Site icon Vistara News

Viral Video: ಧೋನಿ ಅಭಿಮಾನಿಗಳ ಅಬ್ಬರ ತಡೆಯಲಾಗದೆ ಕಿವಿ ಮುಚ್ಚಿಕೊಂಡ ರಸೆಲ್​

Viral Video

ಚೆನ್ನೈ: ಸೋಮವಾರ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ( M.A. Chidambaram Stadium ) ನಡೆದ ಚೆನ್ನೈ ಸೂಪರ್​ ಕಿಂಗ್ಸ್​(Chennai Super Kings) ಮತ್ತು ಕೋಲ್ಕತ್ತಾ ನೈಟ್​ ರೇಡರ್ಸ್​(Kolkata Knight Riders) ನಡುವಿನ ಪಂದ್ಯದಲ್ಲಿ ಮಹೇಂದ್ರ ಸಿಂಗ್​ ಧೋನಿ(MS Dhoni) ಅವರು ಬ್ಯಾಟಿಂಗ್​ ನಡೆಸಲು ಕ್ರೀಸ್​ಗೆ ಬಂದಾಗ ಅವರ ಅಭಿಮಾನಿಗಳು ಜೋರಾದ ಕಿರುಚಾಟ ನಡೆಸಿದರು. ಈ ಸದ್ದಿಗೆ ಎದುರಾಳಿ ಕೆಕೆಆರ್​ ತಂಡದ ಆಟಗಾರ ಆಂಡ್ರೆ ರೆಸಲ್(Andre Russell) ಕಿವಿ ಮುಚ್ಚಿಕೊಂಡಿದ್ದಾರೆ. ಇದರ ವಿಡಿಯೊ ವೈರಲ್​(Viral Video) ಆಗಿದೆ.

​ಧೋನಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿ ಕೆಳವು ವರ್ಷಗಳಾಗಿವೆ. ಕೇವಲ ಐಪಿಎಲ್​ ಟೂರ್ನಿಯಲ್ಲಿ(IPL 2024) ಮಾತ್ರ ಆಡುತ್ತಿದ್ದಾರೆ. ಕಳೆದ ವರ್ಷವೇ ಧೋನಿ ಅವರು ಐಪಿಎಲ್​ಗೆ ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಮುಂದೆ ಹಾಕಿದ್ದರು. ಈ ಬಾರಿಯ ಟೂರ್ನಿ ಅವರಿಗೆ ವಿದಾಯದ ಟೂರ್ನಿಯಾಗಲಿದೆ. ಈ ಮೂಲಕ ಧೋನಿ ಎಲ್ಲ ಮಾದರಿಯ ಕ್ರಿಕಟ್​ಗೂ ಗುಡ್​ಬೈ ಹೇಳಲಿದ್ದಾರೆ. ಹೀಗಾಗಿ ನೆಚ್ಚಿನ ಆಟಗಾರನ ಬ್ಯಾಟಿಂಗ್​ ಕುಣ್ತುಂಬಿಕೊಳ್ಳಲು ಅವರ ಅಭಿಮಾನಿಗಳು ಪ್ರತಿ ಪಂದ್ಯದ ವೇಳೆ ಬಹಳ ನಿರೀಕ್ಷೆಯಿಂದ ಕಾಯುತ್ತಿರುತ್ತಾರೆ. ಬ್ಯಾಟಿಂಗ್​ಗೆ ಬಂದೊಡನೆಯೇ ಸಂಪೂರ್ಣ ಸ್ಟೇಡಿಯಂ ಧೋನಿ ಹೆಸರಿನಿಂದ ಝೇಂಕಾರಿಸುತ್ತದೆ.

ಕೆಕೆಆರ್​ ಪಂದ್ಯದ ವೇಳೆಯೂ ಧೋನಿ ಬ್ಯಾಟಿಂಗ್​ಗೆ ಬಂದಾಗ ಅಭಿಮಾನಿಗಳು ಜೋರಾಗಿ ಧೋನಿಯ ಹೆಸರನ್ನು ಕೂಗಿದ್ದಾರೆ. ಇದೇ ವೇಳೆ ಜೈಲರ್​ ಸಿನೆಮಾದ ಸಾಂಗ್​ ಒಂದನ್ನು ಕೂಡ ಹಾಕಲಾಗಿತ್ತು. ಈ ಗದ್ದಲಕ್ಕೆ ರಸೆಲ್​ ಬೇಸತ್ತು ತಮ್ಮ ಕಿವಿಯನ್ನು ಮುಚ್ಚಿಕೊಂಡಿದ್ದಾರೆ. ಇದರ ವಿಡಿಯೊ ವೈರಲ್​ ಆಗಿದೆ. ರಸೆಲ್​ ಅವರು ಈ ಪಂದ್ಯದಲ್ಲಿ ತಮ್ಮ ಎಂದಿನ ಶೈಲಿಯ ಸ್ಫೋಟಕ ಬ್ಯಾಟಿಂಗ್​ ನಡೆಸುವಲ್ಲಿ ವಿಫಲರಾಗಿದ್ದರು. 10 ಎಸೆತಗಳಿಂದ 10 ರನ್​ ಮಾತ್ರ ಗಳಿಸಿದರು. ಇದರಲ್ಲಿ 2 ಬೌಂಡರಿ ಮಾತ್ರ ಕಂಡುಬಂದಿತು.

ಇದನ್ನೂ ಓದಿ IPL 2024: ಬಾಸ್​ಗೆ ಸುಳ್ಳು ಹೇಳಿ ಪಂದ್ಯ ವೀಕ್ಷಿಸುವಾಗ ಟಿವಿಯಲ್ಲಿ ಸಿಕ್ಕಿಬಿದ್ದ ಆರ್​ಸಿಬಿ ಅಭಿಮಾನಿ!

ಅಭಿಮಾನಿಗಳಿಗೆ ಚಮಕ್​​ ಕೊಟ್ಟ ಜಡೇಜಾ​


ಚೆನ್ನೈ ತಂಡದ ಗೆಲುವಿಗೆ ಮೂರು ರನ್​ಗಳ ಅಗತ್ಯವಿತ್ತು. ಈ ವೇಳೆ ಬ್ಯಾಟಿಂಗ್​ ನಡೆಸುತ್ತಿದ್ದ ಶಿವಂ ದುಬೆ ವಿಕೆಟ್​ ಪತನಗೊಂಡಿತು. ದುಬೆ ವಿಕೆಟ್​ ಬೀದ್ದ ತಕ್ಷಣ ಸ್ಟೇಡಿಯಂನಲ್ಲಿ ನೆರೆದಿದ್ದ ಧೋನಿ ಅಭಿಮಾನಿಗಳು ಜೋರಾಗಿ ಧೋನಿ ಹೆಸರು ಕೂಗುವ ಮೂಲಕ ಬ್ಯಾಟಿಂಗ್​ಗೆ ಬರುವಂತೆ ಆಗ್ರಹಿಸಿದರು. ಇದೇ ವೇಳೆ ರವೀಂದ್ರ ಜಡೇಜಾ ಅವರು ಬ್ಯಾಟ್​ ಹಿಡಿದು ಮೈದಾನಕ್ಕೆ ಬರುವಂತೆ ನಟನೆ ಮಾಡಿದರು. ಬಳಿಕ ಹಿಂದಿರುಗಿ ಡ್ರೆಸಿಂಗ್​ ರೂಮ್​ ಕಡೆ ಹೆಜ್ಜೆ ಹಾಕಿ ಅಭಿಮಾನಿಗಳಿಗೆ ಒಂದು ಕ್ಷಣ ಚಮಕ್​ ನೀಡಿದರು. ಬಳಿಕ ಧೋನಿ ಬ್ಯಾಟಿಂಗ್​ಗೆ ಇಳಿದು ಮೂರು ಎಸೆತಗಳಲ್ಲಿ 1 ರನ್​ ಮಾಡಿ ಅಜೇಯರಾಗಿ ಉಳಿದರು.

ಈ​ ಪಂದ್ಯದಲ್ಲಿ ಚೆನ್ನೈ ತಂಡ ಕೆಕೆಆರ್​ ವಿರುದ್ಧ 7 ವಿಕೆಟ್​ ಅಂತರದ ಗೆಲುವು ಸಾಧಿಸಿತು. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಕೆಕೆಆರ್ ತಂಡ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ಗೆ 137 ರನ್ ಬಾರಿಸಿತು. ಜವಾಬಿತ್ತ ಚೆನ್ನೈ 14 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್​ ನಷ್ಟಕ್ಕೆ 141 ರನ್ ಬಾರಿಸಿ ಗೆಲುವು ಸಾಧಿಸಿತು. ಋತುರಾಜ್ ಗಾಯಕ್ವಾಡ್​ (67 ರನ್​) ಸಮಯೋಚಿತ ಅರ್ಧ ಶತಕ ಹಾಗೂ ಬೌಲರ್​ಗಳ ಸಂಘಟಿತ ದಾಳಿ ಚೆನ್ನೈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು.

Exit mobile version