ಮುಂಬಯಿ: ಸತತ ಕ್ರಿಕೆಟ್ ಸರಣಿ ಆಡಿ ಬಳಲಿರುವ ಟೀಮ್ ಇಂಡಿಯಾ ಆಟಗಾರರು ತಮ್ಮ ಕುಟುಂಬದ ಜತೆ ಸದ್ಯ ಜಾಲಿ ಮೂಡ್ನಲ್ಲಿದ್ದಾರೆ. ತಮ್ಮ ನೆಚ್ಚಿನ ದೇಶಗಳಿಗೆ ಪ್ರವಾಸ ಕೈಗೊಂಡು ರಜೆಯ ಮಜವನ್ನು ಅನುಭವಿಸುತ್ತಿದ್ದಾರೆ. ವಿದೇಶಿ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ(Rohit Sharma) ಅವರು ಸಮುದ್ರಕ್ಕೆ ಹಾರಿದ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್(Viral News) ಆಗುತ್ತಿದೆ.
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಆಡಿದ ಬಳಿಕ ರೋಹಿತ್ ಶರ್ಮ ಅವರು ಪತ್ನಿ ರಿತಿಕಾ ಸಜ್ದೇಹ್(Ritika Sajdeh) ಮತ್ತು ಪುತ್ರಿ ಸಮೈರಾ ಅವರೊಂದಿಗೆ ವಿದೇಶಿ ಪ್ರವಾಸದಲ್ಲಿ ಸಮಯ ಕಳೆಯುತ್ತಿದ್ದಾರೆ. ಇದೇ ವೇಳೆ ರೋಹಿತ್ ಶರ್ಮ ಸಮುದ್ರಕ್ಕೆ ಹಾರಿದ್ದಾರೆ ಎಂದು ಅವರ ಪತ್ನಿ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪ್ರಕಟಿಸಿದ್ದಾರೆ. ಜತೆಗೆ ರೋಹಿತ್ ಅವರು ಸಮುದ್ರಕ್ಕೆ ಹಾರಿದ ಕಾರಣವನ್ನು ಅವರು ತಿಳಿಸಿದ್ದಾರೆ.
ರಿತಿಕಾ ಅವರು ಇನ್ಸ್ಟಾಗ್ರಾಮ್ನ ಸ್ಟೋರಿಯಲ್ಲಿ ಹಂಚಿಕೊಂಡಿರುವ ಪೋಸ್ಟ್ನಲ್ಲಿ ಬಳಲಿದವರ ರೀತಿ ಸಮುದ್ರದ ಮೇಲೆ ನಿರ್ಮಿಸಲಾದ ಮರದ ಸೇತುವೆಯಲ್ಲಿ ರೋಹಿತ್ ನಿಂತಿದ್ದಾರೆ. “ನನ್ನ ಫೋನ್ ಸಮುದ್ರದಲ್ಲಿ ಬಿದ್ದಿದೆ. ಅದನ್ನು ಉಳಿಸಲು ರೋಹಿತ್ ಸಮುದ್ರಕ್ಕೆ ಹಾರಿದ್ದಾರೆ” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ Viral News: ಟ್ರಾಕ್ಟರ್ ಖರೀದಿಸಿದ ರೋಜರ್ ಬಿನ್ನಿ: ಕೃಷಿಯತ್ತ ಒಲವು ತೋರಿದ ಬಿಸಿಸಿಐ ಅಧ್ಯಕ್ಷ
ವಿಂಡೀಸ್ ಸರಣಿಗೆ ಅನುಮಾನ
ಮುಂಬರುವ ವೆಸ್ಟ್ ಇಂಡೀಸ್(indvswi) ಸರಣಿ ವೇಳೆ ರೋಹಿತ್ ಶರ್ಮ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆಯೊಂದು ದಟ್ಟವಾಗಿದೆ. 2 ಪಂದ್ಯಗಳ ಟೆಸ್ಟ್ ಸರಣಿ ಅಥವಾ 8 ಪಂದ್ಯಗಳ ಸೀಮಿತ ಓವರ್‌ಗಳ ಸರಣಿಯಿಂದ ಅವರನ್ನು ಹೊರಗಿಡುವ ಬಗ್ಗೆ ಬಿಸಿಸಿಐ(BCCI) ಮತ್ತು ಆಯ್ಕೆ ಸಮಿತಿ ಚಿಂತಿಸುತ್ತಿವೆ ಎಂದು ಮಂಡಳಿಯ ಮೂಲಗಳು ಪಿಟಿಐಗೆ ತಿಳಿಸಿವೆ. ಭಾರತ ತಂಡ ಓವಲ್‌ನಲ್ಲಿ ನಡೆದ ಕಳೆದ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ(WTC Final) ಆಸ್ಟ್ರೇಲಿಯಕ್ಕೆ ಹೀನಾಯವಾಗಿ ಸೋತ ಬಳಿಕ ರೋಹಿತ್ ಶರ್ಮ ನಾಯಕತ್ವ ಮತ್ತು ತಂಡದ ಆಡಳಿತ ಮಂಡಳಿ ತೀವ್ರ ಟೀಕೆಗೆ ಗುರಿಯಾಗಿದೆ. ಈ ಸರಣಿಯಲ್ಲಿ ಯುವ ಆಟಗಾರರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಅನೇಕ ಹಿರಿಯ ಆಟಗಾರರನ್ನು ವೀಶ್ರಾಂತಿ ನೆಪದಲ್ಲಿ ಬಹುತೇಕ ತಂಡದಿಂದ ಹೊರಗಿಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ.