Site icon Vistara News

Viral News: ಸಹೋದರ ಜತೆ ಮೊದಲ ಬಾರಿಗೆ ಕಾಣಿಸಿಕೊಂಡ ಎಂ.ಎಸ್​ ಧೋನಿ

Narendra Singh Dhoni

ರಾಂಚಿ: ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ(Mahendra Singh Dhoni) ಅವರು ಎಡ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ ಸದ್ಯ ರಾಂಚಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಆದರೆ ಧೋನಿಯ ಚೇತರಿಕೆಯ ವಿಚಾರಕ್ಕಿಂತ ಈ ಬಾರಿ ಬೇರೆಯೇ ಕಾರಣಕ್ಕೆ ಅವರ ಹೆಸರು ಮುನ್ನೆಲೆಗೆ ಬಂದಿದೆ. ಧೋನಿ ಅವರು ಮೊಟ್ಟ ಮೊದಲ ಬಾರಿಗೆ ತಮ್ಮ ಹಿರಿಯ ಸಹೋದರ ನರೇಂದ್ರ ಸಿಂಗ್ ಧೋನಿ(Narendra Singh Dhoni) ಜತೆಗೆ ಕಾಣಿಸಿಕೊಂಡಿದ್ದಾರೆ.

ಧೋನಿ ಜೀವನದ ಬಯೋಪಿಕ್‌ನಲ್ಲಿ ಅವರ ಸಹೋದರಿಯ ಪಾತ್ರವನ್ನು ಪರಿಚಯಿಸಲಾಯಿತು. ಆದರೆ ಅವರ ಸಹೋದರನ ಬಗ್ಗೆ ಏನನ್ನೂ ತೋರಿಸಿರಲಿಲ್ಲ. ಇದೀಗ ದಿಢೀರ್​ ಆಗಿ ಇಬ್ಬರು ಮೊದಲ ಬಾರಿಗೆ ಪ್ರತ್ಯಕ್ಷವಾಗುವ ಮೂಲಕ ಎಲ್ಲರಿಗೂ ಆಶ್ಚರ್ಯವಾಗುವಂತೆ ಮಾಡಿದ್ದಾರೆ. ಈ ಇಬ್ಬರನ್ನು ಜತೆಯಾಗಿ ಕಾಣಿಸಿಕೊಂಡ ತಕ್ಷಣ ಸಾಮಾಜಿಕ ಜಾಲತಾಣದಲ್ಲಿ ಧೋನಿ ಸಹೋದರ ಮತ್ತು ಧೋನಿ ಅವರ ಆರಂಭಿಕ ಜೀವನದ ಬಗ್ಗೆ ತಿಳಿದುಕೊಳ್ಳಲು ಅನೇಕ ನೆಟ್ಟಿಗರು ಮಾಹಿತಿ ಸಂಗ್ರಹಿಸಲು ಆಸಕ್ತಿ ತೋರಿದ್ದಾರೆ.

ನರೇಂದ್ರ ಸಿಂಗ್ ಧೋನಿ ಯಾರು?

ಧೋನಿ ಅವರ ಹಿರಿಯ ಸಹೋದರ ನರೇಂದ್ರ ಸಿಂಗ್ ಧೋನಿ ಅವರು ಸಕ್ರೀಯ ರಾಜಕಾರಣಿಯಾಗಿದ್ದು 2013ರಲ್ಲಿ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಇದಕ್ಕೂ ಮುನ್ನ ಅವರು ಬಿಜೆಪಿ ಪಕ್ಷದಲ್ಲಿದ್ದರು. 2007ರಲ್ಲಿ ಮದುವೆಯಾದ ಇವರಿಗೆ ಇಬ್ಬರು ಮಕ್ಕಳಿದ್ದಾರೆ. ರಾಂಚಿಯಲ್ಲಿಯೇ ವಾಸಿಸುತ್ತಿದ್ದರೂ ಅವರು ಸಹೋದರ ಮಹೇಂದ್ರ ಸಿಂಗ್​ ಧೋನಿ ಅವರೊಂದಿಗೆ ಅಷ್ಟಾಗಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಜತೆಗೆ ಧೋನಿ ಅವರ ಬಾಲ್ಯದ ಜೀವನದ ಬಗೆಗಿನ ಯಾವುದೇ ವಿಚಾರದಲ್ಲಿಯೂ ಇವರ ಕುರಿತಾದ ಮಾಹಿತಿ ಇದುವರೆಗೆ ತಿಳಿದು ಬಂದಿರಲಿಲ್ಲ.

ಇದನ್ನೂ ಓದಿ MS Dhoni: ಧೋನಿ ಭಾರತ ತಂಡಕ್ಕೆ ನಾಯಕನಾದ ವಿಚಾರ ಬಹಿರಂಗಪಡಿಸಿದ ವೆಂಗ್​ಸರ್ಕರ್‌

ಇದೇ ಮೊದಲ ಬಾರಿಗೆ ಸಹೋದರರನ್ನು ಜತೆಯಾಗಿ ಕಂಡ ನೆಟ್ಟಿಗರು ಸಂತೋಷಪಟ್ಟಿದ್ದಾರೆ. ಆದರೆ ಇನ್ನು ಕೆಲವರು ಸಹೋದರರಿಬ್ಬರು ಒಟ್ಟಿಗೆ ವಾಸಿಸುತ್ತಿದ್ದಾರೆಯೇ? ಇಲ್ಲಿಯ ವರೆಗೆ ಇವರಿಬ್ಬರು ಏಕೆ ಜತೆಯಾಗಿ ಕಾಣಿಸಿಕೊಂಡಿಲ್ಲ? ಹೀಗೆ ಹಲವು ಪ್ರಶ್ನೆಗಳನ್ನು ಕೇಳಲಾರಂಭಿಸಿದ್ದಾರೆ.

ಸದ್ಯ ಧೋನಿ ಫಾರ್ಮ್‌ಹೌಸ್‌ನಲ್ಲಿ ತಮ್ಮ ಸಹೋದರನೊಂದಿಗೆ ವಿಚಿತ್ರ ಕಲರ್ ಫುಲ್ ಬಟ್ಟೆಯಲ್ಲಿ ಕಾಣಿಸಿಕೊಂಡ ಫೋಟೊ ಎಲ್ಲಡೆ ವೈರಲ್(Viral News)​ ಆಗಿದೆ. ವಾಸ್ತವವಾಗಿ ಧೋನಿ ಯಾವಾಗಲೂ ಸರಳವಾದ ಬಟ್ಟೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಸರಳತೆ, ಶಾಂತತೆ ಅವರ ಗುರುತು. ಆದರೆ ಈ ಬಾರಿ ರಣ್​ಬೀರ್​ ಸಿಂಗ್​ ಅವರಂತೆ ಬಣ್ಣ ಬಣ್ಣದ ಬಟ್ಟೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.

Exit mobile version