ಬರ್ಮಿಂಗ್ಹಮ್ : ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಮಂಗಳವಾರ ಮೂರನೇ ಪದಕ ಲಭಿಸಿದೆ. ಇದು ಬೆಳ್ಳಿಯ ಪದಕ. ಗೆದ್ದುಕೊಟ್ಟವರು ೯೬ ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ವಿಕಾಸ್ ಠಾಕೂರ್. ಒಟ್ಟಾರೆ ೩೪೬ ಕೆ.ಜಿ ಭಾರ ಎತ್ತಿದೆ ಅವರು ಎರಡನೇ ಸ್ಥಾನ ಪಡೆದು ಭಾರತಕ್ಕೆ ೧೨ನೇ ಪದಕ ತಂದುಕೊಟ್ಟರು.
ಸ್ನ್ಯಾಚ್ ವಿಭಾಗದಲ್ಲಿ ೧೫೫ ಕೆ.ಜಿ ಭಾರ ಎತ್ತಿರುವ ವಿಕಾಸ್ ಠಾಕೂರ್ ಅವರು ಕ್ಲೀನ್ ಆಂಡ್ ಜರ್ಕ್ ವಿಭಾಗದಲ್ಲಿ ೧೯೧ ಕೆ.ಜಿ ಎತ್ತುವ ಮೂಲಕ ಬೆಳ್ಳಿಯ ಪದಕ ತಮ್ಮದಾಗಿಸಿಕೊಂಡರು. ಇದರೊಂದಿಗೆ ಭಾರತದ ಒಟ್ಟಾರೆಯ ಪದಕಗಳ ಸಂಖ್ಯೆ ೧೨ಕ್ಕೆ ಏರಿಕೆಯಾಗಿದೆ. ಈ ಇದರಲ್ಲಿ ಐದು ಬಂಗಾರ, ನಾಲ್ಕು ಬೆಳ್ಳಿ ಹಾಗೂ ಮೂರು ಕಂಚಿನ ಪದಕವಿದೆ. ಅಂತೆಯೇ ವೇಟ್‌ಲಿಫ್ಟಿಂಗ್ ವಿಭಾಗದಿಂದ ದೊರಕಿದ ಎಂಟನೇ ಪದಕ ಇದಾಗಿದೆ.
ವಿಕಾಸ್ ಠಾಕೂರ್‌ಗೆ ಕಾಮನ್ವೆಲ್ತ್ ಗೆಮ್ಸ್‌ನಲ್ಲಿ ಇದು ಮೂರನೇ ಪದಕ. ೨೦೧೪ರ ಗ್ಲಾಸ್ಗೊ ಗೆಮ್ಸ್‌ನಲ್ಲಿ ಬೆಳ್ಳಿ ಗೆದ್ದಿದ್ದ ಅವರು ೨೦೧೮ರ ಗೋಲ್ಡ್ ಕೋಸ್ಟ್‌ನಲ್ಲಿ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದರು. ಇದೀಗ ಮತ್ತೆ ರಜತಪದಕದ ಹಾರವನ್ನು ಪಡೆದುಕೊಂಡಿದ್ದಾರೆ.
ವಿಕಾಸ್ ಕುಮಾರ್ ಸ್ನ್ಯಾಚ್ ವಿಭಾಗದಲ್ಲಿ ೧೫೫ ಕೆ.ಜಿ ಭಾರ ಎತ್ತಿದ್ದರೆ, ಕ್ಲೀನ್ ಆಂಡ್ ಜರ್ಕ್ ವಿಭಾಗದಲ್ಲಿ ೧೯೯ ಕೆ.ಜಿ ಭಾರವನ್ನು ಎತ್ತಿ ಹಿಡಿಯುವ ಮೂಲಕ ತಮ್ಮ ಕಾಮನ್ವೆಲ್ತ್‌ನಲ್ಲಿ ಪದಕ ಗೆಲ್ಲುವ ಸಾಧನೆ ಮುಂದುವರಿಸಿದರು.