Site icon Vistara News

Viral Video :ರೋಹಿತ್​ ಪತ್ನಿಯನ್ನು ಹಿಂದಿನಿಂದ ಬಂದು ತಬ್ಬಿಕೊಂಡ ಹಾರ್ದಿಕ್​ ಪಾಂಡ್ಯ

Viral Video

ಮುಂಬಯಿ: ಮುಂಬೈ ಇಂಡಿಯನ್ಸ್ ತಂಡದ ಆಟಗಾರರೆಲ್ಲ ಸೋಮವಾರ ಹೋಳಿ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಿದ್ದರು. ಪ್ರತಿಯೊಬ್ಬರೂ ಮನಸಾರೆ ಸ್ವಇಚ್ಛೆಯಿಂದ ಪರಸ್ಪರ ಬಣ್ಣ ಎರಚಿ ಬಣ್ಣದೋಕುಳಿಯಲ್ಲಿ ಮಿಂದೆದ್ದಿದ್ದರು. ಇದೇ ವೇಳೆ ತಂಡದ ನೂತನ ನಾಯಕನಾಗಿರುವ ಹಾರ್ದಿಕ್​ ಪಾಂಡ್ಯ(Hardik Pandya) ಅವರು ರೋಹಿತ್​ ಶರ್ಮ ಅವರ ಪತ್ನಿಯನ್ನು(Rohit Sharma’s Wife) ತಬ್ಬಿಕೊಂಡು(Hardik Pandya HUGGING Rohit Sharma’s Wife) ಹೋಳಿಯ ಶಭಾಶಯ ತಿಳಿಸಿದ್ದಾರೆ. ಈ ವಿಡಿಯೊ ವೈರಲ್(Viral Video)​ ಆಗಿದೆ.

ಎಲ್ಲ ಆಟಗಾರರು ಮತ್ತು ಅವರ ಕುಟುಂಬ ಸದಸ್ಯರು ಹೋಳಿ ಆಡಿ ಸಂಭ್ರಮಿಸುತ್ತಿದ್ದರು. ರೋಹಿತ್​ ಪತ್ನಿ ರಿತಿಕಾ ಅವರು ತಮ್ಮ ಮಗಳು ಸಮೈರಾ ಜತೆ ಬಣ್ಣ ಹಚ್ಚುತ್ತಾ ಹೋಳಿ ಆಡುತ್ತಿದ್ದ ವೇಳೆ ಹಾರ್ದಿಕ್​ ಪಾಂಡ್ಯ ಅವರು ಧಾವಿಸಿ ರಿತಿಕಾ ಅವರನ್ನು ತಬ್ಬಿಕೊಂಡರು ಶುಭ ಹಾರೈಸಿದರು. ರಿತಿಕಾ(Ritika) ಕೂಡ ಪ್ರತಿಯಾಗಿ ಹಾರ್ದಿಕ್​ ಅವರನ್ನು ತಬ್ಬಿಕೊಂಡು ಹಾರೈಸಿದರು. ಈ ವಿಡಿಯೊವನ್ನು ನೆಟ್ಟಿಗರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು. ಇತ್ತೀಗೆಚೆ ಬಾರಿ ಟ್ರೆಂಟ್​ ಸೆಟ್​ ಮಾಡಿದ ‘ಹೇಯ್ ಪ್ರಭು ಯೇ ಕ್ಯಾ ಹುವಾ’ ಎಂಬ ಡೈಲಾಗನ್ನು ಕಮೆಂಟ್​ ಮಾಡಿದ್ದಾರೆ. ಗುಜರಾತ್​ ವಿರುದ್ಧದ ಪಂದ್ಯಕ್ಕೂ ಮುನ್ನ ನಡೆದ ಅಭ್ಯಾಸದ ವೇಳೆ ಪಾಂಡ್ಯ, ರೋಹಿತ್​ ಅವರನ್ನು ಕೂಡ ಅಪ್ಪಿಕೊಂಡಿದ್ದರು.

ಮಾಜಿ ನಾಯಕ ರೋಹಿತ್​ ಶರ್ಮ(Rohit Sharma Holi Celebration) ಕೂಡ ಸಹ ಆಟಗಾರರೊಂದಿಗೆ ಮಕ್ಕಳಂತೆ ಹೋಳಿ ಆಡಿ ಕುಣಿದು ಕುಪ್ಪಳಿಸಿದ್ದರು. ಪಾಂಡ್ಯ ನಾಯಕನಾದ ವೇಳೆ ರೋಹಿತ್​ ಪತ್ನಿ ರಿತಿಕಾ ಅಸಾಮಾಧನ ಹೊರಕಾಕಿದ್ದರು. ಈ ನಿರ್ಧಾರ ಸರಿಯಲ್ಲ ಎಂದು ಹೇಳಿದ್ದರು.

ಇದನ್ನೂ ಓದಿ IPL 2024 Points Table: ಆರ್​ಸಿಬಿ ಗೆಲುವಿನ ಬಳಿಕ ಅಂಕಪಟ್ಟಿ ಹೇಗಿದೆ?

ಭಾನುವಾರ ನಡೆದ ಗುಜರಾತ್​ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್​ ಪಾಂಡ್ಯ ಮತ್ತು ರೋಹಿತ್​ ಅಭಿಮಾನಿಗಳು ಪಂದ್ಯದ ಬಳಿಕ ಸ್ಟೇಡಿಯಂನಲ್ಲಿ ಪರಸ್ಪರ ಕೈ-ಕೈ ಮಿಲಾಯಿಸಿಕೊಂಡು ರಕ್ತ ಬರುವಂತೆ ಹೊಡೆದಾಟ ನಡೆಸಿದ್ದರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಪಂದ್ಯದಲ್ಲಿ ಹಾರ್ದಿಕ್​ ಪಾಂಡ್ಯ ಫೀಲ್ಡಿಂಗ್​ ವೇಳೆ ರೋಹಿತ್​ ಅವರನ್ನು ಹಲವು ಬಾರಿ ಸತಾಯಿಸಿದ್ದರು. ಒಮ್ಮೆ ಸ್ಲಿಪ್, ಮತ್ತೊಮ್ಮೆ ಲಾಂಗ್ ಆನ್​, ಇನ್ನೊಮ್ಮೆ ಲೆಗ್​ ಸೈಡ್, ಮಿಡ್ ವಿಕೆಟ್​ನತ್ತ ಹೀಗೆ ಮೈದಾನದ ಮೂಲೆ ಮೂಲೆಗೂ ಓಡಿಸಿದರು. ಇದು ರೋಹಿತ್​ ಅಭಿಮಾನಿಗಳ ಪಿತ್ತ ನೆತ್ತಿಗೇರುವಂತೆ ಮಾಡಿತು. ಪಂದ್ಯ ಸೋತ ಬಳಿಕ ಸೋಲಿಗೆ ಹಾರ್ದಿಕ್​ ಅವರೇ ಕಾರಣ ಎಂದು ಮುಂಬೈ ಮತ್ತು ರೋಹಿತ್​ ಅಭಿಮಾನಿಗಳು ಸೇರಿಕೊಂಡು ಪಾಂಡ್ಯ ಅಭಿಮಾನಿಗಳಿಗೆ ಸರಿಯಾಗಿ ಎರಡು ಬಾರಿಸಿದ್ದರು.

Exit mobile version