ಲಂಡನ್: ಭಾರತ ಮತ್ತು ಆಸ್ಟ್ರೇಲಿಯಾ(India vs Australia) ವಿರುದ್ಧ ನಡೆಯುತ್ತಿರುವ ಐಸಿಸಿ ವಿಶ್ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್(WTC final) ಪಂದ್ಯದ ಮೂರನೇ ದಿನಾಟದ ವೇಳೆ ನಡೆದ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಆಗಿದೆ. ಡಗೌಟ್ನಲ್ಲಿ ನಿದ್ರೆಗೆ ಜಾರಿದ್ದ ಮಾರ್ನಸ್ ಲಬುಶೇನ್(Marnus Labuschagne) ಅವರನ್ನು ಸಿರಾಜ್ ತಮ್ಮದೇ ಶೈಲಿಯಲ್ಲಿ ಎಬ್ಬಿಸಿರುವ ವಿಡಿಯೊವೊಂದು ಎಲ್ಲಡೆ ವೈರಲ್(Viral News) ಆಗಿದೆ.
ಮೂರನೇ ದಿನದಾಟವಾದ ಶುಕ್ರವಾರ ಭಾರತ ಮೊದಲ ಇನಿಂಗ್ಸ್ನಲ್ಲಿ 296 ರನ್ಗಳಿಗೆ ಆಲೌಟ್ ಆಯಿತು. ಬಳಿಕ ದ್ವಿತೀಯ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಪರ ಡೇವಿಡ್ ವಾರ್ನರ್ ಮತ್ತು ಉಸ್ಮಾನ್ ಖವಾಜ ಅವರು ಬ್ಯಾಟಿಂಗ್ ನಡೆಸಲು ಕ್ರೀಸ್ಗೆ ಆಗಮಿಸಿದರು. ಇದೇ ವೇಳೆ ಬ್ಯಾಟಿಂಗ್ಗೆ ಎಲ್ಲ ರೀತಿಯ ಸಿದ್ಧತೆ ನಡೆಸಿ ಡಗೌಟ್ನ ಕುರ್ಚಿಯೊಂದರಲ್ಲಿ ಕುಳಿತ್ತಿದ್ದ ಲಬುಶೇನ್ ಅವರು ಮೆಲ್ಲನೆ ನಿದ್ರೆಗೆ ಜಾರಿದರು. ಕೆಲ ಗಂಟೆಗಳ ಹಿಂದೆ ಊಟ ಮುಗಿಸಿದ್ದ ಅವರಿಗೆ ನಿದ್ರೆ ಆವರಿಸಿತ್ತು.
ವಾರ್ನರ್ ಮತ್ತು ಖವಾಜ ಮೇಲೆ ನಂಬಿಕೆಯಿಟ್ಟು ನಿದ್ರಿಸುತ್ತಿದ್ದ ಲಬುಶೇನ್ಗೆ ಸಿರಾಜ್ ತಕ್ಕೆ ಪಾಠ ಕಲಿಸಿದರು. ಮೊದಲ ಪಂದ್ಯದ ಮೂರನೇ ಓವರ್ನಲ್ಲಿಯೇ ವಾರ್ನರ್ ವಿಕೆಟ್ ಕಿತ್ತರು. ಈ ವೇಳೆ ಭಾರತದ ಅಭಿಮಾನಿಗಳು ಸಂಭ್ರಮದಿಂದ ಚೀರಾಡುತ್ತಿದ್ದದ್ದನ್ನು ಕೇಳಿ ರಪ್ಪನೇ ನಿದ್ರೆಯಿಂದ ಎದ್ದ ಲಬುಶೇನ್ ತರಾತುರಿಯಲ್ಲಿ ಬ್ಯಾಟಿಂಗ್ ನಡೆಸಲು ಮುಂದಾಗಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ. ಸದ್ಯ ಈ ವಿಡಿಯೊವನ್ನು ಶೇರ್ ಮಾಡಿರುವ ಅನೇಕರು “ವೇಕ್ ಆಫ್ ಲಬುಶೇನ್” ಎಂದು ಶೀರ್ಷಿಕೆ ನೀಡಿದ್ದಾರೆ.
ಇದನ್ನೂ ಓದಿ WTC Final 2023: ಬೃಹತ್ ಮುನ್ನಡೆ ಸಾಧಿಸಿದ ಆಸ್ಟ್ರೇಲಿಯಾ; ಸಂಕಷ್ಟದಲ್ಲಿ ರೋಹಿತ್ ಪಡೆ
ನಿದ್ರೆಯ ಮಂಪರಿನಲ್ಲಿ ಕ್ರೀಸ್ಗೆ ಆಗಮಿಸಿದ ಲಬುಶೇನ್ ಸಿರಾಜ್ ಅವರ ಓವರ್ನಲ್ಲಿ ಒಮ್ಮೆ ಜಾರಿ ಬಿದ್ದರೆ, ಮತ್ತೊಮ್ಮೆ ಕೈಗೆ ಸರಿಯಾದ ಏಟು ಮಾಡಿಕೊಂಡರು. ಇದೇ ವೇಳೆ ಕಾಮೆಂಟ್ರಿ ನಡೆಸುತ್ತಿದ್ದವರು ಬಹುಶಃ ಲಬುಶೇನ್ ನಿದ್ರೆಯ ಮಂಪರು ಇಳಿದಿರಲಿಲ್ಲವೇನೋ ಎಂದು ತಮಾಷೆ ಮಾಡಿದ್ದಾರೆ. ಸದ್ಯ ಬ್ಯಾಟಿಂಗ್ ಕಾಯ್ದುಕೊಂಡಿರುವ ಅವರು 41 ರನ್ಗಳಿಸಿದ್ದಾರೆ.