ಬೆಲ್‌ಗ್ರೇಡ್: ಸೆರ್ಬಿಯಾದ ಬೆಲ್‌ಗ್ರೇಡ್‌ನಲ್ಲಿ ನಡೆಯುತ್ತಿರುವ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ (World Wrestling Championship) ಭಾರತದ ಕುಸ್ತಿಪಟು ವಿನೇಶ್ ಫೋಗಾಟ್ (Vinesh Phogat) ಅವರು ಕಂಚಿನ ಪದಕ ಗೆದ್ದಿದ್ದಾರೆ. ಆ ಮೂಲಕ ಎರಡು ವರ್ಲ್ಡ್ ಚಾಂಪಿಯನ್‌ಷಿಪ್‌ಗಳಲ್ಲಿ ಪದಕ ಗೆದ್ದ ಭಾರತದ ಮೊದಲ ಕುಸ್ತಿಪಟು ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ.
೫೩ ಕೆಜಿ ವಿಭಾಗದ ಪ್ಲೇ ಆಫ್‌ನಲ್ಲಿ ಸ್ವೀಡನ್‌ನ ಜೊನ್ನಾ ಮಾಲ್ಮ್‌ಗ್ರೆನೋಫ್ ಅವರನ್ನು ೮-೦ ಅಂತರದಿಂದ ಸೋಲಿಸಿ ಫೋಗಾಟ್ ಅವರು ಕಂಚಿನ ಪದಕಕ್ಕೆ ಕೊರಳೊಡಿದರು. ವಿನೇಶ್ ಫೋಗಾಟ್ ಅವರ ಮೊಣಕಾಲಿಗೆ ಗಾಯವಾದ ಕಾರಣ ಆತಂಕ ಎದುರಾಗಿತ್ತು. ಆದರೆ, ಗಾಯವನ್ನೂ ಮೆಟ್ಟಿ ಅವರು ಗೆಲುವು ಸಾಧಿಸಿದರು.
ದೇಶದ ಮಹಿಳಾ ಕುಸ್ತಿಪಟುಗಳಲ್ಲಿ ಅಗ್ರರಾಗಿರುವ ವಿನೇಶ್ ಫೋಗಾಟ್, ಏಷ್ಯನ್ ಗೇಮ್ಸ್ ಹಾಗೂ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಕುಸ್ತಿಪಟು ಎನಿಸಿದ್ದಾರೆ. ಈಗ ಅವರ ದಾಖಲೆಯ ಸಾಲಿಗೆ ವರ್ಲ್ಡ್ ಕುಸ್ತಿ ಚಾಂಪಿಯನ್‌ಷಿಪ್ ಪದಕ ಕೂಡ ಸೇರಿದೆ.
ಇದನ್ನೂ ಓದಿ | CWG- 2022 | ಕಾಮನ್ವೆಲ್ತ್‌ನಲ್ಲಿ ಬಂಗಾರದ ಹ್ಯಾಟ್ರಿಕ್ ಸಾಧನೆ ಮಾಡಿದ ವಿನೇಶ್ ಫೋಗಾಟ್