Site icon Vistara News

Viral Video: ಐಪಿಎಲ್​​ ಪಂದ್ಯದ ವೇಳೆ ಪಾಕಿಸ್ತಾನ ಟಿ20 ವೀಕ್ಷಿಸಿದ ಅಭಿಮಾನಿ

Viral Video

ಜೈಪುರ: ಡೆಲ್ಲಿ ಕ್ಯಾಪಿಟಲ್ಸ್​ ಮತ್ತು ಸನ್​ರೈಸರ್ಸ್ ಹೈದರಾಬಾದ್(SRH vs DC)​ ತಂಡಗಳು ಏಪ್ರಿಲ್​ 20ರಂದು ಐಪಿಎಲ್​ ಪಂದ್ಯದಲ್ಲಿ ಮುಖಾಮುಖಿಯಾಗಿತ್ತು. ಈ ಪಂದ್ಯದ ವೇಳೆ ಕ್ರಿಕೆಟ್​ ಅಭಿಮಾನಿಯೊಬ್ಬ ಗ್ಯಾಲರಿಯಲ್ಲಿ ಕುಳಿತು ತನ್ನ ಮೊಬೈಲ್​ನಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲ್ಯಾಂಡ್(PAK vs NZ)​ ನಡುವಣ 2ನೇ ಟಿ20 ಪಂದ್ಯವನ್ನು ವೀಕ್ಷಿಸಿದ್ದಾನೆ. ಈ ವಿಡಿಯೊ 3 ದಿನಗಳ ಬಳಿಕ ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video)​ ಆಗಿದೆ.

ಅಭಿಮಾನಿಯೊಬ್ಬ ಐಪಿಎಲ್​ ಪಂದ್ಯವನ್ನು ವೀಕ್ಷಿಸುವ ಮಧ್ಯೆಯೂ ಪಾಕ್​ ಮತ್ತು ಕಿವೀಸ್​ ನಡುವಣ ಟಿ20 ಪಂದ್ಯವನ್ನು ವೀಕ್ಷಿಸಿ ಕ್ರಿಕೆಟ್​ ಮೇಲಿರುವ ಪ್ರೀತಿಯನ್ನು ತೋರಿಸಿಕೊಟ್ಟಿದ್ದಾನೆ. ಈ ವಿಡಿಯೊವನ್ನು ಪಾಕಿಸ್ತಾನ ಮೂಲದ ನವಾಝ್​​ ಎನ್ನುವಾತ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡು ‘ಸಹೋದರ ಕ್ರೀಡಾಂಗಣದಲ್ಲಿ ಕುಳಿತು ಐಪಿಎಲ್​ ಪಂದ್ಯದ ಬದಲು ಪಾಕಿಸ್ತಾನ-ನ್ಯೂಜಿಲ್ಯಾಂಡ್​ ಪಂದ್ಯ ವೀಕ್ಷಿಸುತ್ತಿದ್ದಾನೆ’ ಎಂದು ಬರೆದುಕೊಂಡಿದ್ದಾರೆ. ಈ ಪಂದ್ಯವನ್ನು ಪಾಕಿಸ್ತಾನ 7 ವಿಕೆಟ್​ ಅಂತರದಿಂದ ಗೆದ್ದು ಬೀಗಿತ್ತು.

ಇಲ್ಲಿನ ಅರುಣ್​ ಜೇಟ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಂನಲ್ಲಿ ಶನಿವಾರ ನಡೆದಿದ್ದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಹೈದರಾಬಾದ್​ ತಂಡಕ್ಕೆ ಆರಂಭಿಕರಾದ ಟ್ರಾವಿಸ್​ ಹೆಡ್​(89) ಮತ್ತು ಅಭಿಷೇಕ್​ ಶರ್ಮ(46) ಜಿದ್ದಿಗೆ ಬಿದ್ದವರಂತೆ ಬ್ಯಾಟ್ ಬೀಸಿ ಅಮೋಘ ಆರಂಭ ಒದಗಿಸಿದರು. ಇವರ ಈ ಬ್ಯಾಟಿಂಗ್​ ಪರಾಕ್ರಮದಿಂದ ತಂಡ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ಗೆ 266 ರನ್​ ಬಾರಿಸಿತು. ಸವಾಲಿನ ಮೊತ್ತವನ್ನು ದಿಟ್ಟ ರೀತಿಯಲ್ಲಿ ಬೆನ್ನಟ್ಟಿಕೊಂಡು ಹೋದ ಡೆಲ್ಲಿ ಕ್ಯಾಪಿಟಲ್ಸ್​ ಅಂತಿಮವಾಗಿ 19.1 ಓವರ್​ಗಳಲ್ಲಿ 199 ರನ್​ಗೆ ಸರ್ವಪತನ ಕಂಡಿತ್ತು.

ಇದನ್ನೂ ಓದಿ SRH vs DC: ಬೃಹತ್​ ಮೊತ್ತದ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಹೈದರಾಬಾದ್

ಪಾಕಿಸ್ತಾನ ಮತ್ತು ನ್ಯೂಜಿಲ್ಯಾಂಡ್​ ನಡುವೆ 5 ಪಂದ್ಯಗಳ ಟಿ20 ಸರಣಿ ನಡೆಯುತ್ತಿದ್ದು. ಈಗಾಗಲೇ ಮೂರು ಪಂದ್ಯಗಳು ಮುಕ್ತಾಯ ಕಂಡಿದೆ. ಉಭಯ ತಂಡಗಳು ಕೂಡ ತಲಾ ಒಂದೊಂದು ಪಂದ್ಯಗಳನ್ನು ಗೆದ್ದಿವೆ. ಮೊದಲ ಪಂದ್ಯ ಮಳೆಯಿಂದ ರದ್ದುಗೊಂಡಿತ್ತು. ನಾಲ್ಕನೇ ಪಂದ್ಯ ಏಪ್ರಿಲ್​ 25ರಂದು ನಡೆಯಲಿದೆ.

3ನೇ ಪಂದ್ಯದಲ್ಲಿ ಕಿವೀಸ್​ಗೆ ಗೆಲುವು


ಮೂರನೇ ಟಿ20 ಪಂದ್ಯದಲ್ಲಿ ನ್ಯೂಜಿಲ್ಯಾಂಡ್​ ತಂಡ 7 ವಿಕೆಟ್​ಗಳಿಂದ ಪಾಕಿಸ್ತಾನವನ್ನು ಮಣಿಸುವಲ್ಲಿ ಯಶಸ್ವಿಯಾಗಿದೆ. ಭಾನುವಾರ ನಡೆದಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಪಾಕಿಸ್ತಾನ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ಗೆ 178 ರನ್​ ಬಾರಿಸಿತು. ಇದನ್ನು ಬೆನ್ನಟ್ಟಿದ ನ್ಯೂಜಿಲ್ಯಾಂಡ್​ 18.2 ಓವರ್​ಗಳಲ್ಲಿ ಕೇವಲ 3 ವಿಕೆಟ್​ ಕಳೆದುಕೊಂಡು 179 ರನ್​ ಬಾರಿಸಿ ಗೆಲುವು ಸಾಧಿಸಿತ್ತು.

Exit mobile version