ಚಂಡೀಗಢ: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿಯ) ತಂಡದ ಉದಯೋನ್ಮುಖ ವೇಗಿ ವಿಜಯಕುಮಾರ್ ವೈಶಾಕ್ ಚಂಡೀಗಢ ವಿರುದ್ಧ ನಡೆಯುತ್ತಿರುವ ರಣಜಿ ಟ್ರೋಫಿ (Ranji Trophy) ಗ್ರೂಪ್ ಸಿ ಪಂದ್ಯದಲ್ಲಿ ಕರ್ನಾಟಕ ತಂಡದ ಪರ ಬ್ಯಾಟಿಂಗ್ ಪರಾಕ್ರಮವನ್ನು ಪ್ರದರ್ಶಿಸಿದ್ದಾರೆ. ನಿಖರತೆ ಮತ್ತು ಕೌಶಲ ಭರಿತವಾದ ಅಜೇಯ ಶತಕ ಬಾರಿಸಿದ್ದಾರೆ. ಈ ಮೂಲಕ ಕರ್ನಾಟಕ ತಂಡವನ್ನು ಉತ್ತಮ ಸ್ಥಿತಿಗೆ ಕೊಂಡೊಯ್ದಿದ್ದಾರೆ. ಈ ಶತಕದೊಂದಿಗೆ 27 ವರ್ಷದ ಆಟಗಾರ ದೇಶೀಯ ಕ್ರಿಕೆಟ್ನಲ್ಲಿ ತಮ್ಮ ಬಹುಮುಖ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಅವರು 147 ಎಸೆತಗಳಲ್ಲಿ 103 ರನ್ ಗಳಿಸಿ ಅಜೇಯರಾಗಿ ಉಳಿದರು.
Vyshak Vijaykumar’s season as a batter gets better with his maiden first class century #RanjiTrophy #KarvsChd pic.twitter.com/GVMKSK9I3n
— Manuja (@manujaveerappa) February 18, 2024
ರಣಜಿ ಟ್ರೋಫಿ, ಕ್ರಿಕೆಟಿಗರಿಗೆ ತಮ್ಮ ಕೌಶಲ್ಯಗಳನ್ನು ಉತ್ತಮಗೊಳಿಸಲು ಮತ್ತು ರಾಷ್ಟ್ರೀಯ ತಂಡದಲ್ಲಿ ಅವಕಾಶವನ್ನು ಸೃಷ್ಟಿಸಿಕೊಡುತ್ತದೆ. ವಿಜಯ್ ಕುಮಾರ್ ಅವರಂತಹ ಐಪಿಎಲ್ ಆಟಗಾರರಿಗೆ ಇದು ಟಿ 20 ಕ್ರಿಕೆಟ್ನ ಹುಚ್ಚು ವೇಗದಿಂದ ಸಾಂಪ್ರದಾಯಿಕ ಸ್ವರೂಪದಲ್ಲಿ ಮರಳಲು ಅವಕಾಶ ಕೊಡುತ್ತದೆ. ಆಟದಲ್ಲಿನ ಸಮತೋಲನ ಮತ್ತು ಸ್ಥಿರತೆ ಹೆಚ್ಚಿಸಲು ಸಹಾಯ ಮಾಡುತ್ತದೆ.
ಕೇವಲ 136 ಎಸೆತಗಳಲ್ಲಿ ಶತಕ ಸಾಧಿಸಿದ ವೈಶಾಕ್. ಕರ್ನಾಟಕ ಪರ ಪ್ರಮುಖ ಬೌಲರ್ ಆಗಿಯೂ ಅಗತ್ಯ ಬ್ಯಾಟರ್ ಆಗಿಯೂ ಕಾರ್ಯನಿರ್ವಹಿಸಬಲ್ಲ ತಮ್ಮ ಸಾಮರ್ಥ್ಯವನ್ನು ಎತ್ತಿ ತೋರಿಸಿದರು. ಹತ್ತು ಬೌಂಡರಿಗಳು ಮತ್ತು ಎರಡು ಅತ್ಯುನ್ನತ ಸಿಕ್ಸರ್ಗಳಿಂದ ಕೂಡಿದ ಅವರ ಇನ್ನಿಂಗ್ಸ್ ಕರ್ನಾಟಕದ ಇನ್ನಿಂಗ್ಸ್ ಅನ್ನು ಬಲಿಷ್ಠಗೊಳಿಸಿತು. ಒತ್ತಡದ ನಡುವೆಯೂ ಅವರು ಶತಕ ಬಾರಿಸಿ ಮಿಂಚಿದ್ದು ಇನಿಂಗ್ಸ್ನ ಪ್ರಮುಖ ಆಕರ್ಷಣೆಯಾಯಿತು.
ವೈಶಾಕ್ ಅವರ ಕೊಡುಗೆಯೊಂದಿಗೆ ಕರ್ನಾಟಕವು ತನ್ನ ಇನ್ನಿಂಗ್ಸ್ ಅನ್ನು 5 ವಿಕೆಟ್ ನಷ್ಟಕ್ಕೆ 563ಕ್ಕೆ ಡಿಕ್ಲೇರ್ ಮಾಡಿಕೊಂಡಿತು.
ರಣಜಿ ಟ್ರೋಫಿ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಚೇಸ್ ಮಾಡಿ ದಾಖಲೆ ಬರೆದ ರೈಲ್ವೇಸ್
ಬೆಂಗಳೂರು: ರಣಜಿ ಟ್ರೋಫಿಯಲ್ಲಿ ರೈಲ್ವೇಸ್ ತಂಡ ಅತಿ ಹೆಚ್ಚು ರನ್ ಚೇಸ್ ಮಾಡುವ ಮೂಲಕ ಇತಿಹಾಸ ನಿರ್ಮಿಸಿದೆ. ಅಗರ್ತಲಾದ ಮಹಾರಾಜ ಬೀರ್ ಬಿಕ್ರಮ್ ಕಾಲೇಜು ಕ್ರೀಡಾಂಗಣದಲ್ಲಿ ನಡೆದ ಋತುವಿನ ಕೊನೆಯ ಲೀಗ್ ಪಂದ್ಯದಲ್ಲಿ ತ್ರಿಪುರಾ ವಿರುದ್ಧ ಐದು ವಿಕೆಟ್ ಗಳ ಸುಲಭ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ತಂಡವು ರಣಜಿ ಟ್ರೋಫಿಯ ಇತಿಹಾಸ ಪುಸ್ತಕ ಸೇರಿಕೊಂಡಿತು.
ಇದನ್ನೂ ಓದಿ : IND vs ENG: ಪಿಚ್ ಯಾವುದೇ ಆಗಿರಲಿ, ನಮ್ಮ ತಂಡಕ್ಕೆ ಗೆಲ್ಲುವ ಸಾಮರ್ಥ್ಯವಿದೆ ಎಂದ ರೋಹಿತ್
ಮೊದಲು ಬ್ಯಾಟಿಂಗ್ ಮಾಡಿದ ತ್ರಿಪುರಾ 149 ರನ್ಗಳಿಗೆ ಆಲೌಟ್ ಆಯಿತು. ಆದಾಗ್ಯೂ, ಅವರ ಬೌಲರ್ಗಳು ಅದ್ಭುತ ಕೆಲಸ ಮಾಡಿದರು, ತಂಡವು 44 ರನ್ಗಳ ಮುನ್ನಡೆ ಸಾಧಿಸಲು ಸಹಾಯ ಮಾಡಿದರು. ಎರಡನೇ ಇನ್ನಿಂಗ್ಸ್ ನಲ್ಲಿ ತ್ರಿಪುರಾ 333 ರನ್ ಗಳಿಸಿ 378 ರನ್ ಗಳ ಗುರಿ ನೀಡಿತ್ತು. ನಂತರ ನಡೆದದ್ದು ಬ್ಯಾಟಿಂಗ್ ಮಾಸ್ಟರ್ ಕ್ಲಾಸ್ ಪ್ರದರ್ರಶನ. ರೈಲ್ವೇಸ್ ತ್ರಿಪುರಾವನ್ನು ದಿಗ್ಭ್ರಮೆಗೊಳಿಸಿ ಗೆಲುವು ಸಾಧಿಸಿತು.
ರೈಲ್ವೇಸ್ ಚೇಸಿಂಗ್ ಆರಂಭವು ಪ್ರಬಲವಾಗಿರಲಿಲ್ಲ. ಸಂದರ್ಶಕರು 3 ವಿಕೆಟ್ಗೆ 31ರನ್ ಗಳಿಸಿ ತೀವ್ರ ತೊಂದರೆಗೆ ಬಿತ್ತು. ಆದಾಗ್ಯೂ, ಆರಂಭಿಕ ಆಟಗಾರ ಪ್ರಥಮ್ ಸಿಂಗ್ 169* ರನ್ ಗಳಿಸುವ ಮೂಲಕ ಪರಿಸ್ಥಿತಿ ಬದಲಾಯಿಸಿದರು. ಮೊಹಮ್ಮದ್ ಸೈಫ್ 106 ರನ್ ಗಳಿಸುವ ಮೂಲಕ ಅವರಿಗೆ ಉತ್ತಮ ಬೆಂಬಲ ನೀಡಿದರು. ಅವರು ಔಟಾದ ನಂತರ ಅರಿಂದಮ್ ಘೋಷ್ 40 ರನ್ ಗಳಿಸಿದರು. ಇವರೆಲ್ಲರ ಪ್ರಯತ್ನದ ನೆರವಿನಿಂದ ರೈಲ್ವೇಸ್ 378 ರನ್ಗಳನ್ನು ಬೆನ್ನಟ್ಟಿತು ಹಾಗೂ ಇತಿಹಾಸದ ಪುಸ್ತಕಗಳಲ್ಲಿ ತಮ್ಮ ಹೆಸರನ್ನು ಬರೆದಿತು.