Site icon Vistara News

Viral video: ಸನ್‌ರೈಸರ್ಸ್ ತಂಡದ ನಾಯಕ ಕಮಿನ್ಸ್​ಗೆ ಆರತಿ ಬೆಳಗಿ ಪೂಜಿಸಿದ ಅಭಿಮಾನಿ

Viral video

ಹೈದರಾಬಾದ್​: ಸನ್‌ರೈಸರ್ಸ್ ಹೈದರಾಬಾದ್‌(SRH) ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್(pat cummins) ಅವರಿಗೆ ಅಭಿಮಾನಿಯೊಬ್ಬ ಆರತಿ ಬೆಳಗಿ ದೇವರಂತೆ ಪೂಜಿಸಿದ್ದಾನೆ. ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​(Viral video) ಆಗಿದೆ. ಮಂಗಳವಾರ ನಡೆದ ಪಂಜಾಬ್​ ಕಿಂಗ್ಸ್​ ವಿರುದ್ಧದ ಪಂದ್ಯದ ವೇಳೆ ಟಾಸ್​ಗೆ ಆಗಮಿಸಿದ ಪ್ಯಾಟ್​ ಕಮಿನ್ಸ್​ ತಮ್ಮ ತಂಡದ ಯೋಜನೆಯನ್ನು ವಿವರಿಸಿದ್ದಾರೆ. ಇದನ್ನು ಟಿವಿಯಲ್ಲಿ ನೋಡುತ್ತಿದ್ದ ಅಭಿಮಾನಿಯೊಬ್ಬ ಆರತಿ ಬೆಳಗಿ ಪೂಜಿಸಿದ್ದಾನೆ.

ಆಸ್ಟ್ರೇಲಿಯಾದ ವೇಗಿ ಕಮಿನ್ಸ್​ ಟೆಸ್ಟ್​ ಮತ್ತು ಏಕದಿನ ವಿಶ್ವಕಪ್​ ಗೆದ್ದ ನಾಯಕನಾಗಿದ್ದಾರೆ. ಕಳೆದ ಹರಾಜಿನಲ್ಲಿ ಅವರನ್ನು ಫ್ರಾಂಚೈಸಿ 20.5 ಕೋಟಿ ರೂ. ನೀಡಿ ಖರೀದಿ ಮಾಡಿತ್ತು. ಜತೆಗೆ ತಂಡದ ನಾಯನ ಸ್ಥಾನವನ್ನು ನೀಡಿತ್ತು. ಪಂಜಾಬ್​ ವಿರುದ್ಧ ಹೈದರಾಬಾದ್​ ಗೆಲ್ಲಲಿ ಎನ್ನುವ ಕಾರಣದಿಂದ ಅಭಿಮಾನಿ ತಂಡದ ನಾಯಕ ಕಮಿನ್ಸ್​ಗೆ ಆರತಿ ಬೆಳಗಿದ್ದಾನೆ. ಅಭಿಮಾನಿಯ ಇಚ್ಛೆಯಂತೆ ಪಂಜಾಬ್​ ವಿರುದ್ಧ ಹೈದರಾಬಾದ್​ 2 ರನ್​ಗಳ ರೋಚಕ ಗೆಲುವು ಕೂಡ ಕಂಡಿತ್ತು. ಸದ್ಯ ಸನ್​ರೈಸರ್ಸ್​ 5 ಪಂದ್ಯಗಳನ್ನಾಡಿ ಮೂರು ಪಂದ್ಯ ಗೆದ್ದು 6 ಅಂಕದೊಂದಿಗೆ 5ನೇ ಸ್ಥಾನದಲ್ಲಿದೆ.

ಇಲ್ಲಿನ ಮಹಾರಾಜ ಯಾದವೀಂದ್ರ ಸಿಂಗ್ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟ್ ಮಾಡಿದ ಸನ್​ ರೈಸರ್ಸ್​ ಹೈದರಾಬಾದ್ ತಂಡ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 182 ರನ್​ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್​ ತಂಡ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 6 ವಿಕೆಟ್ ನಷ್ಟಕ್ಕೆ 180 ರನ್ ಬಾರಿಸಿ ಕೇವಲ 2 ರನ್​ಗಳಿಂದ ಸೋಲೊಪ್ಪಿಕೊಂಡಿತು. ಮತ್ತೊಂದು ವಿರೋಚಿತ ಹೋರಾಟ ಸಂಘಟಿಸಿದ ಶಶಾಂಕ್​ ಸಿಂಗ್​ (46) ಅವರ ಪ್ರಯತ್ನ ವ್ಯರ್ಥಗೊಂಡಿತು.

ಇದನ್ನೂ ಓದಿ IPL 2024: ಆರ್​ಸಿಬಿ ಸೋಲಿಗೆ ಮ್ಯಾಕ್ಸ್​ವೆಲ್ ಕುಡಿತವೇ ಕಾರಣವಂತೆ!; ದಿನಕ್ಕೆ ಎಷ್ಟು ಪೆಗ್​ ಬೇಕು?

ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಲು ಹೊರಟ ಪಂಜಾಬ್ ತಂಡಕ್ಕೆ ಉತ್ತಮ ಆರಂಭ ದೊರಕಲಿಲ್ಲ. ಶಿಖರ್​ ಧವನ್​ 14 ರನ್​ಗೆ ಔಟಾದರೆ ಜಾನಿ ಬೈರ್​ಸ್ಟೋವ್ ಮತ್ತೆ ಶೂನ್ಯ ಸುತ್ತಿದರು. ಪ್ರಭ್​ಸಿಮ್ರಾನ್​ ಸಿಂಗ್ 4 ರನ್​ಗೆ ವಿಕೆಟ್​ ಒಪ್ಪಿಸಿದರು. 20 ರನ್​ಗೆ 3 ವಿಕೆಟ್ ಕಳೆದುಕೊಂಡ ಪಂಜಾಬ್ ಬಹುತೇಕ ಸೋಲಿನ ಸುಳಿಗೆ ಸಿಲುಕಿತು. ಬಳಿಕ ಸ್ಯಾಮ್ ಕರ್ರನ್ 29 ರನ್ ಬಾರಿಸಿದರೆ ಸಿಕಂದರ್​ ರಾಜಾ 2 ರನ್ ಕೊಡುಗೆ ಕೊಟ್ಟರು. ಮಧ್ಯದಲ್ಲಿ ಜಿತೇಶ್ ಶರ್ಮಾ 19 ರನ್ ಬಾರಿಸಿ ಔಟಾದರು. ಪಂಜಾಬ್ ತಂಡದ ಹಿಂದನ ಪಂದ್ಯದಂತೆಯೇ ಈ ಬಾರಿಯೂ ಶಶಾಂಕ್ ಸಿಂಗ್​ (25 ಎಸೆತ 46 ರನ್​), ಅಶುತೋಶ್ ಶರ್ಮಾ 15 ಎಸೆತಕ್ಕೆ 33 ರನ್​ ಬಾರಿಸಿದರು. ಕೊನೇ ಓವರ್​ನಲ್ಲಿ ಪಂಜಾಬ್ ಗೆಲುವಿಗೆ 29 ರನ್​ ಬೇಕಾಗಿತ್ತು. ಅಶೋತೋಷ್ ಹಾಗೂ ಶಶಾಂಕ್ ಸೇರಿಕೊಂಡು 26 ರನ್ ಬಾರಿಸಿದರು. ಆದರೆ, ಎರಡು ರನ್​ಗಳಿಗೆ ಸೋಲು ಉಂಟಾಯಿತು.

Exit mobile version