ಮುಂಬಯಿ: ಲಕ್ನೋ ಸೂಪರ್ ಜೈಂಟ್ಸ್ (LSG) ನಾಯಕ ಕೆ.ಎಲ್ ರಾಹುಲ್(KL Rahul) ಗಲ್ಲಿ ಕ್ರಿಕೆಟ್ ಆಡಿದ ವಿಡಿಯೊವೊಂದು ವೈರಲ್ ಆಗಿದೆ(Viral Video). ಅಚ್ಚರಿ ಎಂದರೆ ಅವರು ಎಡಗೈ ಶೈಲಿಯಲ್ಲಿ ಬ್ಯಾಟಿಂಗ್ ನಡೆಸಿದ್ದು. ಇಂದು ನಡೆಯುವ ಐಪಿಎಲ್(IPL 2024) ಪಂದ್ಯದಲ್ಲಿ ಲಕ್ನೋ ತಂಡ ಮುಂಬೈ(Mumbai Indians) ವಿರುದ್ಧ ಆಡಲಿದೆ. ಈ ಪಂದ್ಯಕ್ಕೆ ಮುಂಬೈಗೆ ಬಂದ ವೇಳೆ ರಾಹುಲ್ ಇಲ್ಲಿನ ಗಲ್ಲಿಯೊಂದರಲ್ಲಿ ಕ್ರಿಕೆಟ್ ಆಡಿದ್ದಾರೆ.
ರಾಹುಲ್ ಬಲಗೈ ಬ್ಯಾಟರ್ ಆಗಿದ್ದರೂ ಕೂಡ ಎಡಗೈನಲ್ಲಿ ಬ್ಯಾಟಿಂಗ್ ನಡೆಸಿದ್ದು ಅಚ್ಚರಿ ತಂದಿದೆ. ಸ್ಟಾರ್ ಸ್ಪೋರ್ಟ್ಸ್ ನಡೆಸಿದ ಕಾರ್ಯಕ್ರಮ ಇದಾಗಿತ್ತು. ರಾಹುಲ್ ಅವರ ಈ ಬ್ಯಾಟಿಂಗ್ ಫೋಟೊ ಕಂಡ ನೆಟ್ಟಿಗರು ಕೆಲ ತಮಾಷೆಯ ಕಮೆಂಟ್ಗಳನ್ನು ಮಾಡಿದ್ದಾರೆ. ಟಿ20 ವಿಶ್ವಕಪ್ನಲ್ಲಿ ಅವಕಾಶ ಸಿಗದ ಕಾರಣ ಅವರು ಎಡಗೈನಲ್ಲಿ ಬ್ಯಾಟಿಂಗ್ ನಡೆಸಿ ತಂಡದಲ್ಲಿ ಸ್ಥಾನ ಪಡೆಯುವ ಪ್ರಯತ್ಮ ಪಡುತಿದ್ದಾರೆ ಎಂದು ನಗುವ ಎಮೊಜಿಯೊಂದಿಗೆ ಕಮೆಂಟ್ ಮಾಡಿದ್ದಾರೆ.
ಸನ್ರೈಸರ್ಸ್ ಹೈದರಾಬಾದ್(Sunrisers Hyderabad) ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್(Lucknow Super Giants) 10 ವಿಕೆಟ್ಗಳ ಹೀನಾಯ ಸೋಲು ಕಂಡ ಬೇಸರದಲ್ಲಿ ಸಿಟ್ಟಿಗೆದ್ದ ಫ್ರಾಂಚೈಸಿ ಮಾಲಿಕ ಸಂಜೀವ್ ಗೋಯೆಂಕಾ(Sanjiv Goenka) ಮೈದಾನದಲ್ಲೇ ನಾಯಕ ಕೆ.ಎಲ್ ರಾಹುಲ್(KL Rahul) ಜತೆ ಜಗಳವಾಡಿದ್ದರು. ಈ ಘಟನೆ ಬಳಿಕ ಅನೇಕ ಮಾಜಿ ಆಟಗಾರರು ಗೋಯೆಂಕಾ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಘಟನೆಗೆ ಸಂಬಂಧಿಸಿ ರಾಹುಲ್ ಲಕ್ನೋ ತಂಡ ತೊರೆಯಲಿದ್ದಾರೆ, ಆರ್ಸಿಬಿ ಸೇರಲಿದ್ದಾರೆ, ತಂಡದ ಆಟಗಾರರೊಂದಿಗೆ ಪ್ರಯಾಣಿಸದೆ ಪ್ರತ್ಯೇಕವಾಗಿ ಪ್ರಯಾಣಿಸಿದ್ದಾರೆ ಹೀಗೆ ಹಲವು ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿತ್ತು.
ಇದನ್ನೂ ಓದಿ Viral Video: ವಿಚ್ಛೇದನ ಕೇಸ್ ಹೆಚ್ಚಳಕ್ಕೆ ಇದುವೇ ಪ್ರಮುಖ ಕಾರಣ ಎಂದ ಪಾಕ್ ಕ್ರಿಕೆಟ್ ತಂಡದ ಮಾಜಿ ನಾಯಕ
ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ ಮಾತ್ರವಲ್ಲದೆ, ಬೌಲಿಂಗ್ನಲ್ಲಿಯೂ ಲಕ್ನೋ ಅತ್ಯಂತ ಕಳಪೆ ಪ್ರದರ್ಶನ ತೋರಿತ್ತು. ಕನಿಷ್ಠ 1 ವಿಕೆಟ್ ಕೂಡ ಕೀಳಲಾಗದ ಘೋರ ವೈಫಲ್ಯ ಕಂಡಿತ್ತು. ಈ ಹೀನಾಯ ಸೋಲಿನಿಂದ ಸಿಟ್ಟಿಗೆದ್ದ ಸಂಜೀವ್ ಗೋಯೆಂಕಾ ನಾಯಕ ರಾಹುಲ್ ಅವರೊಂದಿಗೆ ಕೋಪದಲ್ಲಿ ಮಾತನಾಡುತ್ತಿರುವಂತೆ ಕಂಡುಬಂದಿತ್ತು. ಇವರಿಬ್ಬರ ನಡುವಣ ಮಾತುಕತೆ ಏನು ಎಂಬುದು ಸ್ಪಷ್ಟವಾಗಿ ಕೇಳಿಸಿಲ್ಲವಾಗಿದ್ದರೂ, ಈ ದೃಶ್ಯ ನೋಡುವಾಗ ಇದು ಅಸಮಾಧಾನದ ನುಡಿ ಎಂದು ತಿಳಿದು ಬಂದಿತ್ತು. ಗೋಯೆಂಕಾ ಮಾತಿಗೆ ರಾಹುಲ್ ಪ್ರತಿಕ್ರಿಯೆ ನೀಡಲು ಮುಂದಾದರೂ ಕೂಡ ಇದನ್ನು ಗೋಯೆಂಕಾ ಒಪ್ಪಿಕೊಳ್ಳದೆ ಏನೋ ಬೈಯುತ್ತಿರುವಂತೆ ದೃಶ್ಯದಲ್ಲಿ ಕಂಡುಬಂದಿತ್ತು. ಗೋಯೆಂಕಾ ವರ್ತನೆಗೆ ಆಕ್ರೋಶ ವ್ಯಕ್ತವಾದ ಕಾರಣ ಗೋಯೆಂಕಾ ಅವರು ರಾಹುಲ್ ಅವರನ್ನು ಮನೆಗೆ ಕರೆದು ಜತೆಯಾಗಿ ಡಿನ್ನರ್ ನಡೆಸಿದ್ದರು. ಇದರ ಫೋಟೊ ಕೂಡ ವೈರಲ್ ಆಗಿತ್ತು.
ಮುಂಬೈ ಎದುರಾಳಿ
ಇಂದು ನಡೆಯುವ ಪಂದ್ಯದಲ್ಲಿ ಲಕ್ನೋ ತಂಡ ಮುಂಬೈ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ಗೆದ್ದರೂ ಅಂತಿಮ ನಾಲ್ಕರ ಘಟಕ್ಕೆ ತೇರ್ಗಡೆಯಾಗುವ ಅವಕಾಶ ಲಕ್ನೋ ತಂಡಕ್ಕೆ ಬಹಳ ಕಡಿಮೆ. ಏಕೆಂದರೆ ಕಳೆದ ಮೂರು ಪಂದ್ಯಗಳಲ್ಲಿ ಸತತ ಸೋಲು ಕಂಡಿರುವ ಕಾರಣ ತಂಡದ ರನ್‌ರೇಟ್ ಕಳಪೆಯಾಗಿದೆ. ಒಂದೊಮ್ಮೆ ಕಳೆದ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಗೆದ್ದಿದ್ದರೆ ಲಕ್ನೋಗೆ ಈ ಪಂದ್ಯ ಪ್ಲೇ ಆಫ್ ಹಂತಕ್ಕೇರಲು ಮಹತ್ವದ ಪಂದ್ಯವಾಗಿರುತ್ತಿತ್ತು.