ಬೆಂಗಳೂರು: ಕಾರು ಅಪಘಾತದಿಂದ ಬಹುತೇಕ ಚೇತರಿಕೆ ಕಂಡಿರುವ ಕ್ರಿಕೆಟಿಗ ರಿಷಭ್ ಪಂತ್(Rishabh Pant) ಇದೇ ವರ್ಷ ನಡೆಯುವ 17ನೇ ಆವೃತ್ತಿಯ ಐಪಿಎಲ್ನಲ್ಲಿ ಆಡುವ ನಿರೀಕ್ಷೆಯಲ್ಲಿದ್ದಾರೆ. ಸದ್ಯ ಅವರು ಬೆಂಗಳೂರಿನ ಎನ್ಸಿಎಯಲ್ಲಿ ಫಿಟ್ನೆಸ್ ತರಬೇತಿ ಪಡೆಯುತ್ತಿದ್ದಾರೆ. ಇದೇ ವೇಳೆ ಅವರು ಅಫಘಾನಿಸ್ತಾನ ವಿರುದ್ಧ ಮೂರನೇ(India vs Afghanistan, 3rd T20I) ಪಂದ್ಯವನ್ನಾಡಲು ಚಿನ್ನಸ್ವಾಮಿಯಲ್ಲಿರುವ ಟೀಮ್ ಇಂಡಿಯಾ ಆಟಗಾರರನ್ನು ಭೇಟಿ ಮಾಡಿದ್ದಾರೆ(Pant appears with Indian team). ಈ ವಿಡಿಯೊ ವೈರಲ್(viral video) ಆಗಿದೆ.
ಭಾರತ ತಂಡ ನಾಳೆ ಅಫಘಾನಿಸ್ತಾನ ವಿರುದ್ಧ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೂರನೇ ಹಾಗೂ ಅಂತಿಮ ಟಿ20 ಪಂದ್ಯವನ್ನಾಡಲಿದೆ. ಮಂಗಳವಾರ ಟೀಮ್ ಇಂಡಿಯಾದ ಎಲ್ಲ ಆಟಗಾರರು ಮೈದಾನದಲ್ಲಿ ಅಭ್ಯಾಸ ನಡೆಸಿದ್ದಾರೆ. ಈ ವೇಳೆ ರಿಷಭ್ ಪಂತ್ ಕೂಡ ಮೈದಾನಕ್ಕೆ ಬಂದು ವಿರಾಟ್ ಕೊಹ್ಲಿ ಮತ್ತು ರಿಂಕು ಸಿಂಗ್ ಬಳಿಕ ಕೆಲ ಕಾಲ ಮಾತುಕತೆ ನಡೆಸಿದ್ದಾರೆ. ಅಲ್ಲದೆ ನೆಟ್ಸ್ನಲ್ಲಿ ಸಣ್ಣ ಮಟ್ಟಿನ ಬ್ಯಾಟಿಂಗ್ ಅಭ್ಯಾಸ ಕೂಡ ನಡೆಸಿದ್ದಾರೆ. ಬುಧವಾರ ನಡೆಯುವ ಪಂದ್ಯವನ್ನೂ ಕೂಡ ವೀಕ್ಷಿಸುವ ಸಾಧ್ಯತೆ ಇದೆ.
Virat Kohli and Rishabh pant at Chinnaswamy Stadium 😍🔥 pic.twitter.com/VnjwvBOnTo
— Virat Kohli Fan Club (@Trend_VKohli) January 16, 2024
ಟೀಮ್ ಇಂಡಿಯಾ ಪ್ರ್ಯಾಕ್ಟಿಸ್ ಸೆಸನ್ಗೆ ತೆರಳಿದ ಬಳಿಕ ಪಂತ್ ಅವರು ಜಿಮ್ನಲ್ಲಿ ವೇಟ್ ಲಿಫ್ಟಿಂಗ್ ಸೇರಿ ಇನ್ನು ಕೆಲ ವ್ಯಾಯಾಮ ನಡೆಸಿದ್ದಾರೆ. ಇದರ ವಿಡಿಯೊವನ್ನು ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಪ್ರತಿ ಹನಿ ಬೆವರು ನಿಮ್ಮ ಗುರಿಗಳಿಗೆ ಹತ್ತಿರದಲ್ಲಿದೆ” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ Rishabh Pant: ಸಹೋದರಿಯ ನಿಶ್ಚಿತಾರ್ಥದ ಫೋಟೊ ಹಂಚಿಕೊಂಡ ರಿಷಭ್ ಪಂತ್
ಬಹುತೇಕ ಚೇತರಿಕೆ ಕಂಡಿರುವ ಅವರ ಫಿಟ್ನೆಸ್ ಮೇಲೆ ಬಿಸಿಸಿಐ ವೈದ್ಯಕಿಯ ತಂಡ ನಿಗಾ ಇರಿಸಿದೆ. ಪಂತ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳ ಬೇಕಾದರ ದೇಶೀಯ ಕ್ರಿಕೆಟ್ನಲ್ಲಿ ಆಡಿ ತಮ್ಮ ಫಿಟ್ಸೆನ್ ಸಾಬೀತುಪಡಿಸಬೇಕಿದೆ.
2022ರ ಡಿಸೆಂಬರ್ 30ರಂದು(rishabh pant accident date) ರಿಷಭ್ ಪಂತ್ ಅವರು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರು ಡಿವೈಡರ್ಗೆ ಡಿಕ್ಕಿ(rishabh pant accident) ಹೊಡೆದಿತ್ತು. ಈ ಭೀಕರ ಅರ್ಪಆತದಲ್ಲಿ ಅವರ ಕಾರು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿತ್ತು. ಆದರೆ, ಪಂತ್ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದರು.
ಮೊದಲ ಬಾರಿಗೆ ಪಂತ್ ಅವರು ತಮ್ಮ ಚೇತರಿಕೆ ಅಪ್ಡೇಟ್ ನೀಡಿದ್ದು ಊರುಗೋಲಿನ ಸಹಾಯದಿಂದ ನಡೆದಾಡುವ ಫೋಟೊ ಹಂಚಿಕೊಂಡು. ಬಳಿಕ ಸ್ವಿಮಿಂಗ್ ಪೂಲ್ನಲ್ಲಿ ನಡೆದಾಡುವ ಮೂಲಕ. ಹೀಗೆ ಚೇತರಿಕೆಯ ಎಲ್ಲ ಹಂತವನ್ನು ಅವರು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಳ್ಳುತ್ತಿದ್ದು ಈ ವರ್ಷದ ಐಪಿಎಲ್ನಲ್ಲಿ ಡೆಲ್ಲಿ ಪರ ಕಣಕ್ಕಿಳಿಯಲಿದ್ದಾರೆ. ಡಿಸೆಂಬರ್ 19ರಂದು ದುಬೈನಲ್ಲಿ ನಡೆದಿದ್ದ 2024ರ ಐಪಿಎಲ್ ಆಟಗಾರರ ಮಿನಿ ಹರಾಜಿನಲ್ಲಿ ಪಂತ್ ಕೂಡ ಕಾಣಿಸಿಕೊಂಡಿದ್ದರು. ಫ್ರಾಂಚೈಸಿ ಜತೆ ಸೇರಿ ಕೆಲ ಆಟಗಾರರ ಬಿಡ್ಡಿಂಗ್ ಕೂಡ ಮಾಡಿದ್ದರು. ಒಟ್ಟಾರೆಯಾಗಿ ಪಂತ್ ಈ ವರ್ಷ ಕ್ರಿಕೆಟ್ಗೆ ಮರಳುವ ವಿಶ್ವಾಸದಲ್ಲಿದ್ದಾರೆ.