Site icon Vistara News

Viral Video: ರಕ್ಕಸ ಗಾತ್ರದ ಅಲೆಗಳ ಮಧ್ಯೆ ಈಜಿ ದಡ ಸೇರಿದ ಮಹಿಳೆ; ದೂರ ತಿಳಿದರೆ ಅಚ್ಚರಿ ಖಚಿತ!

Woman swims 36 km

ಮುಂಬಯಿ: ಸಾಮಾಜಿಕ ಜಾಲತಾಣದಲ್ಲಿ ಹಲವು ವೈರಲ್​ ವಿಡಿಯೋಗಳು(Viral Video) ಹರಿದಾಡುತ್ತಿರುತ್ತವೆ. ಆದರೆ ಅವುಗಳಲ್ಲಿ ಕೆಲವೊಂದು ವಿಡಿಯೋಗಳು ವಿಶೇಷ ಕಾರಣದಿಂದಾಗಿ ಜನರ ಗಮನ ಸೆಳೆದುಬಿಡುತ್ತದೆ. ಇದೀಗ ಇತಂಹದ್ದೇ ವಿಡಿಯೊವೊಂದು ಹಲವರ ಗಮನ ಸೆಳೆದಿದೆ. ಮಹಿಳೆಯೊಬ್ಬರು ಮುಂಬಯಿ ವರ್ಲಿ ಸೀ ಲಿಂಕ್‌ನಿಂದ ಗೇಟ್‌ವೇ ಆಫ್ ಇಂಡಿಯಾದವರೆಗೆ(Gateway of India) 36 ಕಿ.ಮೀ(Woman swims 36 km ) ಈಜುವ ವಿಡಿಯೊ ವೈರಲ್​ ಆಗಿದೆ.

ಈ ಮಹಿಳೆ ವರ್ಲಿ ಸೀ ಲಿಂಕ್‌ನಿಂದ(Worli Sea Link) ಗೇಟ್‌ವೇ ಆಫ್ ಇಂಡಿಯಾದವರೆಗೆ 36 ಕಿ.ಮೀ ಈಜುವ ವಿಡಿಯೊ ಕಂಡ ಅನೇಕರು ಅವರ ಸಾಧನೆಗೆ ಸಲಾಂ ಹೊಡೆದಿದ್ದಾರೆ. ರಕ್ಕಸ ಗಾತ್ರದ ಅಲೆಗಳ ಮಧ್ಯೆಯೂ ಅವರು ಛಲ ಬಿಡದೆ ಈಜಿ ದಡ ಸೇರಿದ್ದಾರೆ. ಅವರ ಈ ಅದ್ಭುತ ಸಾಧನೆಯ ವಿಡಿಯೊವನ್ನು ಸುಚೇತಾ ದೇಬ್ ಬರ್ಮನ್ ಅವರು ತಮ್ಮ( Instagram) ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೊದಲ್ಲಿ ಆಕೆ ಈಜುವ ಮೂಲಕ 36 ಕಿ.ಮೀ ಕ್ರಮಿಸುತ್ತಿರುವುದು ಕಂಡುಬಂದಿದೆ. ಈ ಪೋಸ್ಟ್ ಆಗಸ್ಟ್ 4 ರಂದು ಹಂಚಿಕೊಳ್ಳಲಾಗಿದ್ದು ಪೋಸ್ಟ್ ಮಾಡಿದ ನಂತರ ಇದನ್ನು ಆರು ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಜತೆಗೆ 50,000 ಕ್ಕೂ ಅಧಿಕ ಲೈಕ್‌ಗಳನ್ನು ಪಡೆದುಕೊಂಡಿದೆ.

ಈ ಮಹಿಳೆಯ ಸಾಧನೆ ಕಂಡು ಅನೇಕ ನೆಟ್ಟಿಗರು ಮೆಚ್ಚುಗೆಯ ಕಮೆಂಟ್​ಗಳನ್ನು ಮಾಡಿದ್ದಾರೆ. “ನಿಮ್ಮಂತಹ ಪ್ರತಿಭೆಗಳು ಒಲಿಂಪಿಕ್ಸ್​ನಲ್ಲಿ ಪಾಳ್ಗೊಳ್ಳಬೇಕು” “ನೀವು ನಿಜವಾಗಿತೂ ಛಲಗಾರ್ತಿ ನಿಮ್ಮ ಈ ಸಾಧನೆ ಅನೇಕರಿಗೆ ಸ್ಫೂರ್ತಿ” ಹೀಗೆ ಹಲವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ Viral Video: ತಂದೆ-ತಾಯಿಯನ್ನು ವಿಮಾನಕ್ಕೆ ಸ್ವಾಗತಿಸಿದ ಗಗನಸಖಿ; ಯುವತಿ ಕಣ್ಣಲ್ಲಿ ಪನ್ನೀರು

ಬಾಯ್‌ಫ್ರೆಂಡ್‌ ಮೇಲಿನ ಕೋಪಕ್ಕೆ 80 ಅಡಿ ವಿದ್ಯುತ್‌ ಟವರ್‌ ಹತ್ತಿದ ಯುವತಿ

ರಾಯ್‌ಪುರ: ಬಾಯ್‌ಫ್ರೆಂಡ್‌ ಮೇಲೆ ಕ್ಷುಲ್ಲಕ ಕಾರಣಕ್ಕೆ ಕೋಪಗೊಂಡರೂ ಯುವತಿ ಏನು ಮಾಡುತ್ತಾಳೆ? ಹುಡುಗ ನೂರು ಬಾರಿ ಕಾಲ್‌ ಮಾಡಿದರೂ ಸ್ವೀಕರಿಸುವುದಿಲ್ಲ, ಎರಡು ದಿನ ಮಾತು ಬಿಡುತ್ತಾಳೆ, ವಾಟ್ಸ್‌ಆ್ಯಪ್‌ನಲ್ಲಿ ಬ್ಲಾಕ್‌ ಮಾಡುತ್ತಾಳೆ. ಕೊನೆಗೆ ಬಾಯಿಗೆ ಬಂದಹಾಗೆ ಬೈದು, ಸಾರಿ ಕೇಳಿಸಿಕೊಂಡು ಲವ್‌ ಯು ಕಣೋ ಎನ್ನುತ್ತಾಳೆ. ಅಲ್ಲಿಗೆ ಕೋಳಿ ಜಗಳ ಮುಗಿಯುತ್ತದೆ. ಆದರೆ, ಛತ್ತೀಸ್‌ಗಢದಲ್ಲಿ ಯುವತಿಯೊಬ್ಬಳು ಬಾಯ್‌ಫ್ರೆಂಡ್‌ ಮೇಲೆ ಕೋಪಗೊಂಡು 80 ಅಡಿ ಎತ್ತರದ ವಿದ್ಯುತ್‌ ಟ್ರಾನ್ಸ್‌ಮಿಷನ್‌ ಟವರ್‌ ಹತ್ತಿದ್ದಾಳೆ. ಈ ವಿಡಿಯೊ (Viral Video) ಈಗ ಭಾರಿ ವೈರಲ್‌ ಆಗಿದೆ.

ಛತ್ತೀಸ್‌ಗಢದ ಗೌರೇಲಾ ಪೆಂಡ್ರಾ ಮಾರ್ವಾಹಿ ಜಿಲ್ಲೆಯಲ್ಲಿ ಯುವತಿಯೊಬ್ಬಳು ಪ್ರಿಯತಮನ ಜತೆ ಜಗಳವಾಡಿದ್ದಾಳೆ. ಕೋಪದಲ್ಲಿ ಆತನು ನಾಲ್ಕು ಮಾತು ಬೈದಿದ್ದಾನೆ. ಇಷ್ಟಕ್ಕೇ ಕುದ್ದುಹೋದ ಆಕೆ, 80 ಅಡಿ ಎತ್ತರದ ಹೈಟೆನ್ಶನ್‌ ಟವರ್‌ ಹತ್ತಿದ್ದಾಳೆ. ಅಲ್ಲಿಂದ ಜಿಗಿದು ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಯುವಕನಿಗೆ ಧಮಕಿ ಹಾಕಿದ್ದಾಳೆ. ಎಲ್ಲಿ ಇವಳು ಹೇಳಿದ ಹಾಗೆ ಮಾಡುತ್ತಾಳೋ ಎಂದು ಯುವಕನೂ ಹೈಟೆನ್ಶನ್‌ ಟವರ್‌ ಹತ್ತಿದ್ದಾನೆ.

ಯುವತಿ ಟವರ್‌ ಹತ್ತಿದ ವಿಡಿಯೊ

Exit mobile version