Site icon Vistara News

Viral News: ರಿಂಕು ಸಿಂಗ್​ ಹಿಂದೆ ಬಿದ್ದ ಟೀಮ್​ ಇಂಡಿಯಾ ಸ್ಟಾರ್​ ಕ್ರಿಕೆಟಿಗನ ತಂಗಿ; ಇನ್​ಸ್ಟಾದಲ್ಲಿ ರಿವೀಲ್ ಆಯ್ತು ಪ್ರೇಮ್​ ಕಹಾನಿ​

maldives

ಮುಂಬಯಿ: ಈ ಬಾರಿಯ ಐಪಿಎಲ್​ ಟೂರ್ನಿಯಲ್ಲಿ ಒಂದೇ ಓವರ್​ನಲ್ಲಿ 5 ಸಿಕ್ಸರ್​ ಬಾರಿಸಿ ಎಲ್ಲರ ಮನೆಮಾತಾಗಿದ್ದ ಕೆಕೆಆರ್​ ತಂಡದ ರಿಂಕು ಸಿಂಗ್(Rinku Singh)​ ಇದೀಗ ಕ್ರಿಕೆಟ್​ ಹೊರತಾಗಿ ಸುದ್ದಿಯಾಗಿದ್ದಾರೆ. ಟೀಮ್​ ಇಂಡಿಯಾದ ಸ್ಟಾರ್​ ಕ್ರಿಕೆಟಿಗನ ಸಹೋದರಿಯೊಂದಿಗೆ ಪ್ರೇಮದಲ್ಲಿ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ. ಇದಕ್ಕೆ ಪೂರಕವೆಂಬಂತೆ ಇನ್​ಸ್ಟಾಗ್ರಾಮ್​ ಸಂದೇಶವು ಪುಷ್ಟಿ ನೀಡಿದೆ. ಇದು ವೈರಲ್​(Viral News) ಆಗಿದೆ.

ಬಿಡುವಿಲ್ಲದ ಐಪಿಎಲ್​ ಪಂದ್ಯಗಳ ಬಳಿಕ ರಿಂಕು ಸಿಂಗ್​ ಅವರು ರಜಾ ಸಮಯ ಕಳೆಯಲು ಇತ್ತೀಚೆಗೆ ಮಾಲ್ಡೀವ್ಸ್​​ಗೆ ತೆರಳಿದ್ದರು. ಮಾಲ್ಡಿವ್ಸ್​ನ ಪ್ರಮುಖ ಬೀಚ್​ಗಳಲ್ಲಿ ಮಜಾ ಮಾಡಿದ ಫೋಟೊಗಳನ್ನು ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದರು. ಅದರಲ್ಲೂ ಅವರು ಸಿಕ್ಸ್​ಪ್ಯಾಕ್​ ಪ್ರದರ್ಶಿಸಿದ ಫೋಟೊ ಎಲ್ಲಡೆ ವೈರಲ್​ ಆಗಿತ್ತು. ರಿಂಕು ಅವರ ಸಿಕ್ಸ್​ ಪ್ಯಾಕ್​ ಕಂಡ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿ ಫೋಟೊಗೆ ಲೈಕ್​ ಮಾಡಿದ್ದರು. ಇದೇ ವೇಳೆ ಭಾರತ ಕ್ರಿಕೆಟ್​ ತಂಡದಲ್ಲಿ ಮಿಂಚುತ್ತಿರುವ ಯುವ ಆಟಗಾರ ಶುಭಮನ್ ಗಿಲ್(Shubman Gill)​ ಅವರ ಸಹೋದರಿ ಶಹನೀಲ್ ಗಿಲ್(Shahneel Gill)​ ಕೂಡ ಈ ಫೋಟೊಗೆ ಲೈಕ್​ ಮಾಡುವ ಜತೆಗೆ “ಓ ಹೀರೊ” ಎಂದು ರೊಮ್ಯಾಂಟಿಕ್ ಆಗಿ​ ಕಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ Viral News: ಶುಭಮನ್​ ಗಿಲ್​ಗೆ ಪ್ರಪೋಸ್​ ಮಾಡಿದ ಯುವತಿ; ಸಾರಾ ತೆಂಡೂಲ್ಕರ್​ ರಿಯ್ಯಾಕ್ಷನ್​ ಹೇಗಿತ್ತು?


ಸದ್ಯ ಇಬರಿಬ್ಬರ ಮಧ್ಯೆ ಪ್ರೇಮ ಇರುವುದಾಗಿ ನೆಟ್ಟಿಗರು ಅನುಮಾನ ವ್ಯಕ್ತಪಡಿಸಿದ್ದಾರೆ. ಶಹನೀಲ್ ಅವರ ಈ ಕಮೆಂಟ್​ಗೆ ಹಲವು ನೆಟ್ಟಿಗರು ರೀಪ್ಲೆ ನೀಡಿದ್ದು ನೀವು ಸಾರಾ ಹಿಂದೆ ಬಿದ್ದಿದ್ದರೇ, ನಿಮ್ಮ ತಂಗಿ ರಿಂಕುಗೆ ಗಾಳ ಹಾಕಿದ್ದಾರೆ ಎಂದು ತಮಾಷೆ ಮಾಡಿದ್ದಾರೆ.

ಈ ಬಾರಿಯ ಐಪಿಎಲ್​ನ ಅಂತಿಮ ಲೀಗ್​ ಪಂದ್ಯದಲ್ಲಿ ಗುಜರಾತ್​ ವಿರುದ್ಧ ಸೋಲು ಕಾಣುವ ಮೂಲಕ ಆರ್​ಬಿಸಿ ಲೀಗ್​ನಿಂದ ಹೊರಬಿದ್ದಿತ್ತು. ಇದೇ ಪಂದ್ಯದಲ್ಲಿ ಶುಭಮನ್​ ಗಿಲ್​ ಶತಕ ಬಾರಿಸಿ ಮಿಂಚಿದ್ದರು. ಸಹೋದರನ ಈ ಶತಕವನ್ನು ಸಂಭ್ರಮಿಸಿದ್ದ ಅವರ ಸಹೋದರಿ ಶಹನೀಲ್ ಅವರನ್ನು ವ್ಯಾಪಕವಾಗಿ ಟ್ರೋಲ್ ಮಾಡಲಾಗಿತ್ತು. ಜತೆಗೆ ಅತ್ಯಾಚಾರ ಮತ್ತು ಹಲ್ಲೆ ಬೆದರಿಕೆ ಕೂಡ ಹಾಕಲಾಗಿತ್ತು.

Exit mobile version