Site icon Vistara News

Viral Video: ಅಂಪೈರ್​ ತೀರ್ಪಿಗೆ ಆಕ್ರೋಶಗೊಂಡು ಕೈ ಕೈ ಮಿಲಾಯಿಸಿದ ಸೆಲೆಬ್ರಿಟಿಗಳು

Bangladesh Celebrity Cricket League

ಢಾಕಾ: ಕ್ರಿಕೆಟ್​ ಮೈದಾನದಲ್ಲಿ ಗಲಾಟೆ, ವಾಗ್ವಾದ ಸರ್ವೆ ಸಾಮಾನ್ಯ ಇದೇ ರೀತಿಯ ಗಲಾಟೆ ಬಾಂಗ್ಲಾದೇಶ ಸೆಲೆಬ್ರಿಟಿ ಕ್ರಿಕೆಟ್ ಲೀಗ್​ನಲ್ಲಿ(Bangladesh Celebrity Cricket League) ನಡೆದಿದೆ. ಕೈ ಕೈ ಮಿಲಾಯಿಸಿಕೊಂಡ ವಿಡಿಯೊ ಇದೀಗ ವೈರಲ್(Viral Video)​ ಆಗಿದೆ. ಮುಸ್ತಫಾ ಕಮಾಲ್ ರಿಯಾಜ್ ಮತ್ತು ದೀಪಂಕರ್ ದೀಪನ್ ಅವರ ತಂಡಗಳು ಮುಖಾಮುಖಿಯಾಗಿತ್ತು ಆದರೆ ಔಟ್​ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಹೊಡೆದಾಟ ನಡೆದಿದೆ.

ವರದಿಗಳ ಪ್ರಕಾರ, ಈ ಜಗಳಕ್ಕೆ ಮುಖ್ಯ ಕಾರಣವೆಂದರೆ ಅಂಪೈರ್‌ ನೀಡಿದ ತಪ್ಪು ತೀರ್ಪು. ಅಂಪೈರ್ ಬೌಂಡರಿ ನೀಡದ ಹಿನ್ನೆಲೆಯಲ್ಲಿ ಉಭಯ ತಂಡಗಳ ನಡುವೆ ವಾಗ್ವಾದ ನಡೆದು ಆ ಬಳಿಕ ಕಾದಾಟಕ್ಕೆ ಕಾರಣವಾಯಿತು. ಆಯೋಜಕರು ಈ ಗಲಾಟೆಯನ್ನು ನಿಲ್ಲಿಸಲು ಪ್ರಯತ್ನಿಸಿದರೂ ಅವರಿಂದ ಸಾಧ್ಯವಾಗಲಿಲ್ಲ ಬಳಿಕ ಪಂದ್ಯವನ್ನು ರದ್ದು ಪಡಿಸಲಾಯಿತು. ಗಲಾಟೆಯ ಬಳಿಕ ನಟಿಯೊಬ್ಬರು ಅಳುತ್ತಾ ಮಾತನಾಡಿದ ವಿಡಿಯೊ ವೈರಲ್​ ಆಗಿದೆ. ಸೆಲೆಬ್ರೆಟಿಗಳ ಜಗಳ ಕಂಡು ಇದು ಸಿನೆಮಾ ಅಲ್ಲ ಕ್ರಿಕೆಟ್​ ಎಂದು ಕೆಲವರು ಕಮೆಂಟ್​ ಮಾಡಿದ್ದಾರೆ.

ಬಾಂಗ್ಲಾದೇಶ ಕ್ರಿಕೆಟ್​ ಲೀಗ್​ನಲ್ಲಿ ಈ ರಿತಿಯ ಗಲಾಟೆಗಳು ಹೆಚ್ಚಾಗಿ ಸಂಭವಿಸುತ್ತಿರುತ್ತದೆ. ಅಂತಾರಾಷ್ಟ್ರೀಯ ಆಟಗಾರರ ಕ್ರಿಕೆಟ್ ಲಿಗ್​ನಲ್ಲಿಯೂ ಈ ರೀತಿಯ ಹಲವು ಘಟನೆ ನಡೆದ ನಿದರ್ಶನಗಳಿಗೆ ಹೆಚ್ಚಾಗಿ ಬಾಂಗ್ಲಾ ನಾಯಕ ಶಕೀಬ್​ ಅಲ್​ ಹಸನ್​ ಅವರೇ ಗಲಾಟೆ ಮಾಡಿದ ಆಟಗಾರನಾಗಿದ್ದಾರೆ. ಆಲ್ ರೌಂಡರ್ ಶಕೀಬ್ ಅಲ್ ಹಸನ್ ಅವರು ಫೀಲ್ಡ್ ನಲ್ಲಿ ತಮ್ಮ ಕೋಪದ ಕಾರಣದಿಂದಲೇ ಅಂಪೈರ್ ಜತೆ ಜಗಳವಾಡಿ ವಿಕೆಟ್ ಗಳನ್ನು ಕಿತ್ತು ಎಸೆದಿದ್ದರು.

ಇದೇ ವರ್ಷ ಜನವರಿಯಲ್ಲಿ ನಡೆದಿದ್ದ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ (ಬಿಪಿಎಲ್) ನಲ್ಲಿ ಶಕೀಬ್ ಅಲ್ ಹಸನ್ ಅಂಪಾಯರ್ ಜತೆ ರೇಗಾಡಿದ್ದರು. ಫಾರ್ಚೂನ್ ಬಾರಿಶಾಲ್ ಮತ್ತು ಸಿಲ್ಹೆಟ್ ಸ್ಟ್ರೈಕರ್ಸ್ ನಡುವಿನ ಪಂದ್ಯದಲ್ಲಿ ಈ ಘಟನೆ ನಡೆದಿತ್ತು.

ಇದನ್ನು ಓದಿ Anushka Sharma: ಕೇಕ್​ ನೀಡಿಲ್ಲವೆಂದು ಪತ್ನಿಗೆ ಇನ್​ಸ್ಟಾಗ್ರಾಮ್​ನಲ್ಲಿ ಕಮೆಂಟ್​ ಮಾಡಿದ ಕೊಹ್ಲಿ

ಬಾರಿಶಾಲ್ ತಂಡದ ಪರ ಶಕೀಬ್ ಬ್ಯಾಟಿಂಗ್ ಮಾಡುತ್ತಿದ್ದರು. ವೇಗಿ ರೆಜೌರ್ ರೆಹಮಾನ್ ರಜಾ ಬೌನ್ಸರ್ ಎಸೆದರು. ಈ ವೇಳೆ ಅಂಪಾಯರ್ ವೈಡ್ ನೀಡುವ ಬದಲು ಬೌನ್ಸರ್ ಎಚ್ಚರಿಕೆ ನೀಡಿದರು. ಇದರಿಂದ ಕೆರಳಿದ ಶಕೀಬ್ ಕೂಡಲೇ ಲೈನ್ ಅಂಪಾಯರ್ ಕಡೆಗೆ ತೆರಳಿ ಮಾತುಕತೆ ನಡೆಸಿದರು. ಆದರೆ ಶಕೀಬ್ ಮನವಿಗೆ ಒಪ್ಪದ ಅಂಪೈರ್​ ವೈಡ್ ನೀಡಲಿಲ್ಲ ಇದಕ್ಕೆ ಶಕೀಬ್​ ಬ್ಯಾಟ್​ ಬೀಸಾಡಿ ಆಕ್ರೋಶ ವ್ಯಕ್ತಪಡಿಸಿದ್ದರು.

Exit mobile version