Site icon Vistara News

Viral News: ರೈಫಲ್​​ ಬದಿಗಿಟ್ಟು ಬ್ಯಾಟ್​ ಹಿಡಿದ ಭಾರತ-ಚೀನಾ ಸೈನಿಕರು; ವಿಡಿಯೊ ವೈರಲ್​

Viral News: Indian-Chinese soldiers holding guns aside; The video is viral

Viral News: Indian-Chinese soldiers holding guns aside; The video is viral

ನವದೆಹಲಿ: ಭಾರತ(India) ಮತ್ತು ಚೀನಾ(China) ಮಧ್ಯೆ ರಾಜತಾಂತ್ರಿಕವಾಗಿ ಎಷ್ಟೇ ಸಂಘರ್ಷ, ಗಡಿರೇಖೆಗಳಿದ್ದರೂ ಕ್ರೀಡೆ ಎಂಬ ವಿಚಾರ ಬಂದಾಗ ಈ ಎಲ್ಲ ಗಡಿರೇಖೆಗಳು ಮೀರಿನಿಲ್ಲುತ್ತದೆ. ಇದೀಗ ಇಂತಹದೊಂದು ಘಟನೆ ಪೂರ್ವ ಲಡಾಖ್‌ನಲ್ಲಿ ನಡೆದಿದೆ.

ಇತ್ತೀಚೆಗೆ ಅರುಣಾಚಲ ಪ್ರದೇಶದಲ್ಲಿನ ತವಾಂಗ್‌ ವಲಯದ ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ವಿಚಾರವಾಗಿ ಚೀನಾ ಭಾರತದ ಜತೆ ಸಂಘರ್ಷ ನಡೆಸಿತ್ತು. ಆದರೆ ಇದೀಗ ಎಲ್ಲ ಸಂರ್ಘರ್ಷವನ್ನು ಮರೆತಂತೆ ಭಾರತ ಮತ್ತು ಚೀನಾ ಸೈನಿಕರು ಪೂರ್ವ ಲಡಾಖ್‌ನಲ್ಲಿ ಕ್ರಿಕೆಟ್ ಆಡುತ್ತಿರುವ ಫೋಟೋಗಳನ್ನು ಭಾರತೀಯ ಸೇನೆ ಶುಕ್ರವಾರ(ಮಾರ್ಚ್​ 3) ಹಂಚಿಕೊಂಡಿದೆ. ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​(Viral News) ಆಗಿದೆ.

ಭಾರತೀಯ ಸೇನೆಯ ಲೇಹ್ ಮೂಲದ 14 ಕಾರ್ಪ್ಸ್ ಈ ಫೋಟೊವನ್ನು ಟ್ವೀಟ್ ಮಾಡಿದೆ, ಪಾಟಿಯಾಲ ಬ್ರಿಗೇಡ್ ತ್ರಿಶೂಲ್ ವಿಭಾಗವು ಶೂನ್ಯಕ್ಕಿಂತ ಕಡಿಮೆ ತಾಪಮಾನದಲ್ಲಿ ಅತ್ಯಂತ ಎತ್ತರದ ಪ್ರದೇಶದಲ್ಲಿ ಉಭಯ ದೇಶದ ಸೈನಿಕರು ಉತ್ಸಾಹದಿಂದ ಕ್ರಿಕೆಟ್ ಆಡಿದ್ದಾರೆ. ಆದರೆ ಈ ಕ್ರಿಕೆಟ್​ ಆಡಿದ ನಿರ್ದಿರ್ಷ ಪ್ರದೇಶ ಯಾವುದೆಂದು ಭಾರತೀಯ ಸೇನೆ ಬಹಿರಂಗಪಡಿಸಲಿಲ್ಲ. ಚಳಿಗಾಲದಲ್ಲಿ ಭಾರತೀಯ ಸೇನೆ ಇಲ್ಲಿ ಸೈನಿಕರಿಗೆ ವಿವಿಧ ಕ್ರೀಡೆಗಳನ್ನು ಏರ್ಪಡಿಸುತ್ತದೆ.

ಇದನ್ನೂ ಓದಿ Indian Pacers: 100ಕ್ಕೂ ಅಧಿಕ ಟೆಸ್ಟ್​ ವಿಕೆಟ್​ ಪಡೆದ ಭಾರತ ತಂಡದ ವೇಗದ ಬೌಲರ್​ಗಳು

ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಚೀನಾದ ಕ್ವಿನ್ ಗ್ಯಾಂಗ್ ನಡುವೆ ಜಿ20 ವಿದೇಶಾಂಗ ಸಚಿವರ ಸಮಾವೇಶದ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ನಡೆದ ಸಭೆಯ ನಂತರ ಈ ಫೋಟೋಗಳನ್ನು ಬಿಡುಗಡೆ ಮಾಡಲಾಗಿದೆ.

Exit mobile version