ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಹಲವು ವೈರಲ್ ವಿಡಿಯೋಗಳು(Viral Video) ಹರಿದಾಡುತ್ತಿರುತ್ತವೆ. ಆದರೆ ಅವುಗಳಲ್ಲಿ ಕೆಲವೊಂದು ವಿಡಿಯೋಗಳು ವಿಶೇಷ ಕಾರಣದಿಂದಾಗಿ ಜನರ ಗಮನ ಸೆಳೆದುಬಿಡುತ್ತದೆ. ಇದೀಗ ಇತಂಹದ್ದೇ ವಿಡಿಯೊವೊಂದು ಟೀಮ್ ಇಂಡಿಯಾ ಕ್ರಿಕೆಟ್ ಅಭಿಮಾನಿಗಳ ಮನಗೆದ್ದಿದೆ. ಮೊಹಮ್ಮದ್ ಶಮಿ(Mohammed Shami) ಅವರಂತೆ ಕಾಣುವ ವ್ಯಕ್ತಿಯೋರ್ವ ಟೋಲ್ ಗೇಟ್ನಲ್ಲಿ ಕಾಣಿಸಿಕೊಂಡ ವಿಡಿಯೊ ವೈರಲ್ ಆಗಿದೆ.
ವೈರಲ್ ಆದ ವಿಡಿಯೊದಲ್ಲಿ ವ್ಯಕ್ತಿಯೋರ್ವ ಮೊಹಮ್ಮದ್ ಶಮಿ ಅವರ ತದ್ರೂಪಿಯಂತೆ ಕಾಣಿಕೊಂಡಿದ್ದಾನೆ. ಜಾಕೆಟ್ ಮತ್ತು ಮಂಕಿ ಕ್ಯಾಪ್ ಧರಿಸಿ ನಿಂತಿದ್ದ ಈ ವ್ಯಕ್ತಿಯನ್ನು ತಕ್ಷಣ ನೋಡುವಾಗ ಶಮಿಯೇ ಇಲ್ಲಿ ನಿಂತತ್ತೆ ತೋರುತ್ತದೆ. ಇದನ್ನು ಕಂಡ ಕೆಲವರು ಅಚ್ಚರಿಗೊಂಡು ಅರೇ, ಶಮಿ ಏಕೆ ಟೋಲ್ ಗೇಟ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಒಂದು ಕ್ಷಣ ಅಚ್ಚರಿ ಪಡುವುದರಲ್ಲಿ ಅನುಮಾನವೇ ಬೇಡ.
Mohammed Shami Twin 😂❤️pic.twitter.com/7OyiVd9qW5
— RVCJ Media (@RVCJ_FB) January 10, 2024
ವಿಡಿಯೊ ಮಾಡಿದ ವ್ಯಕ್ತಿ ನಮಸ್ತೆ ಶಮಿ ಬಾಯ್, ನಿಮ್ಮ ಬೌಲಿಂಗ್ ಶೈಲಿ ತೀರಿಸಿ ಎಂದಿದ್ದಾರೆ. ಅದಂತೆ ಶಮಿಯ ಚಹರೆಯನ್ನೇ ಹೋಲುವ ಈ ವ್ಯಕ್ತಿ ನಿಜವಾದ ಶಮಿಯ ಬೌಲಿಂಗ್ ಶೈಲಿಯನ್ನು ಅನುಕರಣೆ ಮಾಡಿ ತೋರಿಸಿದ್ದಾರೆ. ಈ ವಿಡಿಯೊ ಟ್ವಿಟರ್ ಎಕ್ಸ್ ಸೇರಿ ಕೆಲ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ Mohammed Shami: ದೇಶಕ್ಕಾಗಿ ಮೋದಿ ಶ್ರಮ, ಅವರಿಗೆ ಬೆಂಬಲ ಎಂದ ಮೊಹಮ್ಮದ್ ಶಮಿ
ಅರ್ಜುನ ಪ್ರಶಸ್ತಿ ಪಡೆದ ಶಮಿ
ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್ನಲ್ಲಿ ಅದ್ಭುತ ಪ್ರದರ್ಶನ ತೋರಿ ಆಡಿದ 7 ಪಂದ್ಯಗಳಲ್ಲಿ 24 ವಿಕೆಟ್ ಉರುಳಿಸಿ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್ ಕಿತ್ತ ಬೌಲರ್ ಎನಿಸಿಕೊಂಡಿದ್ದರು. ಅವರ ಈ ಸಾಧನೆಯನ್ನು ಪರಿಗಣಿಸಿ ಅವರಿಗೆ ದೇಶದ ಎರಡನೇ ಅತ್ಯುನ್ನತ ಕ್ರೀಡಾ ಗೌರವವಾದ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಮೊಹಮ್ಮದ್ ಶಮಿ ಅರ್ಜುನ ಪ್ರಶಸ್ತಿ ಸ್ವೀಕರಿಸಿದ್ದರು.
ಫಿಟ್ನೆಸ್ ರಹಸ್ಯ ತಿಳಿಸಿದ ಶಮಿ
ಟೀಮ್ ಇಂಡಿಯಾದ ಸ್ಟಾರ್ ವೇಗಿ ಮೊಹಮ್ಮದ್ ಶಮಿ ಅವರು ತಮ್ಮ ಫಿಟ್ನೆಸ್ ರಹಸ್ಯವನ್ನು ಬಹಿರಂಗಪಡಿಸಿದ್ದರು. ಜಿಮ್‌ನಲ್ಲಿ ನನಗಿಂತ ಹೆಚ್ಚಿನ ತೂಕವನ್ನು ಬೇರೆ ಯಾವ ಕ್ರಿಕೆಟಿಗನೂ ಎತ್ತುವುದಿಲ್ಲ ಎಂದು ಹೇಳಿದ್ದರು. ಆಜ್ ತಕ್ ಸಂದರ್ಶನದಲ್ಲಿ ಬೌಲಿಂಗ್ ಯಶಸ್ಸಿನ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ್ದ ಶಮಿ,” ನಾನು 750 ಕೆಜಿ ಲೆಗ್ ಪ್ರೆಸ್ ಮಾಡಬಲ್ಲೆ. ಜಿಮ್‌ನಲ್ಲಿ ನನಗಿಂತ ಹೆಚ್ಚಿನ ತೂಕವನ್ನು ಬೇರೆ ಯಾವುದೇ ಕ್ರಿಕೆಟಿಗರು ಎತ್ತುದಿಲ್ಲ. ಈ ವಿಚಾರವನ್ನು ನಾನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲು ಇಷ್ಟಪಡುವುದಿಲ್ಲ. ಆದ್ದರಿಂದ ಜನರಿಗೆ ಇದು ತಿಳಿಯುವುದಿಲ್ಲ” ಎಂದು ಹೇಳಿದ್ದರು.
ವಿರಾಟ್ ಕೊಹ್ಲಿಯಂತೆ ತಾನು ಕೂಟ ಫಿಟ್ ಆಗಿದ್ದೇನೆ. ಅವರಿಗೂ ಕೂಡ ಲೆಗ್ ಪ್ರೆಸ್ನಲ್ಲಿ ನನಗಿಂತ ಹೆಚ್ಚು ಭಾರ ಎತ್ತಲಾಗುದಿಲ್ಲ. ಸದ್ಯಕ್ಕೆ ಭಾರತ ತಂಡದಲ್ಲಿ ಕಾಲಿನ ಮೂಲಕ ಅತಿ ಹೆಚ್ಚು ಭಾರತದ ಲೆಗ್ ಪ್ರೆಸ್ ಮಾಡುವ ಆಟಗಾರ ನಾನಾಗಿದ್ದೇನೆ. ಹೀಗಾಗಿ ನನಗೆ ವೇಗವಾಗಿ ಓಡಿ ಬಂದು ಉತ್ತಮ ಲಯದಲ್ಲಿ ಬೌಲಿಂಗ್ ನಡೆಸಲು ಸಾಧ್ಯವಾಗುತ್ತದೆ ಎಂದು ಶಮಿ ತಮ್ಮ ಬೌಲಿಂಗ್ ಸಾಮರ್ಥ್ಯದ ಹಿಂದಿನ ಗುಟ್ಟನ್ನು ರಟ್ಟು ಮಾಡಿದ್ದರು.