ಬೆಂಗಳೂರು: ಮಂಗಳವಾರ ನಡೆದ ಐಪಿಎಲ್(IPL 2024) ಪಂದ್ಯದಲ್ಲಿ ಆರ್ಸಿಬಿ ತಂಡ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಹೀನಾಯ ಸೋಲು ಕಂಡಿತ್ತು. ಇದೇ ಪಂದ್ಯದಲ್ಲಿ ನಿರೀಕ್ಷಿತ ಮಟ್ಟದ ಬ್ಯಾಟಿಂಗ್ ಪ್ರದರ್ಶನ ತೋರುವಲ್ಲಿ ವಿಫಲವಾದ ಬೇಸರದಲ್ಲಿ ವಿರಾಟ್ ಕೊಹ್ಲಿ(Virat Kohli) ಅವರು ಡ್ರೆಸ್ಸಿಂಗ್ ರೂಮ್ನಲ್ಲಿ ಕುರ್ಚಿಯೊಂದರ ಕೈಗೆ ತಮ್ಮ ಕೈಯನ್ನು ಮೂರು ನಾಲ್ಕು ಬಾರಿ ಚಚ್ಚಿಕೊಂಡಿದ್ದಾರೆ. ಇದರ ವಿಡಿಯೊ ವೈರಲ್(Viral Video) ಆಗಿದೆ.
ಲಕ್ನೋ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ 16 ಎಸೆತಗಳಿಂದ 22 ರನ್ ಬಾರಿಸಿ ದೇವದತ್ತ ಪಡಿಕ್ಕಲ್ ಹಿಡಿದ ಸೊಗಸಾದ ಕ್ಯಾಚ್ಗೆ ವಿಕೆಟ್ ಕೈಚೆಲ್ಲಿದರು. ಔಟಾಗಿ ಪೆವಿಲಿಯನ್ಗೆ ತೆರಳಿದ ಕೊಹ್ಲಿ ಬೇಸರದಲ್ಲಿ ಕುರ್ಚಿಯೊಂದರ ಕೈಗೆ ತಮ್ಮ ಕೈಯನ್ನು ಜೋರಾಗಿ ಚಚ್ಚಿಕೊಂಡರು. ವಿರಾಟ್ ಕೊಹ್ಲಿಗೆ ಈ ಪಂದ್ಯ ಚಿನ್ನಸ್ವಾಮಿಯಲ್ಲಿ 100ನೇ ಟಿ20 ಪಂದ್ಯವಾಗಿತ್ತು. ಪಂದ್ಯದಲ್ಲಿ ಆಡುವ ಮೂಲಕ ಒಂದೇ ಸ್ಥಳದಲ್ಲಿ 100 ಟಿ 20 ಪಂದ್ಯಗಳನ್ನು ಆಡಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಇದನ್ನೂ ಓದಿ IPL 2024: 6.4 ಕೋಟಿ ಪಡೆದ ಬೌಲರ್ ರೂಲ್ಡ್ ಔಟ್; ಲಕ್ನೋ ತಂಡಕ್ಕೆ ಭಾರೀ ಹಿನ್ನಡೆ
Virat Kohli in the RCB dressing room. 💔pic.twitter.com/mR7QSuOHJO
— Mufaddal Vohra (@mufaddal_vohra) April 3, 2024
ಆರ್ಸಿಬಿಗೆ ಸೋಲು
ಬೇಜವಾಬ್ದಾರಿ ಆಟವನ್ನೇ ಧ್ಯೇಯವನ್ನಾಗಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡ ಐಪಿಎಲ್ 2024ನೇ (IPL 2024) ಆವೃತ್ತಿಯ 15ನೇ ಪಂದ್ಯದಲ್ಲಿ ಕನ್ನಡಿಗ ಕೆ. ಎಲ್ ರಾಹುಲ್ (KL Rahul) ನೇತೃತ್ವದ ಲಕ್ನೊ ಸೂಪರ್ ಜೈಂಟ್ಸ್ ತಂಡದ ವಿರುದ್ಧ 28 ರನ್ಗಳ ಹೀನಾಯ ಸೋಲು ಕಂಡಿತು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಬೆಂಗಳೂರು ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೆ ಮೊದಲು ಬ್ಯಾಟ್ ಮಾಡಿದ ಲಕ್ನೊ ತಂಡ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ಗೆ 181 ರನ್ ಬಾರಿಸಿತು. ಬೆಂಗಳೂರು ಸ್ಟೇಡಿಯಮ್ನಲ್ಲಿ ಗೆಲ್ಲಬಹುದಾಗಿದ್ದ ಮೊತ್ತವನ್ನು ಬೆನ್ನಟ್ಟಿದ ಆರ್ಸಿಬಿ 19.4 ಓವರ್ಗಳಲ್ಲಿ 153 ರನ್ಗೆ ಆಲ್ಔಟ್ ಆಗಿ ಶರಣಾಯಿತು.
ಸೋಲಿಗೆ ಕೊಹ್ಲಿ ಕಾರಣ
ಕಳೆದ ಕೆಕೆಆರ್ ವಿರುದ್ಧದ ಸೋಲಿಗೆ(IPL 2024) ವಿರಾಟ್ ಕೊಹ್ಲಿಯ(Virat Kohli) ನಿಧಾನಗತಿಯ ಬ್ಯಾಟಿಂಗ್ ಪ್ರಮುಖ ಕಾರಣ ಎಂದು ಮಾಜಿ ಆಟಗಾರ ಆಕಾಶ್ ಚೋಪ್ರಾ(Aakash Chopra) ಹೇಳಿದ್ದರು. ಲಕ್ನೋ ವಿರುದ್ಧ ಸೋತಾಗ ಆರ್ಸಿಬಿಯ ಅಭಿಮಾನಿಗಳು ಕೂಡ ವಿರಾಟ್ ಕೊಹ್ಲಿ ತಂಡದಲ್ಲಿ ಇರುವವರೆಗೆ ಕಪ್ ಗೆಲ್ಲುವುದಿಲ್ಲ ಎಂದು ಹೇಳಿದ್ದಾರೆ. ಈ ವಿಡಿಯೊ ಕೂಡ ವೈರಲ್ ಆಗಿದೆ.
ಕೊಹ್ಲಿ ತಂಡಕ್ಕೆ ಆಸರೆಯಾಗುತ್ತಿರುವುದು ನಿಜ. ಆದರೆ ನಿಧಾನಗತಿಯ ಬ್ಯಾಟಿಂಗ್ ಸಲ್ಲದು. ಏಕದಿನ, ಟೆಸ್ಟ್ ಕ್ರಿಕೆಟ್ಗೆ ಈ ಪ್ರದರ್ಶನ ಓಕೆ. ಹೊಡಿಬಡಿ ಶೈಲಿಯ ಟಿ20ಗೆ ಇದು ಸಲ್ಲದು ಎನ್ನುವುದು ಆಕಾಶ್ ಚೋಪ್ರಾ ಅಭಿಪ್ರಾಯ. ಕಳೆದ ವರ್ಷದ ಆವೃತ್ತಿಯಲ್ಲಿ ಕೊಹ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ್ದರು. ಆದರೆ ಈ ಬಾರಿ ರನ್ ಗಳಿಸಿದರೂ ಕೂಡ ಇದಕ್ಕಾಗಿ ಹೆಚ್ಚಿನ ಎಸೆತಗಳನ್ನು ತೆಗೆದುಕೊಳ್ಳುತ್ತಿದ್ದಾರೆ.