ಗಯಾನ: 2016ರಲ್ಲಿ ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಅಸಾಮಾನ್ಯ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ಅಂತಿಮ ಓವರ್ನಲ್ಲಿ ಸತತ 4 ಸಿಕ್ಸರ್ ಬಾರಿಸಿ ವೆಸ್ಟ್ ಇಂಡೀಸ್ ತಂಡವನ್ನು ಚಾಂಪಿಯನ್ ಪಟ್ಟಕೇರಿಸಿದ್ದ ಕಾರ್ಲೊಸ್ ಬ್ರಾಥ್ ವೇಟ್(Carlos Brathwaite), ಇದೀಗ ಅನಗತ್ಯವಾಗಿ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ತಾಳ್ಮೆ ಕಳೆದುಕೊಂಡು ತನ್ನ ಹೆಲ್ಮೆಟ್ ಅನ್ನು ಬ್ಯಾಟ್ನಿಂದ ಹೊಡೆದು ಸಿಕ್ಸರ್ಗಟ್ಟಿದ್ದಾರೆ. ಈ ವಿಡಿಯೊ ವೈರಲ್(Viral Video) ಆಗಿದೆ.
ಗ್ರ್ಯಾಂಡ್ ಕೇಮನ್ ಜಾಗ್ವಾರ್ ತಂಡದ ಜೋಶ್ ಲಿಟಲ್ ಎಸೆತದ ಬ್ರಾಥ್ ವೇಟ್ ಅವರ ಭುಜಕ್ಕೆ ತಾಗಿ ವಿಕೆಟ್ ಕೀಪರ್ ಕೈ ಸೇರಿತು. ಚೆಂಡಿಗೆ ಬ್ಯಾಟ್ ತಾಗಿರಬಹುದು ಎಂದು ಕೀಪರ್ ಔಟ್ಗಾಗಿ ಮನವಿ ಮಾಡಿದರು. ಫೀಲ್ಡ್ ಅಂಪೈರ್ ಔಟೆಂದು ತೀರ್ಪು ನೀಡಿದರು. ಅಂಪೈರ್ ಅವರ ತಪ್ಪು ನಿರ್ಣಯದಿಂದ ತಾಳ್ಮೆ ಕಳೆದುಕೊಂಡ ಬ್ರಾಥ್‌ವೈಟ್, ಡಗೌಟ್ ಕಡೆಗೆ ಹೋಗುವಾಗ ಸಿಟ್ಟಿನಿಂದ ಹೆಲ್ಮೆಟ್ ಮೇಲಕ್ಕೆ ಎಸೆದು ಬ್ಯಾಟ್ನಿಂದ ಜೋರಾಗಿ ಜೋರಾಗಿ ಹೊಡೆದರು. ಹೊಡೆದ ರಭಸಕ್ಕೆ ಹೆಲ್ಮೆಟ್ ಪುಡಿ ಪುಡಿಯಾಗಿ ಸಿಕ್ಸರ್ ಲೈನ್ನಿಂದ ಹೊರಕ್ಕೆ ಸಿಡಿಯಿತು. ಬಳಿಕ ಬ್ಯಾಟ್ ಕೂಡ ಎಸೆದು ಅಂಪೈರ್ ವಿರುದ್ಧ ಆಕ್ರೋಶ ಹೊರಹಾಕಿದರು. ಈ ಎಲ್ಲ ದೃಶ್ಯಗಳನ್ನು ವಿಡಿಯೊದಲ್ಲಿ ನೋಡಬಹುದಾಗಿದೆ.
ಇದನ್ನೂ ಓದಿ Viral Video: ಸೊಸೆಯಿಂದ ಅತ್ತೆಯ ಮೇಲೆ ಭೀಕರ ಹಲ್ಲೆ ವಿಡಿಯೊದಲ್ಲಿ ಸೆರೆ
2016ರ ಟಿ20 ವಿಶ್ವ ಕಪ್ ಫೈನಲ್ನ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ ಗೆಲ್ಲಲು ಅಂತಿಮ ಓವರ್ನಲ್ಲಿ 19 ರನ್ ಬೇಕಿತ್ತು. ಈ ಓವರ್ ಎಸೆಯಲು ಬಂದ ಬೆನ್ ಸ್ಟೋಕ್ಸ್ಗೆ ಕ್ರೀಸ್ನಲ್ಲಿದ್ದ ಕಾರ್ಲೊಸ್ ಬ್ರಾಥ್‌ವೇಟ್ ಸತತ ನಾಲ್ಕು ಸಿಕ್ಸರ್ ಸಿಡಿಸಿ ವೆಸ್ಟ್ ಇಂಡೀಸ್ಗೆ ಗೆಲುವು ತಂದು ಕೊಟ್ಟರು. ಈ ವೇಳೆ ಕಾಮೆಂಟರಿ ಪ್ಯಾನಲ್ನಲ್ಲಿದ್ದ ಇಯಾನ್ ಬಿಷಪ್ ಕಾರ್ಲೊಸ್ ಬ್ರಾಥ್‌ವೇಟ್, ಹೆಸರನ್ನು ನೆನಪಿಡಿ! (‘Remember the Name’) ಎಂದು ಹೇಳುವ ಮೂಲಕ ವಿಂಡೀಸ್ ಗೆಲುವಿನ ಸಂಭ್ರಮದಲ್ಲಿ ತಾವೂ ಕೂಡ ಭಾಗಿಯಾಗಿದ್ದರು.
2 ದಿನಗಳ ಹಿಂದಷ್ಟೇ ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶದ(Pakistan vs Bangladesh) ಹಿರಿಯ ಕ್ರಿಕೆಟ್ ಆಟಗಾರ ಶಕಿಬ್ ಅಲ್ ಹಸನ್(Shakib Al Hasan) ತಾಳ್ಮೆ ಕಳೆದುಕೊಂಡ(Angry Shakib Al Hasan) ಘಟನೆ ನಡೆದಿತ್ತು. ಮೊಹಮ್ಮದ್ ರಿಜ್ವಾನ್(Mohammad Rizwan) ಕ್ರೀಸ್ನಲ್ಲಿ ಬ್ಯಾಟಿಂಗ್ ನಡೆಸಲು ಸಿದ್ಧರಾಗದ ವೇಳೆ ಸಿಟ್ಟಿಗೆದ್ದ ಶಕಿಬ್ ಚೆಂಡನ್ನು ನೇರವಾಗಿ ರಿಜ್ವಾನ್ ಕಡೆ ಎಸೆದಿದ್ದರು. ಬಳಿಕ ಅಂಪೈರ್ ರಿಚರ್ಡ್ ಕೆಟಲ್‌ಬರೋ ಮಧ್ಯ ಪ್ರವೇಶಿಸಿ ಶಕಿಬ್ಗೆ ವಾರ್ನಿಂಗ್ ನೀಡಿದ್ದರು.