ಜೈಪುರ: ಶನಿವಾರದ ಐಪಿಎಲ್(IPL 2024) ಪಂದ್ಯದಲ್ಲಿ ಆರ್ಸಿಬಿ(RCB) ಮತ್ತು ರಾಜಸ್ಥಾನ್(RR) ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯ ಜೈಪುರ ಸವಾಯಿ ಮಾನ್ಸಿಂಗ್(Sawai Mansingh Stadium) ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯದ ಟಿಕೆಟ್ ಪಡೆಯಲು ಅಭಿಮಾನಿಗಳು ಬೆಳಗ್ಗಿನ ಜಾವ 3 ಗಂಟೆ ವೇಳೆಗೆ ಸ್ಟೇಡಿಯಂ ಕೌಂಟರ್ ಬಳಿ ಬಂದು ಮಲಗಿದ್ದಾರೆ. ಈ ಫೋಟೊ(Viral News) ವೈರಲ್ ಆಗಿದೆ.
This is unbelievable craze of Virat Kohli !! Everyone wants to see him pic.twitter.com/cvNoahddOI
— Ayush Singh (@imabhinashS) April 5, 2024
ಮುಖಾಮುಖಿ
ಆರ್ಸಿಬಿ ಮತ್ತು ರಾಜಸ್ಥಾನ್ ತಂಡಗಳು ಇದುವರೆಗೆ ಐಪಿಎಲ್ನಲ್ಲಿ 30 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಬೆಂಗಳೂರು ತಂಡ 15 ಪಂದ್ಯ ಗೆದ್ದರೆ, ರಾಜಸ್ಥಾನ್ 12 ಪಂದ್ಯ ಗೆದ್ದಿದೆ. ಮೂರು ಪಂದ್ಯಗಳು ಫಲಿತಾಂಶ ಕಂಡಿಲ್ಲ. ಕಳೆದ ಆವೃತ್ತಿಯಲ್ಲಿ ಆಡಿದ 2 ಪಂದ್ಯಗಳಲ್ಲಿಯೂ ರಾಜಸ್ಥಾನ್ ವಿರುದ್ಧ ಆರ್ಸಿಬಿ ಗೆಲುವು ಸಾಧಿಸಿತ್ತು. ಆದರೆ ಈ ಬಾರಿ ತಂಡದ ಮೇಲೆ ನಿರೀಕ್ಷೆ ಮಾಡುವುದು ಕೊಂಚ ಕಷ್ಟ. ಏಕೆಂದರೆ ಈ ಬಾರಿ ಆರ್ಸಿಬಿ ತಂಡಕ್ಕೆ ತವರಿನ ಪಂದ್ಯಗಳನ್ನೇ ಗೆಲ್ಲಲು ಸಾಧ್ಯವಾಗಿಲ್ಲ. ತೀರಾ ಕಳಪೆ ಪ್ರದರ್ಶನ ತೋರುತ್ತಿದೆ.
ಇದನ್ನೂ ಓದಿ IPL 2024: ಮುಂಬೈ ತಂಡ ಸೇರಿದ ಸೂರ್ಯಕುಮಾರ್; ಡೆಲ್ಲಿ ವಿರುದ್ಧ ಕಣಕ್ಕೆ
ಪಿಚ್ ರಿಪೋರ್ಟ್
ಸವಾಯಿ ಮಾನ್ ಸಿಂಗ್ ಸ್ಟೇಡಿಯಂನ ಪಿಚ್ ಬ್ಯಾಟಿಂಗ್ ಮತ್ತು ಬೌಲಿಂಗ್ಗೆ ಸಮಾನವಾಗಿ ನೆರವು ನೀಡುತ್ತದೆ. ಸ್ಪಿನ್ ಬೌಲರ್ಗಳು ಇಲ್ಲಿ ವೇಗಿಗಳಿಂದ ಹೆಚ್ಚು ಹಿಡಿತ ಸಾಧಿಸಬಲ್ಲರು. ಇಲ್ಲಿನ ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ 175 ಆಗಿದೆ. ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು ಕಳೆದ ಸೀಸನ್‌ನಿಂದ ನಾಲ್ಕು ಬಾರಿ ಗೆದ್ದಿದ್ದರೆ, ಚೇಸಿಂಗ್ ನಡೆಸಿದ ತಂಡಗಳು ಎರಡು ಬಾರಿ ಮಾತ್ರ ಗೆದ್ದಿವೆ. ಹೀಗಾಗಿ ಟಾಸ್ ಗೆದ್ದ ತಂಡ ಬ್ಯಾಟಿಂಗ್ ಆಯ್ಕೆಗೆ ಮೊದಲ ಆದ್ಯತೆ ನೀಡಲಿದೆ.
ರಾಜಸ್ಥಾನ್ ತಂಡ ಬ್ಯಾಟಿಂಗ್ ಬೌಲಿಂಗ್ ಎರಡರಲ್ಲೂ ಬಲಿಷ್ಠವಾಗಿದೆ. ಈ ತಂಡ ಕೇವಲ ಒಂದೆರಡು ಆಟಗಾರರ ಪ್ರದರ್ಶನವನ್ನು ನೆಚ್ಚಿಕೊಂಡು ಆಡುತ್ತಿಲ್ಲ. ಜೈಸ್ವಾಲ್, ಬಟ್ಲರ್ ಇದುವರೆಗೂ ಫಾರ್ಮ್ ಕಂಡುಕೊಳ್ಳದಿದ್ದರೂ ತಂಡಕ್ಕೆ ಯಾವುದೇ ಹಿನ್ನಡೆಯಾಗಿಲ್ಲ. ಆಡಿದ ಮೂರು ಪಂದ್ಯಗಳನ್ನು ಕೂಡ ಗೆದ್ದಿದೆ. ಯಾರಾದರೊಬ್ಬರು ಸಿಡಿದು ನಿಂತು ತಂಡವನ್ನು ಗೆಲ್ಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಬೌಲಿಂಗ್ನಲ್ಲಿ ಆರ್ಸಿಬಿ ಮಾಜಿ ಸ್ಪಿನ್ನರ್ ಯಜುವೇಂದ್ರ ಚಹಲ್, ಆರ್ ಅಶ್ವಿನ್, ಟ್ರೆಂಟ್ ಬೌಲ್ಟ್, ಬರ್ಗರ್, ಸಂದೀಪ್ ಶರ್ಮ, ಅವೇಶ್ ಖಾನ್ ಎಲ್ಲರು ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಡಿದ ಅನುಭವಿಗಳೆ. ಹೀಗಾಗಿ ಇವರಿಗೆ ಎದುರಾಳಿ ಆಟಗಾರರನ್ನು ಹೇಗೆ ಕಟ್ಟಿ ಹಾಕಬೇಕೆನ್ನುವುದು ಸ್ಪಷ್ಟವಾಗಿ ತಿಳಿದಿದೆ.
ಸಂಭಾವ್ಯ ತಂಡ
ಆರ್ಸಿಬಿ: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಕ್ಯಾಮರೂನ್ ಗ್ರೀನ್, ಗ್ಲೆನ್ ಮ್ಯಾಕ್ಸ್‌ವೆಲ್, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್, ಅನುಜ್ ರಾವತ್ (ವಿಕೆಟ್ ಕೀಪರ್), ಮಯಾಂಕ್ ಡಾಗರ್, ರೀಸ್ ಟೋಪ್ಲಿ, ಮೊಹಮ್ಮದ್ ಸಿರಾಜ್, ಯಶ್ ದಯಾಲ್.
ರಾಜಸ್ಥಾನ್: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ನಾಯಕ), ರಿಯಾನ್ ಪರಾಗ್, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೆಯರ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಅವೇಶ್ ಖಾನ್, ನಾಂದ್ರೆ ಬರ್ಗರ್, ಯುಜ್ವೇಂದ್ರ ಚಹಾಲ್.