ಮುಂಬಯಿ: ಸಾಮಾಜಿಕ ಜಾಲತಾಣದಲ್ಲಿ ಹಲವು ವೈರಲ್ ವಿಡಿಯೋಗಳು(Viral Video) ಹರಿದಾಡುತ್ತಿರುತ್ತವೆ. ಆದರೆ ಅವುಗಳಲ್ಲಿ ಕೆಲವೊಂದು ವಿಡಿಯೋಗಳು ವಿಶೇಷ ಕಾರಣದಿಂದಾಗಿ ಜನರ ಗಮನ ಸೆಳೆದುಬಿಡುತ್ತದೆ. ಇದೀಗ ಇತಂಹದ್ದೇ ವಿಡಿಯೊವೊಂದು ಕ್ರಿಕೆಟ್ ಅಭಿಮಾನಿಗಳ ಮನಗೆದ್ದಿದೆ. ಮಕ್ಕಳ ಕ್ರಿಕೆಟ್ ಟೂರ್ನಿಯಲ್ಲಿ ರನೌಟ್ ಮಾಡು ಹರಸಾಹಸಪಟ್ಟ ವಿಡಿಯೊವೊಂದು ವೈರಲ್(Viral Run Out Video) ಆಗಿದೆ.
ಮೈದಾನದಲ್ಲಿ ಶಾಲಾ ವಿದ್ಯಾರ್ಥಿಗಳು ಕ್ರಿಕೆಟ್ ಟೂರ್ನಿಯೊಂದ ಪಂದ್ಯವನ್ನು ಆಡುತ್ತಿದ್ದರು. ಈ ಸಂದರ್ಭದಲ್ಲಿ ಸ್ಟ್ರೈಕರ್ನಲ್ಲಿದ್ದ ಬ್ಯಾಟರ್ ಚೆಂಡನ್ನು ಹೊಡೆದು ರನ್ ಗಳಿಸಲು ನಾನ್ಸ್ಟ್ರೈಕ್ಗೆ ಓಡಿದ್ದಾನೆ. ಚೆಂಡು ಫೀಲ್ಡರ್ ಕೈ ಸೇರಿದ ಕಾರಣ ನಾನ್ಸ್ಟ್ರೈಕ್ಕರ್ನಲ್ಲಿದ್ದ ಬ್ಯಾಟರ್ ಓಡಲು ನಿರಾಕರಿಸಿ ನಾನ್ಸ್ಟ್ರೈಕ್ನಲ್ಲಿಯೇ ನಿಲ್ಲುತ್ತಾನೆ. ಸುಲಭವಾಗಿ ರನೌಟ್ ಅವಕಾಶ ಸಿಕ್ಕರೂ ಕೂಡ ಫೀಲ್ಡರ್ ಗಡಿಬಿಡಿಯಲ್ಲಿ ಚೆಂಡನ್ನು ಕೀಪರ್ ಕೈಗೆ ಎಸೆಯದೆ ನಾನ್ಸ್ಟ್ರೈಕ್ನತ್ತ ಬಿಸಾಡುತ್ತಾನೆ. ಚೆಂಡು ವಿಕೆಟ್ಕೆ ಬಡಿಯದೆ ಮತ್ತೊಂದು ಫೀಲ್ಡರ್ ಕೈ ಸೇರಿತು. ಆತ ಕೀಪರ್ ಕಡೆ ಚೆಂಡನ್ನು ಎಸೆದ ವೇಳೆ ಪಿಚ್ ಬದಿಯಲ್ಲಿ ನಿಂತಿದ್ದ ಫೀಲ್ಡರ್ ಒಬ್ಬ ಚೆಂಡು ಕ್ಯಾಚ್ ಹಿಡಿದು ವಿಕೆಟ್ಕೆ ಎಸೆತುತ್ತಾನೆ. ಇಲ್ಲಿಯೂ ಗುರಿ ತಪ್ಪುತ್ತದೆ. ನಾನ್ಸ್ಟ್ರೈಕ್ನಲ್ಲಿದ್ದ ಬ್ಯಾಟರ್ಗಳು ತಮ್ಮ ಪಾಡಿಗೆ ತಾವು ಚರ್ಚೆಯಲ್ಲಿ ಮಗ್ನರಾಗಿರುತ್ತಾರೆ. ಕೀಪರ್ ಕೂಡ ರನೌಟ್ ಮಾಡಲು ಎಡವುತ್ತಾನೆ. ಎದುರಾಳಿಗಳ ಪರದಾಟ ಕಂಡ ಬ್ಯಾಟರ್ ತಕ್ಷಣ ಸ್ಟ್ರೈಕ್ಗೆ ಓಡಿ ರನೌಟ್ ಅಪಾಯದಿಂದ ಪಾರಾಗಿದ್ದಾನೆ.
ಈ ಹಾಸ್ಯಮಯ ರನೌಟ್ ಪ್ರಯತ್ನದ ವಿಡಿಯೊವನ್ನು ಅಂಪೈರ್ ರಿಚರ್ಡ್ ಕೆಟಲ್‌ಬರೋ ತಮ್ಮ ಟ್ವಿಟರ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡು ‘ಕ್ರಿಕೆಟ್‌ನಲ್ಲಿ ಬಿಲಿಯನ್ ಕ್ಷಣವನ್ನು ನೋಡಿದ್ದೇನೆ. ಆದರೆ ಈ ರೀತಿಯ ರೋಚಕ ಕ್ಷಣವನ್ನು ನೋಡಿದ್ದು ಇದೇ ಮೊದಲು’ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ T20 World Cup : ಭಾರತ- ಪಾಕ್ ಪಂದ್ಯ ಐಸಿಸ್ ಉಗ್ರರಿಂದ ಬಾಂಬ್ ಬೆದರಿಕೆ
ಐಸಿಸಿ ಕೂಟಗಳಲ್ಲಿ ಅಂಪೈರ್ ರಿಚರ್ಡ್ ಕೆಟಲ್‌ಬರೋ ಟೀಮ್ ಇಂಡಿಯಾ ಪಾಲಿಗೆ ಐರನ್ ಲೆಗ್ ಎನಿಸಿಕೊಂಡಿದ್ದಾರೆ. ರಿಚರ್ಡ್ ಕೆಟಲ್‌ಬರೋ ಕಾರ್ಯನಿರ್ವಹಿಸಿದ ಎಲ್ಲ ಮಹತ್ವದ ಪಂದ್ಯದಲ್ಲಿಯೂ ಭಾರತ ತಂಡ ಸೋಲುಕಂಡಿದೆ.
2014 ರಿಂದ ರಿಚರ್ಡ್ ಕೆಟಲ್‌ಬರೋ ಅಂಪೈರಿಂಗ್ ಮಾಡಿದ ಎಲ್ಲ ಪ್ರಮುಖ ಪಂದ್ಯಗಳಲ್ಲಿಯೂ ಟೀಮ್ ಇಂಡಿಯಾ ಸೋಲು ಕಂಡಿದೆ. 2014ರ ಟಿ20 ವಿಶ್ವ ಕಪ್ ಫೈನಲ್, 2015ರ ಏಕದಿನ ವಿಶ್ವ ಕಪ್ ಸೆಮಿಫೈನಲ್, 2016ರ ಟಿ20 ವಿಶ್ವ ಕಪ್ ಸೆಮಿಫೈನಲ್, 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್, 2019ರ ಏಕದಿನ ವಿಶ್ವ ಕಪ್ ಸೆಮಿಫೈನಲ್, 2021ರ ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್ ಫೈನಲ್, 2023ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಸೋತಿತ್ತು. ಹೀಗಾಗಿ ಭಾರತ ತಂಡ ಆಡುವ ಪ್ರಮುಖ ಪಂದ್ಯಗಳಲ್ಲಿ ರಿಚರ್ಡ್ ಕೆಟಲ್‌ಬರೋ ಅಂಪೈರ್ ಆದರೆ ಭಾರತ ಸೋಲುವುದು ಖಚಿತ ಎಂಬ ಅಭಿಪ್ರಾಯ ಅಭಿಮಾನಿಗಳದ್ದಾಗಿದೆ.