Site icon Vistara News

Viral Video: ಮೈದಾನದಲ್ಲೇ ರವೂಫ್ ಕೆನ್ನೆಗೆ ಬಾರಿಸಿದ ನಾಯಕ ಬಾಬರ್​ ಅಜಂ

Babar Azam Slaps Haris Rauf

ಹೈದರಾಬಾದ್​: ಶುಕ್ರವಾರ ನಡೆದ ವಿಶ್ವಕಪ್​ನ(icc world cup 2023) 2ನೇ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ನೆದರ್ಲೆಂಡ್ಸ್‌ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಪಾಕಿಸ್ತಾನ 81 ರನ್​ಗಳ ಗೆಲುವು ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಕಂಡಿದೆ. ಆದರೆ ಪಾಕ್​ ತಂಡದ ನಾಯಕ ಬಾಬರ್​ ಅಜಂ(babar azam) ಸಹ ಆಟಗಾರ ಹ್ಯಾರಿಸ್‌ ರವೂಫ್(Haris Rauf) ಅವರಿಗೆ ಮೈದಾನದಲ್ಲೇ ಕೆನ್ನೆಗೆ ಬಾರಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video) ಆಗಿದೆ.

ಬೌಲಿಂಗ್​ ನಡೆಸಲು ಮುಂದಾಗುತ್ತಿದ್ದ ಹ್ಯಾರಿಸ್‌ ರವೂಫ್ ಅವರನ್ನು ಪಕ್ಕಕ್ಕೆ ಕರೆದು ಬಾಬರ್​ ಕೆನ್ನಗೆ ಬಾರಿಸಿದ್ದಾರೆ. ಅಸಲಿಗೆ ಬಾಬರ್​ ಯಾವುದೇ ಕೋಪದಿಂದ ರವೂಫ್ ಕೆನ್ನಗೆ ಬಾರಿಸಿದಲ್ಲ. ತಮಾಷೆಯಿಂದ ಹೀಗೆ ಮಾಡಿದ್ದಾರೆ. ಬಾಬರ್​ ಕೆನ್ನಗೆ ಬಾರಿಸುತ್ತಿದಂತೆ ರವೂಫ್ ನಗುತ್ತಲೇ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಉಭಯ ಆಟಗಾರರು ಉತ್ತಮ ಸ್ನೇಹಿತರಾಗಿದ್ದಾರೆ. ಹೀಗಾಗಿ ಮೈದಾನದಲ್ಲಿ ಹಾಗೂ ಮೈದಾನದ ಹೊರಗೂ ಇಂತಹ ಹಲವು ಚೇಷ್ಟೆಗಳನ್ನು ಮಾಡುತ್ತಲೇ ಇರುತ್ತಾರೆ.

ಪರದಾಡಿದ ಬಾಬರ್​

ಏಕದಿನ ಕ್ರಿಕೆಟ್​ನ ನಂ.1 ಬ್ಯಾಟರ್​ ಬಾಬರ್​ ಅಜಂ ರನ್​ ಗಳಿಸಲು ಸಂಪೂರ್ಣವಾಗಿ ಪರದಾಡಿದರು. 18 ಎಸೆತ ಎದುರಿಸಿ ಗಳಿಸಿದ್ದು ಕೇವಲ 5 ರನ್​. ಒಂದು ಬೌಂಡರಿ ಬಾರಿಸಲು ಅವರಿಂದ ಸಾಧ್ಯವಾಗಲಿಲ್ಲ. ಪಂದ್ಯದ ಬಳಿಕ ಮಾತನಾಡಿದ ಬಾಬರ್ ‘ಈ ಪಂದ್ಯದಲ್ಲಿ ನಮ್ಮ ಬೌಲರ್​ಗಳ ಪ್ರದರ್ಶನ ನನಗೆ ತೃಪ್ತಿ ತಂದಿದೆ. ನಾವು ಬ್ಯಾಟಿಂಗ್​ಲ್ಲಿ ಎಡವಿದ್ದು ನಿಜ. ಆದರೆ, ಮುಂದಿನ ಪಂದ್ಯದಲ್ಲಿ ತಪ್ಪುಗಳನ್ನು ತಿದ್ದಿಕೊಂಡು ಉತ್ತಮ ಆಟವಾಡುವ ವಿಶ್ವಾಸವಿದೆ” ಎಂದರು. ಜತೆಗೆ ಹೈದರಾಬಾದ್​ನ ಆತಿಥ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ರಾವುಫ್​ಗೆ ಕಣ್ಣು ಹೊಡೆದ ಲೀಡೆ

ಇದೇ ಪಂದ್ಯದಲ್ಲಿ ನೆದರ್ಲೆಂಡ್ಸ್‌ನ ಆಲ್​ರೌಂಡರ್​ ಬಾಸ್ ಡಿ ಲೀಡೆ(Bas de Leede) ಅವರು ಹ್ಯಾರಿಸ್‌ ರವೂಫ್ ಎಸೆತಕ್ಕೆ ಸಿಕ್ಸರ್​ ಬಾರಿಸಿ ಕಣ್ಣು ಹೊಡೆದ ವಿಡಿಯೊ ವೈರಲ್​ ಆಗಿದೆ. ಈ ವಿಡಿಯೊವನ್ನು ಐಸಿಸಿ ತನ್ನ ಅಧಿಕೃತ ಟ್ವಿಟರ್​ ಮತ್ತು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದೆ.

ಹ್ಯಾರಿಸ್ ರವೂಫ್ ಅವರು 29ನೇ ಓವರ್‌ನ ನಾಲ್ಕನೇ ಎಸೆತವನ್ನು ಬೌನ್ಸರ್​ ಎಸೆದರು. ಕ್ರೀಸ್​ನಲ್ಲಿದ್ದ ಬಾಸ್ ಡಿ ಲೀಡೆ ಚೆಂಡನ್ನು ಲೀಲಾಜಾಲವಾಗಿ ಸಿಕ್ಸರ್‌ಗೆ ಬಡಿದಟ್ಟಿದರು. ಸೊಗಸಾದ ಸಿಕ್ಸರ್​ ಬಾರಿಸಿದ ಸಂತಸದಲ್ಲಿ ಅವರು ರವೂಫ್​ಗೆ ಕಣ್ಣು ಹೊಡೆದು ನಗೆ ಬೀರಿದರು. ಇದೇ ವೇಳೆ ಕಾಮೆಂಟ್ರಿಯಲ್ಲಿದ್ದವರು ‘ಅಬ್ಬಾ ಎಂತದ ಹೊಡೆದ. ನಿಜಕ್ಕೂ ಅದ್ಭುತ ಸಿಕ್ಸರ್​’ ಎಂದು ಬಣ್ಣಿಸಿದರು. ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲಿ ಆಲ್​ರೌಂಡರ್​ ಪ್ರದರ್ಶನ ತೋರಿದ ಬಾಸ್ ಡಿ ಲೀಡೆ 6 ಬೌಂಡರಿ ಮತ್ತು 2 ಸಿಕ್ಸರ್​ ನೆರವಿನಿಂದ 67 ರನ್​ ಬಾರಿಸಿದರು. ಬೌಲಿಂಗ್​ನಲ್ಲಿ 9 ಓವರ್ ಎಸೆದು ಕೇವಲ 62 ರನ್​ ವೆಚ್ಚದಲ್ಲಿ 4 ವಿಕೆಟ್​ ಪಡೆದರು.

ಇದನ್ನೂ ಓದಿ Viral Video: ರವೂಫ್ ಎಸೆತಕ್ಕೆ ಸಿಕ್ಸರ್​ ಬಾರಿಸಿ ಕಣ್ಣು ಹೊಡೆದ ಬಾಸ್ ಡಿ ಲೀಡೆ

ಪಂದ್ಯ ಗೆದ್ದ ಪಾಕ್​

ಹೈದರಾಬಾದ್​ನ “ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂ”ನಲ್ಲಿ(Rajiv Gandhi International Stadium, Hyderabad) ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್​ ಆಹ್ವಾನ ಪಡೆದ ಪಾಕಿಸ್ತಾನ ಬ್ಯಾಟರ್​ಗಳು ನೆದರ್ಲೆಂಡ್ಸ್‌ನ ಘಾತಕ ಬಾಲಿಂಗ್​ ದಾಳಿಯನ್ನು ಸಮರ್ಥವಾಗಿ ಎದುರಿಸಲು ಪರದಾಡಿ 49 ಓವರ್​ಗಳಲ್ಲಿ 286 ರನ್​ಗಳಿಗೆ ಸರ್ವಪತನ ಕಂಡಿತು. ಗುರಿ ಬೆನ್ನಟ್ಟಿಕೊಂಡು ಹೋದ ನೆದರ್ಲೆಂಡ್ಸ್‌ ಮಧ್ಯಮ ಕ್ರಮಾಂಕದಲ್ಲಿ ನಾಟಕೀಯ ಕುಸಿತ ಕಂಡು 41 ಓವರ್​ಗಳಲ್ಲಿ 205 ರನ್​ ಗಳಿಶಲಷ್ಟೇ ಶಕ್ತವಾಯಿತು.

Exit mobile version