Site icon Vistara News

Viral Video: ರೋಹಿತ್​ ಅವರನ್ನು ಮಗುವಿನಂತೆ ತಬ್ಬಿಕೊಂಡು ಸಂಭ್ರಮಿಸಿದ ಕೊಹ್ಲಿ

rohit sharma and virat kohli celebration

ಕೊಲಂಬೊ: ಭಾರತ ತಂಡದ ನಾಯಕತ್ವದಿಂದ ಕೊಹ್ಲಿಯನ್ನು ಕೆಳಗಿಳಿಸಿ ರೋಹಿತ್​ ಶರ್ಮಗೆ(Rohit Sharma) ಈ ಪಟ್ಟ ನೀಡಿದ ಬಳಿಕ ವಿರಾಟ್​ ಕೊಹ್ಲಿ(Virat Kohli) ಮತ್ತು ರೋಹಿತ್ ನಡುವೆ ಏನೂ ಸರಿ ಇಲ್ಲ ಎಂಬ ಟಾಕ್ ಕ್ರಿಕೆಟ್ ವಲಯದಲ್ಲಿ ಕೇಳಿಬರುತ್ತಲೇ ಇದೆ. ಆದರೆ ರೋಹಿತ್​ ಆಗಲಿ ಕೊಹ್ಲಿಯಾಗಲಿ ಈ ವಿಚಾರದ ಬಗ್ಗೆ ತಲೆಕೆಡಿಸಿಕೊಳ್ಳದೆ ತಮ್ಮ ಪಾಡಿಗೆ ಜತೆಯಾಗಿ ಕ್ರಿಕೆಟ್​ ಆಡುತ್ತಲೇ ಇದ್ದರು. ಆದರೂ ನೆಟ್ಟಿಗರು ಮಾತ್ರ ಉಭಯ ಆಟಗಾರರ ಮಧ್ಯೆ ಎಲ್ಲವು ಸರಿಯಿಲ್ಲ ಎಂದು ಹೇಳುತ್ತಿದ್ದರು. ಏಷ್ಯಾಕಪ್​ನ(Asia Cup 2023) ಮಂಗಳವಾರದ ಪಂದ್ಯದಲ್ಲಿ ರೋಹಿತ್​ ಅವರು ಕ್ಯಾಚ್​ ಹಿಡಿದ ಬಳಿಕ ಕೊಹ್ಲಿ ಓಡಿ ಬಂದು ರೋಹಿತ್​ ಅವರನ್ನು ತಬ್ಬಿಕೊಂಡು ಸಂಭ್ರಮಿಸಿದ್ದಾರೆ. ಇದನ್ನು ಕಂಡ ನೆಟ್ಟಿಗರು ರೋಹಿತ್​ ಮತ್ತು ಕೊಹ್ಲಿ ನಡುವೆ ಯಾವುದೇ ಮುನಿಸು ಇಲ್ಲವೆಂದು ಹೇಳಿದ್ದಾರೆ.

ಓಡಿ ಬಂದು ತಬ್ಬಿಕೊಂಡ ಕೊಹ್ಲಿ

ಸ್ಲಿಪ್​ನಲ್ಲಿ ನಿಂತಿದ್ದ ರೋಹಿತ್​ ಅವರು ಲಂಕಾ ನಾಯಕ ದಾಸುನ್ ಶನಕ ಅವರ ಕ್ಯಾಚ್​ ಒಂದನ್ನು ಹಾರಿ ಒಂದೇ ಕೈಯಲ್ಲಿ ಹಿಡಿಯುವಲ್ಲಿ ಯಶಸ್ವಿಯಾದರು. ಕಾಮೆಂಟ್ರಿಯಲ್ಲಿಯೂ ರೋಹಿತ್​ ಅವರ ಈ ಕ್ಯಾಚ್​ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ ವಿರಾಟ್​ ಕೊಹ್ಲಿ ಫುಲ್​ ಜೋಶ್​ನಲ್ಲಿ ಓಡೋಡಿ ಬಂದು ರೋಹಿತ್​ ಅವರನ್ನು ತಬ್ಬಿಕೊಂಡು ಸಂಭ್ರಮಿಸಿದ್ದಾರೆ​​. ಈ ವಿಡಿಯೊ ವೈರಲ್​ ಆಗಿದ್ದು ಉಭಯ ಆಟಗಾರರ ಮಧ್ಯೆ ಎಲ್ಲವು ಸರಿಯಿದೆ ಎಂದು ನೆಟ್ಟಿಗರ ಊಹಾಪೋಹಗಳಿಗೆ ಮತ್ತೊಮ್ಮೆ ತೆರೆ ಬಿದ್ದಂತಾಗಿದೆ.

ಇದನ್ನೂ ಓದಿ Virat kohli : ಕೊಹ್ಲಿಗಲ್ಲ, ಕುಲ್ದೀಪ್​ಗೆ ಮ್ಯಾನ್​ ಆಫ್​​ ದಿ ಮ್ಯಾಚ್​ ಕೊಡಬೇಕಿತ್ತು ಎಂದ ಗಂಭೀರ್​!

ಕೊಹ್ಲಿಯನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ್ದ ರೋಹಿತ್​

ಕಳೆದ ವರ್ಷ ಆಸ್ಟ್ರೇಲಿಯಾದ ಮೆಲ್ಬೋರ್ನ್​ನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಆರಂಭಿಕ ಆಘಾತ ಅನುಭವಿಸಿದ ಭಾರತಕ್ಕೆ ಆಸರೆಯಾದದ್ದು ವಿರಾಟ್‌ ಕೊಹ್ಲಿ. 53 ಎಸೆತದಲ್ಲಿ ಅಜೇಯ 82 ರನ್‌ ಗಳಿಸಿ ಭಾರತಕ್ಕೆ ಗೆಲುವು ತಂದುಕೊಟ್ಟರು. ಕೊಹ್ಲಿಯ ಈ ಇನ್ನಿಂಗ್ಸ್ ಕಂಡ ನಾಯಕ ರೋಹಿತ್ ಶರ್ಮಾ ಕೂಡ ಸಂತಸದ ಅಲೆಯಲ್ಲಿ ತೇಲಿದ್ದರು. ಅಶ್ವಿನ್ ಗೆಲುವಿನ ರನ್ ಬಾರಿಸಿದ ಬಳಿಕ ಮೈದಾನಕ್ಕೆ ಓಡಿ ಬಂದ ರೋಹಿತ್, ಕಿಂಗ್ ಕೊಹ್ಲಿಯನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಸಂಭ್ರಮಾಚರಣೆ ಮಾಡಿದ್ದರು.

ಗದ್ಗದಿತರಾಗಿದ್ದ ಕೊಹ್ಲಿ

ಈ ವೇಳೆ ಅಕ್ಷರಶಃ ಗದ್ಗದಿತರಾದ ಕೊಹ್ಲಿ, ತನ್ನ ಕಣ್ಣಾಲಿಗಳಲ್ಲಿ ಆನಂದಬಾಷ್ಪ ತುಂಬಿಕೊಂಡು ಆಕಾಶದತ್ತ ಮುಖಮಾಡಿ ತಮ್ಮದೇ ಶೈಲಿಯಲ್ಲಿ ಸಂಭ್ರಮಾಚರಣೆ ಮಾಡಿದ್ದರು. ಅದೇ ಸಮಯಕ್ಕೆ ಮೈದಾನಕ್ಕೆ ಬಂದ ರೋಹಿತ್ ಮಗುವಿನಂತೆ ಕೊಹ್ಲಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಮೈದಾನದಲ್ಲೇ ಕುಣಿಯಲಾರಂಭಿಸಿದರು. ಜತೆಗೆ ಕೊಹ್ಲಿಯನ್ನು ತಬ್ಬಿಕೊಂಡು ಪಂದ್ಯ ಗೆಲ್ಲಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದರು. ಈ ದೃಶ್ಯ ಎಲ್ಲಡೆ ಮೆಚ್ಚುಗೆಗೆ ಪಾತ್ರವಾಗಿತ್ತು. ಜತೆಗೆ ವಿರಾಟ್‌ ಮತ್ತು ರೋಹಿತ್‌ ನಡುವೆ ಉತ್ತಮ ಬಾಂಧವ್ಯ ಹೊಂದಿದ್ದಾರೆ ಎನ್ನುವ ಸಂದೇಶವು ಈ ಘಟನೆ ಮೂಲಕ ರವಾನೆಯಾಗಿತ್ತು.

ನೆಟ್ಟಿಗರ ಅನುಮಾನಕ್ಕೆ ತೆರೆ

ಲಂಕಾ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಮತ್ತು ರೋಹಿತ್​ ಅವರ ಸಂಭ್ರಮಾಚರಣೆ ಕಂಡ ನೆಟ್ಟಿಗರು. ಟ್ವಿಟರ್​ನಲ್ಲಿ ಈ ದೃಶ್ಯವನ್ನು ಹಂಚಿಕೊಂಡು ನಾವು ಉಭಯ ಆಟಗಾರರ ಬಾಂಧವ್ಯದ ಬಗ್ಗೆ ತಪ್ಪಾಗಿ ತಿಳಿದುಕೊಂಡಿದ್ದೆವು. ನಮ್ಮ ತಪ್ಪು ಅರಿವಿಗೆ ಬಂದಿದೆ. ರೋಹಿತ್​ ಮತ್ತು ಕೊಹ್ಲಿ ನಡುವೆ ಉತ್ತಮ ಬಾಂಧವ್ಯವಿದೆ. ಉಭಯ ಆಟಗಾರರು ಸೇರಿ ಭಾರತ ತಂಡ ವಿಶ್ವಕಪ್​ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಲಿದ್ದಾರೆ ಎಂದು ಹೇಳಲಾರಂಭಿಸಿದ್ದಾರೆ.

Exit mobile version