Site icon Vistara News

ಅಕ್ರಮ ಸಂಬಂಧಗಳನ್ನು ಮುಚ್ಚಿಡಲು 95 ಕೋಟಿ ರೂಪಾಯಿ ಖರ್ಚು ಮಾಡಿದ WWE ಸಂಸ್ಥಾಪಕ

wwe

ನ್ಯೂಯಾರ್ಕ್‌: ವಿನ್ಸ್‌ ಮ್ಯಾಕ್‌ಮೆಹೋನ್‌ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ವ್ಯಕ್ತಿ. WWE ಎಂಬ ಅತ್ಯಾಕರ್ಷಕ ಸ್ಪರ್ಧೆಯನ್ನು ಹುಟ್ಟು ಹಾಕಿ, ತಾನೂ ಪಾಲ್ಗೊಂಡು ದೊಡ್ಡ ಮಟ್ಟದ ಹೆಸರು ಮಾಡಿಕೊಂಡವರು. ಅವರೀಗ ಲೈಂಗಿಕ ದೌರ್ಜನ್ಯದ ಕೇಸೊಂದರಲ್ಲಿ ಸಿಲುಕುವ ಸಾಧ್ಯತೆಗಳಿವೆ. ನಾಲ್ಕು ಮಹಿಳೆಯರ ಮೇಲೆ ಅವರು ದೌರ್ಜನ್ಯ ಎಸಗಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ.

ಅವರು ಡಬ್ಲ್ಯುಡಬ್ಲ್ಯುಇನಲ್ಲಿ ಪಾಲ್ಗೊಂಡಿರುವ ಮಹಿಳಾ ಸ್ಪರ್ಧಿಗಳ ಮೇಲೆಯೇ ದೌರ್ಜನ್ಯ ಎಸಗಿದ್ದು, ಅವರೆಲ್ಲರೂ ಬಾಯಿ ಬಿಡದಂತೆ ಕಳೆದ ೧೬ ವರ್ಷಗಳಿಂದ ೯೫ ಕೋಟಿ ರೂಪಾಯಿ (೧೨ ಲಕ್ಷ ಡಾಲರ್‌) ಕೊಟ್ಟಿದ್ದಾರೆ ಎಂದು ವಾಲ್‌ಸ್ಟ್ರೀಟ್‌ ಜರ್ನಲ್‌ ವರದಿ ಮಾಡಿದೆ.

ಮ್ಯಾಕ್‌ಮೆಹೋನ್‌ WWE ಮುಖ್ಯಸ್ಥರಾಗಿದ್ದರು. ಜತೆಗೆ ಪ್ರದರ್ಶನ ನಡೆಸಿಕೊಡುತ್ತಿದ್ದರು. ಈ ವೇಳೆ ಮಹಿಳಾ ರಸ್ಲರ್‌ಗಳ ಜತೆಯೇ ಲೈಂಗಿಕ ಸಂಬಂಧ ಹೊಂದಿದ್ದರು. ಅದರಲ್ಲಿ ಕೆಲವರು ಲೈಂಗಿಕ ಸಂಬಂಧವನ್ನು ನಿರಾಕರಿಸಿದ್ದರು. ಈ ವೇಳೆ ಯಾರಿಗೂ ಹೇಳದಂತೆ ಇರಲು ಹಣ ಕೊಟ್ಟಿದ್ದರು ಎಂದು ವರದಿಯಾಗಿದೆ.

ಇದನ್ನೂ ಓದಿ: ಥೈಲ್ಯಾಂಡ್‌ನಲ್ಲಿ ಬಂಗಾರದ ಪದಕ ಗೆದ್ದ ವಿಜಯಪುರದ ಕುಸ್ತಿಪಟು

Exit mobile version