ಮುಂಬಯಿ: ಟಿ20 ವಿಶ್ವಕಪ್(T20 World Cup 2024) ಟೂರ್ನಿಗೆ ಟೀಮ್ ಇಂಡಿಯಾದ ಹೊಸ ಜೆರ್ಸಿ(India’s Jersey T20 World Cup) ಪ್ರಕಟಗೊಂಡಿದೆ. ಸೋಮವಾರ ಭಾರತ ತಂಡದ ಕಿಟ್ ಪ್ರಯೋಜಕತ್ವ ಪಡೆದಿರುವ ಕ್ರೀಡಾ ಉಡುಪುಗಳ ಅಡಿಡಾಸ್ ಕಂಪೆನಿ, ಹಿಮಾಚಲ ಪ್ರದೇಶದ ಧರ್ಮಶಾಲಾ ಕ್ರಿಡಾಂಗಣದಲ್ಲಿ ಹೆಲಿಕಾಪ್ಟರ್ ಮೂಲಕ ದೈತ್ಯ ಗಾತ್ರದ ಹೊಸ ಜೆರ್ಸಿಯನ್ನು ಅನಾವರಣ ಮಾಡಿತ್ತು. ರೋಹಿತ್ ಶರ್ಮ, ರವೀಂದ್ರ ಜಡೇಜಾ ಮತ್ತು ಕುಲ್ದೀಪ್ ಯಾದವ್ ಒಳಗೊಂಡ ವಿಶೇಷ ವಿಡಿಯೊ ಇದಾಗಿತ್ತು. ಇದೀಗ ಆಟಗಾರರ ಜೆರ್ಸಿ ಬೆಲೆ ದೆಹಲಿಯಿಂದ ಗೋವಾಕ್ಕೆ ಪ್ರಯಾಣಿಸುವ ವಿಮಾನದ ಟಿಕೆಟ್ ಬೆಲೆಗಿಂತಲೂ ಅಧಿಕವಾಗಿದೆ.(Viral News)
ಹೌದು, ದೆಹಲಿಯಿಂದ ಗೋವಾಕ್ಕೆ ಇರುವ ವಿಮಾನ ಪ್ರಯಾಣದ ದರ 5,134 ರೂ. ಆದರೆ, ಟೀಮ್ ಇಂಡಿಯಾದ ಆಟಗಾರರ ಹೊಸ ಜೆರ್ಸಿಯ ಬೆಲೆ 5,999 ರೂ. ಇದೆ. ಇದೀಗ ಜೆರ್ಸಿ ಮತ್ತು ವಿಮಾನ ಟಿಕೆಟ್ ದರದ ಫೋಟೊಗಳನ್ನು ನೆಟ್ಟಿಗರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಅಚ್ಚರಿ ಪಟ್ಟಿದ್ದಾರೆ.
ದೆಹಲಿಯಿಂದ ಗೋವಾಕ್ಕೆ ಇರುವ ವಿಮಾನ ದರದ ಫೋಟೊ
ನೀಲಿ ಮತ್ತು ಕಿತ್ತಳೆ ಬಣ್ಣ ಮಿಶ್ರಿತ ಜೆರ್ಸಿಯಲ್ಲಿ ಅಂಗಿಯ ಭುಜಗಳು ಕಿತ್ತಳೆ ಬಣ್ಣದಲ್ಲಿದ್ದು, ಮೂರು ಬಿಳಿ ಬಣ್ಣದ ಪಟ್ಟಿಯನ್ನು ಹೊಂದಿದೆ. ಉಳಿದ ಭಾಗವು ನೀಲಿ ಬಣ್ಣದ್ದಾಗಿದೆ. ಶರ್ಟ್ನ ಕಾಲರ್ ಸುತ್ತಲೂ ತ್ರಿವರ್ಣದ ಪಟ್ಟಿ ಹೊಂದಿದೆ.
ಜೆರ್ಸಿ ಕಂಡು ಟ್ರೋಲ್ ಮಾಡಿದ ನೆಟ್ಟಿಗರು
ಹೊಸ ಜೆರ್ಸಿಯಲ್ಲಿ ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಉಪನಾಯಕ ಹಾರ್ದಿಕ್ ಪಾಂಡ್ಯ ಅವರ ಎಡಿಟೆಡ್ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಫೊಟೊ ಕಂಡ ಕೆಲ ನೆಟ್ಟಿಗರು ಇದು ಇಂಡಿಯನ್ ಆಯಿಲ್ ಕಂಪೆನಿಯ ಡ್ರೆಸ್ನಂತಿದೆ,, ಹಾರ್ಫಿಕ್ ಬಾಟಲ್ ತರಾ ಇದೆ ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಜೀತಾಲಾಲ್ ಚಂಪಕ್ಲಾಲ್ ಅವರಿಂದ ಸ್ಫೂರ್ತಿ ಪಡೆದು ಈ ಜೆರ್ಸಿ ಮಾಡಲಾಗಿದೆ ಎಂದು ಹೇಳಿದ್ದಾರೆ.
ಭಾರತ ತನ್ನ ಮೊದಲ ಪಂದ್ಯವನ್ನು ಜೂನ್ 5 ರಂದು ಐರ್ಲೆಂಡ್ ವಿರುದ್ಧ ಆಡಲಿದೆ. ದ್ವಿತೀಯ ಪಂದ್ಯ ಜೂನ್ 9 ರಂದು ಪಾಕ್ ವಿರುದ್ಧ ಆಡಲಿದ. ಭಾರತ ತನ್ನ ಎಲ್ಲ ಲೀಗ್ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. ಇದರಲ್ಲಿ ಮೂರು ಪಂದ್ಯಗಳು ನ್ಯೂಯಾರ್ಕ್ ಮತ್ತು ಒಂದು ಪಂದ್ಯ ಫ್ಲೋರಿಡಾದಲ್ಲಿ ನಡೆಯಲಿದೆ. ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಜೂನ್ 1ರಿಂದ 18ರವರೆಗೆ ಗುಂಪು ಹಂತದಲ್ಲಿ 40 ಪಂದ್ಯಗಳು ನಡೆದರೆ, ಜೂನ್ 19 ರಿಂದ 24 ರವರೆಗೆ ಸೂಪರ್ 8 ಪಂದ್ಯಗಳು ನಡೆಯಲಿವೆ. ಜೂನ್ 29ಕ್ಕೆ ಫೈನಲ್ ಪಂದ್ಯ ಸಾಗಲಿದೆ.
2013ರಲ್ಲಿ ಎಂಎಸ್ ಧೋನಿ ನಾಯಕರಾಗಿದ್ದಾಗ ಭಾರತ ಕೊನೆಯ ಬಾರಿಗೆ ಐಸಿಸಿ ಟ್ರೋಫಿ ಗೆದ್ದಿತ್ತು. ಅಂದಿನಿಂದ, ಭಾರತವು ಏಕದಿನ ವಿಶ್ವಕಪ್, ಟಿ 20 ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆಲ್ಲಲು ವಿಫಲವಾಗಿದೆ. ಇದೀಗ ಈ ಬಾರಿಯ ಟಿ20 ವಿಶ್ವಕಪ್ ಗೆದ್ದು ಐಸಿಸಿ ಟ್ರೋಫಿ ಬರ ನೀಗಿಸಲು ರೋಹಿತ್ ಪಡೆ ಪಣತೊಟ್ಟಿದೆ.