ಮುಂಬಯಿ : ಕ್ರಿಕೆಟ್ ವಿಚಾರಕ್ಕೆ ಬಂದಾಗ ಈಶಾನ್ಯ ರಾಜ್ಯಗಳು ದುರ್ಬಲವಾಗಿವೆ ಎಂಬುದಕ್ಕೆ ಮತ್ತೊಂದು ಸಾಕ್ಷಿ ದೊರಕಿದೆ. ಅಲ್ಲಿನ ರಾಜ್ಯಗಳ ಆಟಗಾರರು ಸ್ಪರ್ಧಾತ್ಮಕ ಕ್ರಿಕೆಟ್ನಲ್ಲಿ ಸಾಕಷ್ಟು ಬೆಳೆಯಬೇಕಾಗಿದೆ ಎಂಬುದಕ್ಕೂ ಇದು ಸೂಕ್ತ ಉದಾಹರಣೆ. ಪ್ರಸ್ತುತ ನಡೆಯುತ್ತಿರುವ 16 ವರ್ಷದೊಳಗಿನವರ ವಿಜಯ್ ಮರ್ಚೆಂಟ್ ಟ್ರೋಫಿಯಲ್ಲಿ ಸಿಕ್ಕಿಮ್ ತಂಡ ಕೇವಲ 6 ರನ್ಗಳಿಗೆ ಆಲ್ಔಟ್ ಆಗಿದ್ದು, ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಕಳಪೆ ದಾಖಲೆಯೊಂದು ಸೃಷ್ಟಿಯಾಗಿದೆ.
ಕೇವಲ 57 ಎಸೆತಗಳಲ್ಲಿ ಇನಿಂಗ್ಸ್ ಮುಕ್ತಾಯ ಕಂಡಿದೆ. ಸಿಕ್ಕಿಮ್ ತಂಡದ ಏಳು ಆಟಗಾರರು ಸೊನ್ನೆಗೆ ಔಟಾಗಿದ್ದಾರೆ. ಮಧ್ಯ ಪ್ರದೇಶದ ಬೌಲರ್ ಗಿರ್ರಾಜ್ ಶರ್ಮ 1 ರನ್ಗೆ ಐದು ವಿಕೆಟ್ ಕಬಳಿಸಿದರೆ ಅಲೈಫ್ ಹಸನ್ 5 ರನ್ ನೀಡಿ 4 ವಿಕೆಟ್ ಕಬಳಿಸಿದ್ದಾರೆ. ಈ ಸಾಧನೆಯೊಂದಿಗೆ ಮಧ್ಯ ಪ್ರದೇಶ ತಂಡ ಇನಿಂಗ್ಸ್ ಹಾಗೂ 365 ರನ್ಗಳ ವಿಜಯ ಸಾಧಿಸಿದೆ.
ಮೊದಲು ಬ್ಯಾಟ್ ಮಾಡಿದ್ದ ಮಧ್ಯ ಪ್ರದೇಶ ತಂಡ 8 ವಿಕೆಟ್ಗೆ 414 ರನ್ ಬಾರಿಸಿ ಡಿಕ್ಲೇರ್ ಘೋಷಿಸಿತ್ತು. ಪ್ರತಿಯಾಗಿ ಬ್ಯಾಟ್ ಮಾಡಿದ ಸಿಕ್ಕಿಮ್ ತಂಡ ಮೊದಲ ಇನಿಂಗ್ಸ್ನಲ್ಲಿ 43 ಬಾರಿಸಿ ಆಲ್ಔಟ್ ಆಯಿ ಫಾಲೋಆನ್ ಹೇರಿಸಿಕೊಂಡಿತು. ಎರಡನೇ ಇನಿಂಗ್ಸ್ನಲ್ಲಿ ಕೇವಲ 6 ರನ್ಗಳಿಗೆ ಆಲ್ಔಟ್ ಅಗಿದೆ.
ಇದನ್ನೂ ಓದಿ | BBL 2022 | ಕೇವಲ 15 ರನ್ಗೆ ಸರ್ವಪತನ ಕಂಡು ಕೆಟ್ಟ ದಾಖಲೆ ಬರೆದ ಸಿಡ್ನಿ ಥಂಡರ್!