ಕರಾಚಿ: ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದ ಪಾಕಿಸ್ತಾನದ ಜಾವೆಲಿನ್ ಎಸೆತಗಾರ ಅರ್ಷದ್ ನದೀಮ್ಗೆ(Arshad Nadeem) ಅವರ ಮಾವ(ಪತ್ನಿಯ ತಂದೆ) ಉಡುಗೊರೆಯಾಗಿ ಎಮ್ಮೆಯೊಂದನ್ನು ನೀಡಿದ್ದರು. ಇದೀಗ ಮಾವ ನೀಡಿದ ಈ ಉಡುಗೊರೆಯ ಬಗ್ಗೆ ಅರ್ಷದ್ ಹಾಸ್ಯ ಚಟಾಕಿ ಹಾರಿಸಿದ್ದಾರೆ. ಈ ವಿಡಿಯೊ ವೈರಲ್(Viral News) ಆಗಿದೆ.
ಪಾಕಿಸ್ತಾನಿ ಮಾಧ್ಯಮ ಸಂದರ್ಶನದಲ್ಲಿ ಪಾಲ್ಗೊಂಡಿದ್ದ ವೇಳೆ ನದೀಮ್ಗೆ ಸಂದರ್ಶಕ, ಮಾವ ಎಮ್ಮೆಯನ್ನು ಉಡುಗೊರೆಯಾಗಿ ನೀಡಿದ್ದ ಬಗ್ಗೆ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಈ ವೇಳೆ ನಗುತ್ತಲೇ ಉತ್ತರಿಸಿದ ನದೀಮ್ ಮಾವ ಎಮ್ಮೆಯನ್ನು ನೀಡುವ ಬದಲು 6 ರಿಂದ 6 ಎಕ್ರೆ ಜಮೀನ್ ನೀಡುತ್ತಿದ್ದರೆ ಉತ್ತಮವಾಗಿರುತ್ತಿತ್ತು. ನನ್ನ ಮಾವ ತುಂಬಾ ಶ್ರೀಮಂತ ಹಾಗಾಗಿ ಎಮ್ಮೆ ನೀಡಿದ್ದಾರೆ ಎಂದು ಹೇಳಿ ಹಾಸ್ಯ ಚಟಾಕಿ ಹಾರಿಸಿದ್ದಾರೆ. ನದೀಮ್ ಪ್ರತಿಕ್ರಿಯೆ ಕೇಳಿ ಸಂದರ್ಶಕ ಕೂಡ ಜೋರಾಗಿ ನಕ್ಕಿದ್ದಾನೆ. ನದೀಮ್ ಮಾವನ ಬಗ್ಗೆ ಹಾಸ್ಯ ಮಾಡುವ ವೇಳೆ ಪತ್ನಿಯೂ ಜತೆಗಿದ್ದರು.
ಒಲಿಂಪಿಕ್ಸ್ ಸಾಧನೆಗಾಗಿ ಅರ್ಷದ್ಗೆ ಅವರ ಪತ್ನಿಯ ತಂದೆ(ಮಾವ) ಮಹಮ್ಮದ್ ನವಾಜ್ ಅವರು ಎಮ್ಮೆಯನ್ನು ಅಳಿಯನಿಗೆ ಉಡುಗೊರೆಯಾಗಿ ನೀಡಿದ್ದರು. ಈ ಬಗ್ಗೆ ಮಾತನಾಡಿದ್ದ ಮಹಮ್ಮದ್ ನವಾಜ್, “ನಮ್ಮ ಗ್ರಾಮದಲ್ಲಿ ಎಮ್ಮೆಯನ್ನು ಉಡುಗೊರೆಯಾಗಿ ನೀಡುವುದು ಶ್ರೇಷ್ಠ ಗೌರವವಾಗಿದೆ” ಎಂದು ಹೇಳಿದ್ದರು.
ಚಿನ್ನ ಗೆದ್ದ ನದೀಮ್ಗೆ ಪಾಕಿಸ್ತಾನ ಪ್ರಾಂತ್ಯದ ಪಂಜಾಬ್ ಮುಖ್ಯಮಂತ್ರಿ ಮರ್ಯಮ್ ನವಾಜ್ 10 ಕೋಟಿ ರೂ., ಸಿಂಧ್ ಸರ್ಕಾರ ಐದು ಕೋಟಿ ರೂ., ವಿಶ್ವ ಅಥ್ಲೀಟ್ ಫೆಡರೇಶನ್ ಒಂದು ಕೋಟಿ 40 ಲಕ್ಷ ಬಹುಮಾನ ಘೋಷಿಸಿದ್ದು, ಸಿಂಧ್ ಗವರ್ನರ್ ಕಮ್ರಾನ್ ತೆಸ್ಸೋರಿ, ಕ್ರಿಕೆಟಿಗ ಅಹ್ಮದ್ ಶೆಹಜಾದ್ ಮತ್ತು ಓರ್ಷ ಗಾಯಕ 30 ಲಕ್ಷಗಳನ್ನು ನೀಡಿದ್ದಾರೆ.
ಇದನ್ನೂ ಓದಿ Arshad Nadeem : ಲಷ್ಕರ್ ಉಗ್ರನ ಜತೆ ಕಾಣಿಸಿಕೊಂಡ ಪಾಕಿಸ್ತಾನದ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಅರ್ಷದ್ ನದೀಮ್!
ಪಾಕಿಸ್ತಾನದ ಪಂಜಾಬ್‌ನಲ್ಲಿರುವ ಮಿಯಾನ್ ಚಾನುವಿನಲ್ಲಿನ ಬಡ ಪಂಜಾಬಿ ಕುಟುಂಬದಲ್ಲಿ ಜನಿಸಿದ ಅರ್ಷದ್ ನದೀಮ್, ಇಂದು ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಬೇಕಾದರೆ ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ತಂದೆ ಮುಹಮ್ಮದ್ ಅಶ್ರಫ್ ಗಾರೆ ಮೇಸ್ತ್ರಿ ಆಗಿದ್ದ ಕಾರಣ, ಕುಟುಂಬಕ್ಕೆ ನೆರವಾಗುವ ನಿಟ್ಟಿನಲ್ಲಿ ಅರ್ಷದ್ ನದೀಮ್ ಕೂಡ ತಂದೆಯ ಜತೆ ಗಾರೆ ಕೆಲಸವನ್ನು ಮಾಡಿದ್ದರು. ಇದರೆ ಜತೆಗೆ ಕ್ರೀಡೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.
ಯುನೈಟೈಡ್ ನೇಷನ್ ಪಟ್ಟಿಯಲ್ಲಿ ಮೋಸ್ಟ್ ವಾಟೆಂಡ್ ಉಗ್ರ ಎಂದು ಗುರುತಿಸಲ್ಪಟ್ಟ ಲಷ್ಕರ್ ಇ ತೊಯ್ಬಾದ ಹರೀಸ್ ಧಾರ್ ಜತೆ ಅರ್ಷದ್ ನದೀಮ್ ಕಾಣಿಸಿಕೊಂಡದ್ದು ಜಾಗತಿಕ ಮಟ್ಟದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಪ್ಯಾರಿಸ್ನಿಂದ ಲಾಹೋರ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ನದೀಮ್ ಅವರಿಗೆ ಭವ್ಯ ಸ್ವಾಗತ ದೊರಕಿತ್ತು. ಅಲ್ಲಿನ ಸರ್ಕಾರವು ಅವರಿಗೆ ವಿಜಯ ಮೆರವಣಿಗೆಯನ್ನು ಸಹ ಆಯೋಜಿಸಿತ್ತು. ಇದಲ್ಲದೆ, ನದೀಮ್ ಅವರು ಪಾಕಿಸ್ತಾನದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಯನ್ನೂ ಪಡೆದಿದ್ದರು. ಇದರ ಬೆನ್ನಲ್ಲೇ ಲಷ್ಕರ್ ನಾಯಕನೊಂದಿಗೆ ಕಾಣಿಸಿಕೊಂಡಿರುವುದು ವಿವಾದಕ್ಕೆ ಕಾರಣವಾಗಿತ್ತು.