ಹರಾರೆ: ಐಸಿಸಿ ಏಕದಿನ ವಿಶ್ವಕಪ್ ಅರ್ಹತಾ ಕ್ರಿಕೆಟ್(World Cup Qualifier) ಪಂದ್ಯಾವಳಿಯಲ್ಲಿ ಜಿಂಬಾಬ್ವೆ ತಂಡದ ಅಭಿಮಾನಿಗಳು(Zimbabwe Fans) ಪಂದ್ಯದ ಮುಕ್ತಾಯದ ಬಳಿಕ ಸ್ಟೇಡಿಯಂ ಸ್ವಚ್ಚಗೊಳಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಅಭಿಮಾನಿಗಳು ಕ್ರೀಡಾಂಗಣ ಸ್ಚಚ್ಚಗೊಳಿಸುತ್ತಿರುವ ವಿಡಿಯೊವನ್ನು ಐಸಿಸಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದೆ. ಈ ವಿಡಿಯೊ ವೈರಲ್(Viral News) ಆಗಿದೆ.
ಭಾನುವಾರದ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಜಿಂಬಾಬ್ವೆ ತಂಡ 8 ವಿಕೆಟ್‌ಗಳಿಂದ ನೇಪಾಲವನ್ನು ಮಣಿಸಿ ಶುಭಾರಂಭ ಮಾಡಿತು. ಜಿಂಬಾಬ್ವೆ ಪರ ಸೀನ್ ವಿಲಿಯಮ್ಸನ್ ವೇಗದ ಶತಕ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ನೇಪಾಳ(Nepal) 8 ವಿಕೆಟಿಗೆ 290 ರನ್ನುಗಳ ಸವಾಲಿನ ಮೊತ್ತವನ್ನು ಪೇರಿಸಿತು. ಜವಾಬಿತ್ತ ಜಿಂಬಾಬ್ವೆ 44.1 ಓವರ್‌ಗಳಲ್ಲಿ 2 ವಿಕೆಟಿಗೆ 291 ರನ್ ಬಾರಿಸಿ ಗೆಲುವು ದಾಖಲಿಸಿತು. ನಾಯಕ ಕ್ರೆಗ್ ಇರ್ವಿನ್ ಮತ್ತು ಸೀನ್ ವಿಲಿಯಮ್ಸ್ ಅಜೇಯ ಶತಕ ಬಾರಿಸುವ ಮೂಲಕ ನೆರದಿದ್ದ ತವರಿನ ವೀಕ್ಷಕರನ್ನು ರಂಜಿಸಿದರು. ಕ್ರೆಗ್ ಇರ್ವಿನ್ ಅವರದು ಅಜೇಯ 121 ರನ್ ಕೊಡುಗೆ. 128 ಎಸೆತಗಳ ಈ ಇನ್ನಿಂಗ್ಸ್‌ನಲ್ಲಿ 15 ಬೌಂಡರಿ, 1 ಸಿಕ್ಸರ್ ಸೇರಿತ್ತು. ಸೀನ್ ವಿಲಿಯಮ್ಸನ್ ಗಳಿಕೆ ಅಜೇಯ 102 ರನ್. ಇವರ ಸೆಂಚುರಿ ಕೇವಲ 70 ಎಸೆತಗಳಲ್ಲಿ ದಾಖಲಾಯಿತು. ಇದು ಜಿಂಬಾಬ್ವೆ ಪರ ದಾಖಲಾದ ಅತೀ ವೇಗದ ಶತಕ. ಇದಕ್ಕೂ ಮೊದಲು ಬ್ರೆಂಡನ್ ಟೇಲರ್ 79 ಎಸೆತಗಳಲ್ಲಿ ಸೆಂಚುರಿ ಬಾರಿಸಿದ್ದು ದಾಖಲೆಯಾಗಿತ್ತು. ನೇಪಾಳದ ಆರಂಭ ಅಮೋಘವಾಗಿತ್ತು. ಕುಶಲ್ ಭುರ್ಟೆಲ್ (99) ಮತ್ತು ಆಸಿಫ್ ಶೇಖ್ (66) ಮೊದಲ ವಿಕೆಟಿಗೆ 31.5 ಓವರ್‌ಗಳಿಂದ 171 ರನ್ ಬಾರಿಸಿದರು. ಕುಶಲ್ ಕೇವಲ ಒಂದು ರನ್ನಿನಿಂದ ಶತಕ ತಪ್ಪಿಸಿಕೊಳ್ಳಬೇಕಾಯಿತು.
ಇದನ್ನೂ ಓದಿ ವಿಸ್ತಾರ ಸಂಪಾದಕೀಯ: ಭಾರತೀಯ ಕ್ರಿಕೆಟ್ ತಂಡದ ಐಸಿಸಿ ಟ್ರೋಫಿ ಬರ ನೀಗಲಿ
Nice gesture by Zimbabwe fans to clean the ground after the match got over against Nepal in World Cup Qualifiers. pic.twitter.com/2frn8V4WvY
— Johns. (@CricCrazyJohns) June 19, 2023
ಪಂದ್ಯ ಗೆದ್ದ ಬಳಿಕ ತವರಿನ ಅಭಿಮಾನಿಗಳು ಸ್ಟೇಡಿಯಂನಲ್ಲಿ ಬಿಸಾಡಿದ ನೀರಿನ ಬಾಟಲ್, ತಿಂಡಿ ತಿನಿಸುಗಳ ಪೊಟ್ಟಣವನ್ನು ಸ್ವಚ್ಚಗೊಳಿಸಿ ಮಾದರಿಯಾಗಿದ್ದಾರೆ. ಇದೇ ವೇಳೆ ಮಾತನಾಡಿದ ಅಭಿಮಾನಿಯೊಬ್ಬರು. ಸ್ವಚ್ಚತೆ ನಮ್ಮ ಆದ್ಯ ಕರ್ತವ್ಯವಾಗಬೇಕಿದೆ. ಎಲ್ಲರೂ ಕೂಡ ತಮ್ಮ ನಗರಗಳನ್ನು ಮತ್ತು ವಾಸಿಸುವ ಪ್ರದೇಶವನ್ನು ಸ್ವಚ್ಚವಾಗಿಡಿ ಎಂದು ಉಪಯುಕ್ತ ಸಂದೇಶ ನೀಡಿದರು.