀಗಾಗಿ ಅವರು ಶತಕವೂ ತಂಡದ ಪಾಲಿಗೆ ಅಗತ್ಯವಾಗಿದೆ.