ಬರ್ಮಿಂಗ್‌ಹ್ಯಾಮ್: ಆ್ಯಶಸ್ ಸರಣಿಯ(The Ashes 2023) ಮೊದಲ ಟೆಸ್ಟ್ ಪಂದ್ಯ ರೋಚಕ ಘಟ್ಟಕ್ಕೆ ಬಂದು ನಿಂತಿದೆ. ಆಸ್ಟ್ರೇಲಿಯಾ ತಂಡ 174 ರನ್ ಗಳಿಸಿದರೆ ಗೆಲುವು ದಾಖಲಿಸಿ ಸರಣಿಯಲ್ಲಿ ಶುಭಾರಂಭ ಮಾಡಲಿದೆ. ಇದೇ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಆಸೀಸ್ ತಂಡದ ನಾಯಕ ಪ್ಯಾಟ್ ಕಮಿನ್ಸ್(Pat Cummins) ಅವರು ಇಂಗ್ಲೆಂಡ್ ತಂಡದ ಒಲಿ ಪೋಪ್(Ollie Pope) ಅವರ ವಿಕೆಟ್ ಕಿತ್ತ ವಿಡಿಯೊವೊಂದು ಇದೀಗ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.
4ನೇ ದಿನದಾಟದ ಚಹಾ ವಿರಾಮಕ್ಕೆ ಸರಿಯಾಗಿ ಇಂಗ್ಲೆಂಡ್ 273ಕ್ಕೆ ತನ್ನ ದ್ವಿತೀಯ ಇನ್ನಿಂಗ್ಸ್ ಮುಗಿಸಿತ್ತು. ಸದ್ಯ ಚೇಸಿಂಗ್ ನೆಸುತ್ತಿರುವ ಆಸ್ಟ್ರೇಲಿಯಾ ಮೂರು ವಿಕೆಟ್ ನಷ್ಟಕ್ಕೆ 107 ರನ್ ಗಳಿಸಿ ಅಂತಿಮ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ.
ಸೋಮವಾರ ಜೋ ರೂಟ್ ಜತೆ ಅರ್ಧಶತಕದ ಜತೆಯಾಟ ನಡೆಸಿ ಅಪಾಯಕಾರಿಯಾಗು ಸೂಚನೆ ನೀಡಿದ್ದ ಪೋಪ್ ಅವರು ಕಮಿನ್ಸ್ ಅವರ ಇನ್-ಸ್ವಿಂಗ್ ಯಾರ್ಕರ್ ದಾಳಿಯ ಮರ್ಮವನ್ನು ಅರಿಯುವಲ್ಲಿ ವಿಫಲವಾಗಿ ಕ್ಲೀನ್ ಬೌಲ್ಡ್ ಆದರು. ಅವರ ಈ ಯಾರ್ಕರ್ ಎಸೆತಕ್ಕೆ ವಿಕೆಟ್ ಕಿತ್ತು ಹಾರಿ ಹೋಗಿದೆ. ಈ ವಿಡಿಯೊ ವೈರಲ್ ಆಗಿದ್ದು, “ದಿ ಬಾಲ್ ಆಫ್ ಆ್ಯಶಸ್ 2023”, “ಬಾಲ್ ಆಫ್ ದಿ ಇಯರ್’ ಎಂದು ಖ್ಯಾತಿ ಪಡೆದಿದೆ.
ಇದನ್ನೂ ಓದಿ Ashes 2023: ಸಚಿನ್,ಕೊಹ್ಲಿಯ ದಾಖಲೆ ಮುರಿದ ಜೋ ರೂಟ್
The ball of Ashes 2023.
— Johns. (@CricCrazyJohns) June 19, 2023
Captain Cummins for Australia, He is a machine. pic.twitter.com/SzDHJ7glE6
ಮೊದಲ ಇನಿಂಗ್ಸ್ನಲ್ಲಿ ವಿಕೆಟ್ ಲೆಸ್ ಎನಿಸಿಕೊಂಡಿದ್ದ ಕಮಿನ್ಸ್ ಅವರು ದ್ವಿತೀಯ ಇನಿಂಗ್ಸ್ನಲ್ಲಿ ಘಾತಕ ಬೌಲಿಂಗ್ ನಡೆಸಿ 18.2 ಓವರ್ಗೆ 63 ರನ್ ನೀಡಿ 4 ವಿಕೆಟ್ ಕಿತ್ತು ಮಿಂಚಿದರು. ಪೋಪ್ 2 ಬೌಂಡರಿ ನೆರವಿನಿಂದ 14 ರನ್ಗೆ ಆಟ ಮುಗಿಸಿದರು. ಟಿಮ್ ಪೇನ್ ಅವರು ಟೆಸ್ಟ್ ತಂಡದಿಂದ ಕೆಳಗಿಳಿದ ಬಳಿಕ ಪ್ಯಾಟ್ ಕಮಿನ್ಸ್ ಅವರು ಟೆಸ್ಟ್ ತಂಡದ ನಾಯಕತ್ವ ವಹಿಸಿಕೊಂಡರು. ಕಮಿನ್ಸ್ ನಾಯಕತ್ವದಲ್ಲಿ ಆಸೀಸ್ ತಂಡ ಉತ್ತಮ ಪ್ರದರ್ಶನ ತೋರುತ್ತಿದ್ದು ಹಲವು ಸರಣಿ ಗೆಲುವಿನ ಜತೆಗೆ ಇತ್ತೀಚೆಗೆ ಮುಕ್ತಾಯ ಕಂಡ ಭಾರತ ವಿರುದ್ಧದ ಟೆಸ್ಟ್ ವಿಶ್ವಕಪ್ನಲ್ಲಿ ಗೆಲುವು ದಾಖಲಿಸಿ ಇತಿಹಾಸ ನಿರ್ಮಿಸಿತ್ತು.