ಲಾರ್ಡ್: ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ(England vs Australia) ನಡುವೆ ಸಾಗುತ್ತಿರುವ ಆ್ಯಶಸ್(The Ashes, 2023) ಟೆಸ್ಟ್ ಸರಣಿಯ ದ್ವಿತೀಯ ಒಂದ್ಯ ಅತ್ಯಂತ ರೋಚಕ ಘಟ್ಟ ತಲುಪಿದೆ. ಇಂಗ್ಲೆಂಡ್ ಅಂತಿಮ ದಿನ(ಭಾನುವಾರ) 257 ರನ್ ಬಾರಿಸಿದರೆ ಗೆಲುವು ಸಾಧಿಸಲಿದೆ. ಆದರೆ ಈ ಪಂದ್ಯದ ನಾಲ್ಕನೇ ದಿನದಾಟದ ವೇಳೆ ನಡೆದ ಘಟನೆಯೊಂದರ ವಿಡಿಯೊ ಇದೀಗ ಎಲ್ಲಡೆ ವೈರಲ್(Viral Video) ಆಗಿದೆ.
ಆಸೀಸ್ ತಂಡದ ಆಟಗಾರ ಮಾರ್ನಸ್ ಲಬುಶೇನ್(Marnus Labuschagne) ಅವರು ಚ್ಯೂಯಿಂಗ್ ಗಮ್ ಜಗಿಯುತ್ತಾ ಬ್ಯಾಟಿಂಗ್ ನಡೆಸುತ್ತಿದ್ದರು. ಹೆಲ್ಮೆಟ್ ಸರಿಪಡಿಸು ಬರದಲ್ಲಿ ಬಾಯಲ್ಲಿದ್ದ ಚ್ಯೂಯಿಂಗ್ ಗಮ್ ಪಿಚ್ ಮೇಲೆ ಬಿದ್ದಿತು. ತಕ್ಷಣ ಇದನ್ನು ಎತ್ತಿಕೊಂಡು ಸಣ್ಣ ಮಗುವಿನಂತೆ ತಿಂದಿದ್ದಾರೆ. ಈ ವಿಡಿಯೊ ಮೈದಾನದ ದೊಡ್ಡ ಪರದೆಯಲ್ಲಿ ಕಂಡು ಬಂದಿತು. ಕಳೆದ ಭಾರತ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿಯೂ ಅವರು ಬ್ಯಾಟಿಂಗ್ ಪ್ಯಾಡ್ ಧರಿಸಿ ಡಗೌಟ್ನಲ್ಲಿ ನಿದ್ರೆಗೆ ಜಾರಿದ್ದ ವಿಡಿಯೊ ವೈರಲ್ ಆಗಿತ್ತು.
ಇದನ್ನೂ ಓದಿ AUS VS SA | ಪಂದ್ಯದ ಮಧ್ಯೆ ದಿಢೀರ್ ಬ್ಯಾಟಿಂಗ್ ನಿಲ್ಲಿಸಿ ಸಿಗರೇಟ್ ಲೈಟರ್ ಕೇಳಿದ ಲಬುಶೇನ್; ವಿಡಿಯೊ ವೈರಲ್
Gum incident pic.twitter.com/XKgEkBzr6t
— stu media acct (@stuwhymedia) June 29, 2023
ರೋಚಕ ಘಟ್ಟ ತುಲುಪಿದ ಟೆಸ್ಟ್
ಆ್ಯಶಸ್ ಸರಣಿ (Ashesh 2023) ಎರಡನೇ ಪಂದ್ಯವೂ ಕುತೂಹಲಕಾರಿ ಹಂತಕ್ಕೆ ತಲುಪಿದೆ. ಪಂದ್ಯದ ಕೊನೇ ದಿನದಲ್ಲಿ ಆತಿಥೇಯ ಇಂಗ್ಲೆಂಡ್ ತಂಡ ಗೆಲುವಿಗೆ 257 ರನ್ ಬೇಕಾಗಿದೆ. ಈಗಾಗಲೇ ನಾಲ್ಕು ವಿಕೆಟ್ಗಳು ಉರುಳಿರುವ ಕಾರಣ ಇನ್ನುಳಿದ ಆರು ವಿಕೆಟ್ಗಳಲ್ಲಿ ಗುರಿಯನ್ನು ಸಾಧಿಸುವ ಸವಾಲು ಬೆನ್ಸ್ಟೋಕ್ಸ್ ಪಡೆಗೆ ಎದುರಾಗಿದೆ. ಅತ್ತ ಆಸ್ಟ್ಟ್ರೇಲಿಯಾ ತಂಡದ ಬೌಲರ್ಗಳು ಕೂಡ ಗೆಲುವಿಗಾಗಿ ಸಾಹಸ ಮಾಡುತ್ತಿದ್ದು, ಕೊನೇ ದಿನ ಮತ್ತಷ್ಟು ಪ್ರಖರ ದಾಳಿ ನಡೆಸುವ ಮುನ್ಸೂಚನೆ ಕೊಟ್ಟಿದ್ದಾರೆ.
ಇಲ್ಲಿನ ಐತಿಹಾಸಿಕ ಲಾರ್ಡ್ಸ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರುವ ಹಣಾಹಣಿಯ ನಾಲ್ಕನೇ ದಿನವಾದ ಶನಿವಾರ ಎರಡನೇ ಇನಿಂಗ್ಸ್ನಲ್ಲಿ 279 ರನ್ ಗಳಿಸಿ ಆಲ್ಔಟ್ ಆದ ಆಸ್ಟ್ರೇಲಿಯಾ ತಂಡ 371 ರನ್ಗಳ ಗುರಿಯನ್ನು ಆತಿಥೇಯ ತಂಡಕ್ಕೆ ಒಡ್ಡಿತು. ಅಂತೆಯೇ ದಿನದಾಟ ಮುಕ್ತಾಯದ ವೇಳೆಗೆ ಇಂಗ್ಲೆಂಡ್ ತಂಡ 4 ವಿಕೆಟ್ ಕಳೆದುಕೊಂಡು 114 ರನ್ ಬಾರಿಸಿದೆ. ಜಾಕ್ ಕ್ರಾವ್ಲಿ (3), ಒಲಿ ಪೋಪ್ (3) ಹಾಗೂ ಜೋ ರೂಟ್ (18) ಬೇಗನೆ ವಿಕೆಟ್ ಒಪ್ಪಿಸಿದ್ದಾರೆ. ಹಿಂದಿನ ಇನಿಂಗ್ಸ್ನಲ್ಲಿ ಅರ್ಧ ಶತಕ ಬಾರಿಸಿದ್ದ ಹ್ಯಾರಿ ಬ್ರೂಕ್ (4) ಕೂಡ ಔಟಾಗಿದ್ದಾರೆ. ಕೊನೇ ದಿನ ಪಿಚ್ ಇನ್ನಷ್ಟು ಬೌಲಿಂಗ್ಗೆ ನೆರವಾಗುವ ಸಾಧ್ಯತೆಗಳಿವೆ. ಹೀಗಾಗಿ ಆಸ್ಟ್ತೇಲಿಯಾ ತಂಡಕ್ಕೆ ಗುರಿ ಮುಟ್ಟುವುದು ದೊಡ್ಡ ಸವಾಲೆನಿಸಿದೆ.
ಮಿಚೆಲ್ ಸ್ಟಾರ್ಕ್ ಹಾಗೂ ಪ್ಯಾಟ್ ಕಮಿನ್ಸ್ ತಲಾ ಎರಡು ವಿಕೆಟ್ಗಳನ್ನು ಕಬಳಿಸುವ ಮೂಲಕ ಇಂಗ್ಲೆಂಡ್ ಹಿನ್ನಡೆಗೆ ಕಾರಣರಾಗಿದ್ದಾರೆ. ಏತನ್ಮಧ್ಯೆ, ಬೆನ್ ಡಕೆಟ್ (50) ಹಾಗೂ ನಾಯಕ ಬೆನ್ ಸ್ಟೋಕ್ಸ್ (17) ಐದನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.