Site icon Vistara News

Viral Video: ಏಷ್ಯಾಕಪ್​ಗೆ ಬಾಂಗ್ಲಾ ಸಜ್ಜು, ಕೆಂಡ ತುಳಿದು ಅಭ್ಯಾಸ; ಇದರ ರಹಸ್ಯವೇನು

Naim Sheikh working with a mind trainer ahead of Asia Cup

ಢಾಕಾ: ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ಹೈಬ್ರಿಡ್​ ಮಾದರಿಯಲ್ಲಿ ನಡೆಯುವ ಏಷ್ಯಾಕಪ್​ಗೆ(Asia Cup) ಇನ್ನು ಎರಡು ವಾರಗಳು ಮಾತ್ರ ಉಳಿದಿದೆ. ಈ ಟೂರ್ನಿಗಾಗಿ ಎಲ್ಲ ತಂಡಗಳು ಭರದ ಸಿದ್ಧತೆ ನಡೆಸುತ್ತಿದೆ. ಆದರೆ ಬಾಂಗ್ಲಾದೇಶ ಕ್ರಿಕೆಟಿಗರ ಪೂರ್ವ ಸಿದ್ಧತೆಯನ್ನು ಕಂಡು ಕ್ರಿಕೆಟ್​ ಅಭಿಮಾನಿಗಳು ಬೆಚ್ಚಿ ಬಿದ್ದಿದ್ದಾರೆ. ಹೌದು ಬಾಂಗ್ಲಾ ತಂಡದ ಆಟಗಾರ ನಯೀಮ್ ಶೇಕ್(Mohammad Naim Sheikh) ಅವರು ಉರಿಯುವ ಕೆಂಡದ ಮೇಲೆ ನಡೆದಾಡಿ ಬಳಿಕ ಅಭ್ಯಾಸ ನಡೆಸಿದ ವಿಡಿಯೊವೊಂದು ವೈರಲ್(Viral Video)​ ಆಗಿದೆ.

ಕೆಂಡದ ಮೇಲೆ ನಡಿಗೆ

ಸೈಫ್ ಅಹ್ಮದ್ ಎಂಬ ಟ್ವಿಟ್ಟರ್‌ ಬಳಕೆದಾರ ನಯೀಮ್ ಶೇಕ್ ಅವರು ಕೆಂಡದ ಮೇಲೆ ನಡೆದಾಡುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೊದಲ್ಲಿ ಮೈದಾನದ ಮಧ್ಯ ಭಾಗದಲ್ಲಿ ಉರಿಯುತ್ತಿರುವ ಕೆಂಡದ ರಾಶಿಯಿದ್ದು ಅದರಲ್ಲಿ ಮೊಹಮ್ಮದ್ ನಯೀಮ್ ಶೇಕ್​ ಅವರು ಕೆಂಡದ ಮೇಲೆ ನಡೆಯುತ್ತಿರುವ ದೃಶ್ಯಗಳಿದೆ. “ಏಷ್ಯಾ ಕಪ್ ಹಿನ್ನಡೆಯಲ್ಲಿ ನಯೀಮ್ ಶೇಕ್ ಮೈಂಡ್ ಟ್ರೈನರ್ ಜತೆಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ” ಎಂದು ಬರೆದುಕೊಂಡಿದ್ದಾರೆ. 23 ವರ್ಷದ ನಯೀಮ್ ಶೇಕ್ ಬಾಂಗ್ಲಾ ತಂಡದ ಆರಂಭಿಕ ಆಟಗಾರನಾಗಿದ್ದಾರೆ. ಬಾಂಗ್ಲಾ ಪರ ನಾಲ್ಕು ಏಕದಿನ ಮತ್ತು 35 ಟಿ20 ಪಂದ್ಯಗಳನ್ನು ಆಡಿದ್ದಾರೆ.

ಬಾಂಗ್ಲಾದೇಶದಲ್ಲಿ ಕೆಂಡದ ಮೇಲೆ ನಡೆಯುವ ಮೂಲಕ ಏಕಾಗ್ರತೆಯನ್ನು ಹೆಚ್ಚಿಸಬಹುದು ಎಂಬ ನಂಬಿಕೆಯ ಆಚರಣೆಯೊಂದು ಹಿಂದಿನಿಂದಲೇ ಇದೆಯಂತೆ. ಇದೇ ಕಾರಣದಿಂದ ಆಟದ ಕಡೆ ಹೆಚ್ಚು ಗಮನ ಕೇಂದ್ರೀಕರಿಸುವ ನಿಟ್ಟಿನಲ್ಲಿ ನಯೀಮ್ ಶೇಕ್ ಕೆಂಡದ ಮೇಲೆ ನಡೆದಾಡಿದ್ದಾರೆ ಎಂದು ವರದಿಯಾಗಿದೆ. ಬಾಂಗ್ಲಾ ಆಟಗಾರನ ಈ ಸಿದ್ಧತೆ ಕಂಡು ಕ್ರಿಕೆಟ್​ ಅಭಿಮಾನಿಗಳು ಬೆಚ್ಚಿ ಬಿದ್ದಿದ್ದಾರೆ.

ಶಕೀಬ್​ ನಾಯಕ

ಅನುಭವಿ ಆಲ್​ರೌಂಡರ್​ ಶಕೀಬ್ ಅಲ್ ಹಸನ್ ಅವರು ಏಷ್ಯಾ ಕಪ್​ನಲ್ಲಿ ಬಾಂಗ್ಲಾದೇಶ ತಂಡವನ್ನು ಮುನ್ನಡೆಸಲಿದ್ದಾರೆ. ಆಗಸ್ಟ್ 12ರ ಶನಿವಾರ 17 ಸದಸ್ಯರ ತಂಡವನ್ನು ಬಾಂಗ್ಲಾ ಕ್ರಿಕೆಟ್​ ಮಂಡಳಿ ಪ್ರಕಟಿಸಿತ್ತು. ಶಕೀಬ್ ನೇತೃತ್ವದ ಬಾಂಗ್ಲಾದೇಶ ತನ್ನ ಮೊದಲ ಪಂದ್ಯವನ್ನು ಶ್ರೀಲಂಕಾ ವಿರುದ್ಧ ಆಗಸ್ಟ್ 31 ರಂದು ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆಡಲಿದೆ.

ಇದನ್ನೂ ಓದಿ Jasprit bumrah : ವೇಗದ ಬೌಲರ್​ ಜಸ್​ಪ್ರಿತ್​ ಬುಮ್ರಾ ಅವರ ಒಟ್ಟು ಸಂಪತ್ತಿನ ಮಾಹಿತಿ ಬಹಿರಂಗ

ಭಾರತ, ನೇಪಾಳ ಮತ್ತು ಪಾಕಿಸ್ತಾನ ʼಎʼ ಗುಂಪಿನಲ್ಲಿ ಸ್ಥಾನ ಪಡೆದಿದೆ. ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫಘಾನಿಸ್ತಾನ ʼಬಿʼ ಗುಂಪಿನಲ್ಲಿ ಕಾಣಿಸಿಕೊಂಡಿದೆ. ಒಟ್ಟು 13 ಪಂದ್ಯಗಳು ನಡೆಯಲಿದ್ದು ಇದರಲ್ಲಿ ನಾಲ್ಕು ಪಂದ್ಯಗಳು ಪಾಕಿಸ್ತಾನದಲ್ಲಿ ನಡೆದರೆ ಫೈನಲ್‌ ಸೇರಿ 9 ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿದೆ. 50 ಓವರ್‌ ಮಾದರಿಯಲ್ಲಿ ಟೂರ್ನಿ ನಡೆಯಲಿದೆ.

ಏಷ್ಯಾ ಕಪ್​ ವೇಳಾಪಟ್ಟಿ

Exit mobile version