ಲಂಡನ್: ಕೃತಕ ಬುದ್ಧಿಮತ್ತೆ ತಂತ್ರಜ್ಞಾನಕ್ಕೆ (Artificial Intelligence) ಜಗತ್ತೇ ತೆರೆದುಕೊಳ್ಳುತ್ತಿದೆ. ಅದರಲ್ಲೂ, ಕೃತಕ ಬುದ್ಧಿಮತ್ತೆ ಆಧಾರಿತ ಚಾಟ್‌ಜಿಪಿಟಿಯಂತಹ ಚಾಟ್‌ಬಾಟ್‌ಗಳು (ChatBot) ಪ್ರಬಂಧ ಬರೆಯುವುದರಿಂದ ಹಿಡಿದು, ಕೋಡ್ ರಚನೆವರೆಗೆ ಛಾಪು ಮೂಡಿಸುತ್ತಿವೆ. ಆಧುನಿಕ ಯುಗದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಪ್ರಾಮುಖ್ಯತೆಯನ್ನು ಇದು ಸಾರುತ್ತಿದೆ. ಇದೀಗ ಈ ತಂತ್ರಜ್ಞಾನವನ್ನು ಇಂಗ್ಲೆಂಡ್ ಮಹಿಳಾ ಕ್ರಿಕೆಟ್(England women’s cricket team) ತಂಡವೂ ಇದರ ಲಾಭ ಪಡೆದಿದೆ.
ಆಡುವ ಹನ್ನೊಂದರ ಬಳಗವನ್ನು ಆರಿಸಲು ಕೃತಕ ಬುದ್ದಿಮತ್ತೆಯನ್ನು (ಎಐ) ಬಳಸುತ್ತಿರುವುದಾಗಿ ತಂಡದ ಮುಖ್ಯ ಕೋಚ್ ಜಾನ್ ಲೆವಿಸ್ ಬಹಿರಂಗಪಡಿಸಿದ್ದಾರೆ. ತಂತ್ರಜ್ಞಾನವು ಬಲಿಷ್ಠ ತಂಡದ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿ ನಿರ್ಣಾಯಕ ಅಭಿಪ್ರಾಯಗಳನ್ನು ನೀಡಿತು ಮತ್ತು ಆಸ್ಟ್ರೆಲಿಯಾ ವಿರುದ್ಧದ ಟಿ20 ಸರಣಿಯನ್ನು ಗೆಲ್ಲಲು ಇದು ಸಹಾಯ ಮಾಡಿತು ಎಂದು ಅವರು ತಿಳಿಸಿದ್ದಾರೆ.
ಲಂಡನ್ ಮೂಲದ ‘ಪಿಎಸ್ಐ’ ಕಂಪನಿ ತಯಾರಿಸುವ ತಂತ್ರಜ್ಞಾನವನ್ನು ಬಳಸಿಕೊಂಡು ಈ ಪ್ರಯೋಗ ಮಾಡಲಾಯಿತು(Viral News) ಎಂದು ಲೆವಿಸ್ ತಿಳಿಸಿದ್ದಾರೆ. ಉತ್ತಮ ಫಾಮ್ರ್ನಲ್ಲಿರುವ ಇಬ್ಬರು ಆಟಗಾರ್ತಿಯರ ಪೈಕಿ ಒಬ್ಬರನ್ನು ಮಾತ್ರ ಆರಿಸುವ ಸಂಕಷ್ಟದ ಸಮಯದಲ್ಲಿ ಎಐ ನಮಗೆ ಯಶಸ್ವಿಯಾಗಿ ಸಹಾಯ ಮಾಡಿದೆ ಎಂದು ಅವರು ಹೇಳಿಕೊಂಡಿದ್ದಾರೆ.
England Women’s Cricket Coach Using AI To Pick Great Teamhttps://t.co/Vxefzsdg9y#cricketchallenge #cricket #cricketwithfahad #cricketfansclub #CricketNation #england #English #englandcricket #EnglandCricketTeam #englandcricketer #AI pic.twitter.com/hUuv0wSKFc
— ZartashWrites (@MalikAhmad309) May 4, 2024
ಕೃತಕ ಬುದ್ಧಿಮತ್ತೆ ಕೌಶಲ ಅಭಿವೃದ್ಧಿಯಲ್ಲಿ ಯಾವ ದೇಶಗಳು ಎಷ್ಟು ಪ್ರಗತಿ ಸಾಧಿಸಿವೆ ಎಂಬ ಕುರಿತು ಅಮೆರಿಕದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯವು ಇತ್ತೀಚೆಗೆ ಎಐ ಇಂಡೆಕ್ಸ್ ವರದಿ (AI Index Report 2023) ಪ್ರಕಟಿಸಿತ್ತು. ಜಾಗತಿಕವಾಗಿ ಕೃತಕ ಬುದ್ಧಿಮತ್ತೆ ಕ್ರಾಂತಿ ಸೃಷ್ಟಿಮಾಡುವಲ್ಲಿ ಭಾರತದ ಪಾತ್ರ ಮಹತ್ವದ್ದಾಗಿದೆ ಎಂದೂ ವರದಿಯಲ್ಲಿ ಉಲ್ಲೇಖಿಸಿರುವುದು ಸಕಾರಾತ್ಮಕ ಸಂಗತಿಯಾಗಿದೆ.
ಇದನ್ನೂ ಓದಿ IPL 2024: ಇಂದು ಐಪಿಎಲ್ನಲ್ಲಿ ಡಬಲ್ ಹೆಡರ್ ಪಂದ್ಯ; ಮೊದಲ ಪಂದ್ಯ ಯಾವುದು?
2022ರಲ್ಲಿ ಜಗತ್ತಿನಲ್ಲಿ ಮೂರು ರಾಷ್ಟ್ರಗಳು ಕೃತಕ ಬುದ್ಧಿಮತ್ತೆ ಕೌಶಲ ವೃದ್ಧಿಯಲ್ಲಿ ಅಗ್ರ ಸ್ಥಾನ ಪಡೆದಿವೆ. ಭಾರತವು 3.2 ರೇಟಿಂಗ್‌ನೊಂದಿಗೆ ಅಗ್ರಸ್ಥಾನಿಯಾದರೆ, ಅಮೆರಿಕ 2.2 ಹಾಗೂ ಜರ್ಮನಿ 1.7 ರೇಟಿಂಗ್ ಪಡೆದಿವೆ. ನೀತಿ ಆಯೋಗದ ಮಾಜಿ ಸಿಇಒ ಅಮಿತಾಭ್ ಕಾಂತ್ ಅವರು ಭಾರತದ ಏಳಿಗೆ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ. “ಭಾರತದ ಚಾಣಾಕ್ಷತೆಯು ಜಾಗತಿಕವಾಗಿ ಮಿನುಗುತ್ತಿದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡು ಭಾರತವು ಜಾಗತಿಕ ಶಿಕ್ಷಣ, ಆರೋಗ್ಯ, ಪೌಷ್ಟಿಕಾಂಶ ಸೇರಿ ಹಲವು ಕ್ಷೇತ್ರಗಳ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಿದೆ” ಎಂದು ಪೋಸ್ಟ್ ಮಾಡಿತ್ತು.
Artificial Intelligence (AI) helped 🏴 England women’s cricket team win a T20 series against 🇦🇺 Australia
— Firstpost Sports (@FirstpostSports) May 4, 2024
Here's how ⬇️https://t.co/hP4NTjvkDF
ಇಟ್ಟು ಮರೆತು ಹೋದ ವಸ್ತುಗಳನ್ನು ಹುಡುಕಲು ‘ಕೃತಕ ಜ್ಞಾಪಕ ಶಕ್ತಿ’ ಅಭಿವೃದ್ಧಿ!
ಇಟ್ಟಿರುವ ಸಾಮಾನು ಟೈಮ್‌ಗೆ ಸರಿಯಾಗಿ ಕೈಗೆ ಸಿಗುವುದಿಲ್ಲ ಎಂದು ಮನೆಯಲ್ಲಿ ಆಗಾಗ ಹಿರಿಯರು ಮಾತನಾಡಿಕೊಳ್ಳವುದನ್ನು ಕೇಳಿದ್ದೇವೆ. ಇನ್ನು ಆ ಚಿಂತೆ ಇಲ್ಲ ಬಿಡಿ. ಯಾಕೆಂದರೆ, ಸಂಶೋಧಕರು ಕೃತಕ ಬುದ್ಧಿಮತ್ತೆ (Artificial Intelligence) ಆಧಾರಿತ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಈ ತಂತ್ರಜ್ಞಾನವನ್ನು ಬಳಸಿಕೊಂಡು ರೋಬಾಟ್‌ಗಳು, ವಿಶೇಷವಾಗಿ ಮರೆವಿನ ಕಾಯಿಲೆಯಿಂದ ಬಳಲುತ್ತಿರುವವರಿಗೆ, ಔಷಧಗಳು, ಕನ್ನಡಕ, ಫೋನ್‌ಗಳು ಮತ್ತಿತರ ವಸ್ತುಗಳನ್ನು ಹುಡುಕಿಕೊಡಲು ನೆರವು ನೀಡಲಿವೆ.
ಮೆರೆವು ಕಾಯಿಲೆಯು, ಮೆದುಳಿನ ಕಾರ್ಯನಿರ್ವಹಣೆಯನ್ನು ನಿರ್ಬಂಧಿಸುತ್ತದೆ. ಇದರಿಂದಾಗಿ ಗೊಂದಲ, ನೆನಪು ನಷ್ಟ ಮತ್ತು ಅಂಗವೈಕಲ್ಯವನ್ನು ಉಂಟುಮಾಡುತ್ತದೆ. ಈ ಸ್ಥಿತಿಯನ್ನು ಹೊಂದಿರುವ ಅನೇಕ ಜನರು ದಿನನಿತ್ಯದ ವಸ್ತುಗಳ ಸ್ಥಳವನ್ನು ಪದೇ ಪದೇ ಮರೆತುಬಿಡುತ್ತಾರೆ. ಇದು ಅವರ ಜೀವನದ ಗುಣಮಟ್ಟವನ್ನು ಕುಗ್ಗಿಸುತ್ತದೆ. ಹಾಗಾಗಿ ಆರೈಕೆ ಮಾಡುವವರ ಮೇಲೆ ಹೆಚ್ಚುವರಿ ಹೊರೆಯಾಗುತ್ತದೆ. ಈ ಹೊರೆಯನ್ನು ಕಡಿಮೆ ಮಾಡಲು ಈ ತಂತ್ರಜ್ಞಾನವು ನೆರವು ಒದಗಿಸಲಿದೆ.