Site icon Vistara News

ICC World Cup 2023 : ಜಗದ್ವಿಖ್ಯಾತ ಮೋದಿ ಸ್ಟೇಡಿಯಮ್​ನದ್ದೂ ಅದೇ ಕಥೆ; ಎಲ್ಲಿ ನೋಡಿದರೂ ಪಕ್ಷಿಗಳ ಹಿಕ್ಕೆ

Narendra Modi staduim

ಅಹಮದಾಬಾದ್​: ಬಹುನಿರೀಕ್ಷಿತ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ಗುರುವಾರ (ಅಕ್ಟೋಬರ್ 5) ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯದೊಂದಿಗೆ ಪ್ರಾರಂಭವಾಯಿತು. ಅಹ್ಮದಾಬಾದ್​​ನ ನರೇಂದ್ರ ಮೋದಿ ಸ್ಟೇಡಿಯಂ ಟೂರ್ನಿಯ ಉದ್ಘಾಟನಾ ಪಂದ್ಯಕ್ಕೆ ಆತಿಥ್ಯ ವಹಿಸಿತ್ತು. ಆದಾಗ್ಯೂ, 132,000 ಸಾಮರ್ಥ್ಯದ ಬೃಹತ್ ಕ್ರೀಡಾಂಗಣವು ಮೊದಲ ದಿನವೇ ತಪ್ಪು ಕಾರಣಗಳಿಗಾಗಿ ಸುದ್ದಿಗೆ ಗ್ರಾಸವಾಯಿತು.

ಆರಂಭಿಕ ಮುಖಾಮುಖಿಯಲ್ಲಿ ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಹಾಜರಾತಿ ಬಹಳ ಕಡಿಮೆ ಇತ್ತು. ಆಕ್ರೋಶದ ಮಧ್ಯೆ, ಸ್ಥಳದಲ್ಲಿನ ಕೊಳಕು ಆಸನಗಳನ್ನು ಎತ್ತಿ ತೋರಿಸುವ ಹಲವಾರು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು.

ಪ್ರಸ್ತುತ ನಡೆಯುತ್ತಿರುವ ಇಂಗ್ಲೆಂಡ್-ನ್ಯೂಜಿಲೆಂಡ್ ಪಂದ್ಯದ ನಂತರ, ಅಕ್ಟೋಬರ್ 14 ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಸೇರಿದಂತೆ ವಿಶ್ವಕಪ್​​ನ ಐದು ಪಂದ್ಯಗಳು ಅಹಮದಾಬಾದ್​ನಲ್ಲಿ ನಡೆಯಲಿವೆ. ಈ ವಾರದ ಆರಂಭದಲ್ಲಿ, ಹೈದರಾಬಾದ್​ನ ರಾಜೀವ್ ಗಾಂಧಿ ಅಂತಾರರಾಷ್ಟ್ರೀಯ ಕ್ರೀಡಾಂಗಣವು ಅದರ ಭಯಾನಕ ಸ್ಥಿತಿಗಾಗಿ ಟೀಕೆಗೆ ಒಳಗಾಗಿತ್ತು.

10 ತಂಡಗಳನ್ನು ಒಳಗೊಂಡ ಪಂದ್ಯಾವಳಿಯು ಭಾರತದಲ್ಲಿ 10 ಸ್ಥಳಗಳಲ್ಲಿ ನಡೆಯಲಿದೆ. ಅಹ್ಮದಾಬಾದ್ ಮತ್ತು ಹೈದರಾಬಾದ್ ಹೊರತುಪಡಿಸಿ, ದೆಹಲಿ, ಧರ್ಮಶಾಲಾ, ಲಕ್ನೋ, ಕೋಲ್ಕತಾ, ಮುಂಬೈ, ಪುಣೆ, ಬೆಂಗಳೂರು ಮತ್ತು ಚೆನ್ನೈನಲ್ಲಿ ವಿಶ್ವಕಪ್ ಪಂದ್ಯಗಳು ನಡೆಯಲಿವೆ.

ಇದನ್ನೂ ಓದಿ : ICC World Cup 2023 : ಹೈದರಾಬಾದ್​ ಕ್ರಿಕೆಟ್​ ಸ್ಟೇಡಿಯಮ್​ ಪೂರ್ತಿ ಪಕ್ಷಿಗಳ ಹಿಕ್ಕೆ! ಪ್ರೇಕ್ಷಕರಿಗೆ ಬೇಜಾರು

ಮುಂಬೈನ ವಾಂಖೆಡೆ ಕ್ರೀಡಾಂಗಣವು ನವೆಂಬರ್ 15 ರಂದು ಮೊದಲ ಸೆಮಿಫೈನಲ್ ಪಂದ್ಯಕ್ಕೆ ಆತಿಥ್ಯ ವಹಿಸಲಿದ್ದು, ಎರಡನೇ ಸೆಮಿಫೈನಲ್ ನವೆಂಬರ್ 16 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್​ನಲ್ಲಿ ನಡೆಯಲಿದೆ. ಎರಡೂ ಸೆಮಿಫೈನಲ್ ಪಂದ್ಯಗಳಿಗೆ ಮೀಸಲು ದಿನವಿದೆ. ಗ್ರ್ಯಾಂಡ್ ಫಿನಾಲೆ ನವೆಂಬರ್ 19 ರಂದು ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ನವೆಂಬರ್ 20 ಮೀಸಲು ದಿನವಾಗಿದೆ.

ಮೊದಲ ಪಂದ್ಯದಲ್ಲಿ ನ್ಯೂಜಿಲ್ಯಾಂಡ್​ಗೆ ಸುಲಭ ಜಯ

ಡವೋನ್ ಕಾನ್ವೆ (ಅಜೇಯ 152 ರನ್) ಹಾಗೂ ಯುವ ಆಲ್​ರೌಂಡರ್ ರಚಿನ್ ರವೀಂದ್ರ (ಅಜೇಯ 123) ಜೋಡಿಯ ದಾಖಲೆಯ 273 ರನ್​ಗಳ ಜತೆಯಾಟದಿಂದ ಮಿಂಚಿದ ನ್ಯೂಜಿಲ್ಯಾಂಡ್​ ತಂಡ ವಿಶ್ವ ಕಪ್​ 2023ರ ಮೊದಲ (ICC World Cup 2023) ಪಂದ್ಯದಲ್ಲಿ ಕಳೆದ ಆವೃತ್ತಿಯ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ 9 ವಿಕೆಟ್​ಗಳ ಸುಲಭ ವಿಜಯ ದಾಖಲಿಸಿದೆ. ಈ ಮೂಲಕ ಕಳೆದ ಆವೃತ್ತಿಯ ಫೈನಲ್ ಪಂದ್ಯದ ವಿವಾದಾತ್ಮಕ ಸೋಲಿಗೆ ಪ್ರತ್ಯುತ್ತ ಕೊಟ್ಟಿದೆ. ಈ ಪಂದ್ಯದೊಂದಿಗೆ ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ವಿಶ್ವ ಕಪ್​ಗೆ ಭರ್ಜರಿ ಆರಂಭ ದೊರಕಿದೆ. ಜತೆಗೆ ದೊಡ್ಡ ಮೊತ್ತದ ಸ್ಕೋರ್​ಗಳ ಪಂದ್ಯಗಳು ನಡೆಯುವ ಎಲ್ಲ ಸೂಚನೆಗಳು ಲಭಿಸಿವೆ.

ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಆಯೋಜನೆಗೊಂಡಿದ್ದ ಪಂದ್ಯದಲ್ಲಿ ಟಾಸ್​ ಗೆದ್ದ ನ್ಯೂಜಿಲ್ಯಾಂಡ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಎದುರಾಳಿ ಇಂಗ್ಲೆಂಡ್ ತಂಡವನ್ನು 9 ವಿಕೆಟ್​ಗೆ 282 ರನ್​ಗಳಿಗೆ ಕಟ್ಟಿ ಹಾಕಿತು. ಸ್ಪರ್ಧಾತ್ಮಕ ಮೊತ್ತಕ್ಕೆ ಪ್ರತಿಯಾಗಿ ಆಡಿದ ನ್ಯೂಜಿಲ್ಯಾಂಡ್​ ಬಳಗ ಇನ್ನೂ 82 ಎಸೆತಗಳು ಬಾಕಿ ಇರುವಂತೆಯೇ ಕೇವಲ ಒಂದು ವಿಕೆಟ್​ ಕಳೆದುಕೊಂಡು 283 ರನ್ ಬಾರಿಸಿ ಜಯ ಶಾಲಿಯಾಯಿತು.

ದ್ವಿಪಕ್ಷೀಯ ಸರಣಿಯಲ್ಲಿ ಸದಾ ದುರ್ಬಲ ತಂಡದಂತೆ ತೋರುವ ನ್ಯೂಜಿಲ್ಯಾಂಡ್ ತಂಡ ಮತ್ತೊಮ್ಮೆ ವಿಶ್ವ ಕಪ್​ಗಳಲ್ಲಿ ತಮ್ಮ ಭರ್ಜರಿ ಪ್ರದರ್ಶನದ ಸುಳಿವನ್ನು ಕೊಟ್ಟಿತು.

ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿ ನ್ಯೂಜಿಲ್ಯಾಂಡ್​ ತಂಡ 10 ರನ್​ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು. ವಿಲ್​ ಯಂಗ್ ಖಾತೆ ತೆರೆಯುವ ಮೊದಲೇ ಔಟಾಗಿ ಪೆವಿಲಿಯನ್​ಗೆ ಮರಳಿದರು. ಈ ವೇಳೆ ಇಂಗ್ಲೆಂಡ್ ತಂಡ ತನ್ನ ಮೊತ್ತವನ್ನು ಕಾಪಾಡಿಕೊಳ್ಳಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಆ ಬಳಿಕ ಬ್ಯಾಟಿಂಗ್ ವೈಭವ ತೋರಿಸಿದ ಕಾನ್ವೆ ಹಾಗೂ ರಚಿನ್ ರವೀಂದ್ರ ತಂಡದ ಗೆಲುವನ್ನು ಸುಲಭವಾಗಿಸಿದರು. ಇಂಗ್ಲೆಂಡ್ ಬೌಲರ್​ಗಳನ್ನು ಬೆಂಡೆತ್ತಿದ ಈ ಜೋಡಿ ಬಿರುಸಿನ ಬ್ಯಾಟಿಂಗ್ ನಡೆಸಿತು.

Exit mobile version