Site icon Vistara News

Viral Video: ಮಗಳು ಮಲಗಿದ್ದಾಳೆ, ಎಚ್ಚರಿಸಬೇಡಿ; ಅಭಿಮಾನಿಗಳಿಗೆ ಖಡಕ್​ ಎಚ್ಚರಿಕೆ ನೀಡಿದ ರೋಹಿತ್​

viral video

ಮುಂಬಯಿ: ಹ್ಯಾಟ್ರಿಕ್​ ಸೋಲು ಕಂಡಿರುವ ಮುಂಬೈ ಇಂಡಿಯನ್ಸ್​(Mumbai Indians) ತಂಡ ನಾಳೆ ನಡೆಯುವ ಐಪಿಎಲ್​ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಕಣಕ್ಕಿಳಿಯಲಿದೆ. ಈ ಪಂದ್ಯವನ್ನಾಡಲು ಆಟಗಾರರು ಇದಾಗಲೇ ಮುಂಬಯಿ ತಲುಪಿದ್ದಾರೆ. ಪ್ರಯಾಣದ ವೇಳೆ ರೋಹಿತ್​ ಶರ್ಮ(Rohit Sharma) ಅವರು ತಮ್ಮ ಮಗಳು ಸಮೈರಾಳನ್ನು ತನ್ನ ತೋಳುಗಳಲ್ಲಿ ಹೊತ್ತುಕೊಂಡು ಹೋಗುತ್ತಿರುವ ವಿಡಿಯೊವೊಂದು ವೈರಲ್(Viral Video)​ ಆಗಿದೆ.

ವಿಮಾನ ನಿಲ್ದಾಣದಿಂದ ರೋಹಿತ್​ ಕುಟುಂಬದೊಂದಿಗೆ ಹೊರಬರುತ್ತಿರುವಾಗ ರೋಹಿತ್​ ಅವರ ಅಭಿಮಾನಿಗಳು ಜೋರಾಗಿ ರೋಹಿತ್​ ಹೆಸರು ಕೂಗಿದ್ದಾರೆ. ಈ ವೇಳೆ ರೋಹಿತ್​ ತನ್ನ ತುಟಿಗಳ ಮೇಲೆ ಬೆರಳನ್ನು ಇರಿಸುವ ಮೂಲಕ ಪ್ರೇಕ್ಷಕರನ್ನು ಮೌನವಾಗಿರುವಂತೆ ಕೇಳಿಕೊಂಡಿದ್ದಾರೆ. ಇದಕ್ಕೆ ಕಾರಣ ಅವರ ಮಗಳು ಸಮೈರಾ ನಿದ್ದೆ ಮಾಡುತ್ತಿದ್ದದ್ದು. ಅಪ್ಪನ ತೋಳುಗಳಲ್ಲಿ ಸಮೈರಾ ಹಾಯಾಗಿ ನಿದ್ದೆಗೆ ಜಾರಿದ್ದರು. ಹೀಗಾಗಿ ಮಗಳ ನಿದ್ದೆಗೆ ಯಾವುದೇ ಭಂಗವಾಗಬಾರದೆಂದು ರೋಹಿತ್​ ಅವರು ಅಭಿಮಾನಿಗಳಲ್ಲಿ ಬೊಬ್ಬೆ ಹಾಕದೆ ಸುಮ್ಮನಿರುವಂತೆ ಹೇಳಿದ್ದಾರೆ. ಈ ವಿಡಿಯೊ ವೈರಲ್​ ಆಗಿದ್ದು ನೆಟ್ಟಿಗರು ರೋಹಿತ್​ ಪಕ್ಕಾ ಫ್ಯಾಮಿಲಿ ಮ್ಯಾನ್ ಎಂದು ಹೇಳಿದ್ದಾರೆ.

ಇದನ್ನೂ ಓದಿ IPL 2024: ಗಾಯಾಳು ಕುಲ್​ದೀಪ್​ ಯಾದವ್​ಗೆ ವಿಶ್ರಾಂತಿ; ಡೆಲ್ಲಿ ತಂಡಕ್ಕೆ ಹಿನ್ನಡೆ

ಮುಂಬೈ ತೊರೆಯಲಿದ್ದಾರೆ ರೋಹಿತ್​?


ಮುಂದಿನ ಆವೃತ್ತಿ ವೇಳೆ ರೋಹಿತ್​ ಶರ್ಮ(Rohit Sharma) ಅವರು ಮುಂಬೈ ಇಂಡಿಯನ್ಸ್(Mumbai Indians) ತಂಡವನ್ನು ತೊರೆಯಲು ಬಯಸಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಹಾರ್ದಿಕ್ ಪಾಂಡ್ಯ(Hardik Pandya) ಅವರ ನಾಯಕತ್ವದಿಂದ ರೋಹಿತ್​ಗೆ ಸ್ವಲ್ಪವೂ ಸಂತೋಷವಾಗಿಲ್ಲ ಮತ್ತು ಡ್ರೆಸ್ಸಿಂಗ್ ರೂಮ್‌ ನಲ್ಲಿಯೂ ಭಿನ್ನಾಭಿಪ್ರಾಯವಿದೆ ಹೀಗಾಗಿ ರೋಹಿತ್​ ಮುಂಬೈ ತಂಡವನ್ನು ತೊರೆಯಲಿದ್ದಾರೆ ಎಂದು ಹೇಳಲಾಗಿದೆ.

ರೋಹಿತ್​ ಮತ್ತು ಪಾಂಡ್ಯ ಹಲವಾರು ನಿರ್ಧಾರಗಳಿಗೆ ಸಂಬಂಧಿಸಿದಂತೆ ಸಾಕಷ್ಟು ವಾದಗಳು ನಡೆಯುತ್ತಿವೆ, ಇದು ಡ್ರೆಸ್ಸಿಂಗ್ ರೂಮ್‌ನಲ್ಲಿಯೂ ಕಳಪೆ ವಾತಾವರಣವನ್ನು ಉಂಟುಮಾಡುತ್ತಿದೆ ಎಂದು ಮುಂಬೈ ಆಟಗಾರನೊಬ್ಬ ಹೇಳಿಕೆ ನೀಡಿದ್ದಾಗಿ ನ್ಯೂಸ್-24 ವರದಿ ಮಾಡಿತ್ತು. ಮುಂದಿನ ಸೀಸನ್ ನಲ್ಲಿ ಮೆಗಾ ಹರಾಜು ಪ್ರಕ್ರಿಯೆ ಕೂಡ ನಡೆಯಲಿದೆ ಹೀಗಾಗಿ ಈ ವರದಿಯನ್ನು ಬಹುತೇಕರು ನಂಬಿದ್ದಾರೆ.

2011ರ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡ ಸೇರಿದ ರೋಹಿತ್ ಶರ್ಮಾ ಅವರು ತಂಡದ ನಾಯಕತ್ವ ವಹಿಸಿದ್ದರು. 2013, 2015, 2017, 2019 ಮತ್ತು 2020ರಲ್ಲಿ ಅವರ ನಾಯಕತ್ವದಲ್ಲಿ ಮುಂಬೈ ಕಪ್ ಗೆದ್ದುಕೊಂಡಿತ್ತು. ಸದ್ಯ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಆಡಿದ ಸತತ ಮೂರು ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿದೆ. ಈ ಸೋಲಿಗೆ ಪಾಂಡ್ಯ ಅವರ ಕಳಪೆ ನಾಯಕತ್ವವೇ ಕಾರಣ ಎಂದು ಮುಂಬೈ ಮತ್ತು ರೋಹಿತ್​ ಅಭಿಮಾನಿಗಳು ಆರೋಪ ಮಾಡಿದ್ದಾರೆ.

ಇತ್ತೀಚೆಗೆ ತಂಡದ ನಾಯಕತ್ವವನ್ನು ಮತ್ತೊಮ್ಮೆ ರೋಹಿತ್ ಶರ್ಮಾಗೆ(Rohit Sharma) ನೀಡುವ ಕುರಿತು ಮಾತುಕತೆ ನಡೆಯುತ್ತಿದೆ, ರೋಹಿತ್ ಅವರನ್ನು ಮನವೊಲಿಸಲು ಮ್ಯಾನೇಜ್‌ಮೆಂಟ್‌ ಸಭೆ ನಡೆಸಿದೆ ಎನ್ನಲಾಗಿರುವ ಫೋಟೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು.

Exit mobile version