ಮುಂಬಯಿ: ಮೂರು ಮಾದರಿಯ ಕ್ರಿಕೆಟ್ನಲ್ಲಿ ಅವಕಾಶ ವಂಚಿತವಾಗಿರುವ ಶಿಖರ್ ಧವನ್(Shikhar Dhawan) ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೊ ಕಂಡ ಅನೇಕರು ಧವನ್ ಅವರ ಸ್ಥಿತಿ ಕಂಡು ಒಂದು ಕ್ಷಣ ಆತಂಕಕ್ಕೆ ಈಡಾಗಿದ್ದಾರೆ. ತಂದೆ ಮಹೇಂದ್ರ ಪಾಲ್ ಧವನ್(Mahendra Pal Dhawan) ಅವರು ಶಿಖರ್ ಅವರ ಕಾಲರ್ ಪಟ್ಟಿ ಹಿಡಿದು ವಾರ್ನಿಂಗ್ ನೀಡಿದ್ದಾರೆ. ಈ ವಿಡಿಯೊವನ್ನು ಸ್ವತಃ ಧವನ್ ಅವರರೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದು ಎಲ್ಲಡೆ ವೈರಲ್(Viral Video) ಆಗಿದೆ.
ತಮಾಷೆಯ ವಿಡಿಯೊ
ಅಸಲಿಗೆ ಇದು ತಂದೆ ಮಗನ ನಡುವೆ ನಡೆದ ಯಾವುದೇ ಗಲಾಟೆಯಲ್ಲ. ಇದು ಹಾಸ್ಯಕ್ಕಾಗಿ ಮಾಡಿದ ರೀಲ್ಸ್. ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯವಾಗಿರುವ ಧವನ್ ಮತ್ತು ಅವರ ತಂದೆ(shikhar dhawan father viral video) ಒಂದಲ್ಲ ಒಂದು ಸೀರಿಯಸ್ ಆಗಿರುವಂತಹ ತಮಾಷೆಯ ವಿಡಿಯೊಗಳನ್ನು ಹಂಚಿಕೊಳ್ಳುತ್ತ ಅಭಿಮಾನಿಗಳಿಗೆ ಚಮಕ್ ನೀಡುತ್ತಿರುತ್ತಾರೆ. ಈ ಬಾರಿಯೂ ಇಂತಹದ್ದೇ ವಿಡಿಯೊವನ್ನು ಮಾಡಿ ಹರಿಬಿಟ್ಟಿದ್ದಾರೆ.
ಗದ್ದಲ ಎಂದರೆ ಇಷ್ಟವಿಲ್ಲ
ಈ ವಿಡಿಯೋದಲ್ಲಿ ಧವನ್ ಅವರ ತಂದೆ ಗದ್ದಲ ಎಂದರೆ ನನಗೆ ಇಷ್ಟವಿಲ್ಲ. ಜೋರು ದ್ವನಿಯಲ್ಲಿ ಮಾತನಾಡಬೇಡ. ಇದು ನನಗೆ ಇಷ್ಟವಿಲ್ಲ ಎಂದು ಕಾಲರ್ ಪಟ್ಟಿ ಹಿಡಿದಿದ್ದಾರೆ. ಇದಕ್ಕೆ ಶಿಖರ್ ಧವನ್ ಅವರು ಕೈ ಮುಗಿದು ಸರಿ ಸರ್ ನಾನು ಈ ರೀತಿ ಮಾಡುವುದಿಲ್ಲ ಎಂದಿದ್ದಾರೆ.
ಇದನ್ನೂ ಓದಿ Shikhar Dhawan: ಆಯ್ಕೆ ಸಮಿತಿ ಬಗ್ಗೆ ಮೌನ ಮುರಿದ ಶಿಖರ್ ಧವನ್
ಧವನ್ಗೆ ಅವಾಜ್ ಹಾಕಿದ ವಿಡಿಯೊ
ಕೆನ್ನೆಗೆ ಬಾರಿಸಿ ಕಾಲಿನಿಂದ ತುಳಿದಿದ್ದ ತಂದೆ
ಹಿಂದೊಮ್ಮೆ ಧವನ್ ತಂದೆ ಅವರು ಧವನ್ಗೆ ಕೆನ್ನಗೆ ಬಾರಿಸಿ ಕಾಲಿನಿಂದ ತುಳಿದಿದ್ದ ವಿಡಿಯೊ ವೈರಲ್ ಆಗಿತ್ತು. ಇದು ಕೂಡ ತಮಾಷೆಯ ವಿಡಿಯೊವಾಗಿತ್ತು. ಈ ಋತುವಿನಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಿದ್ದ ಧವನ್ ಸಾಕಷ್ಟು ರನ್ ಗಳಿಸಿದರೂ ತಂಡವನ್ನು ಪ್ಲೇಆಫ್‌ಗೆ ಕೊಂಡೊಯ್ಯಲು ಸಾಧ್ಯವಾಗಿರಲಿಲ್ಲ. ಇದರಿಂದ ನಿರಾಸೆಗೊಂಡ ಧವನ್ ತಂದೆ, ಮನೆಗೆ ಬಂದ ಕೂಡಲೇ ಮನಬಂದಂತೆ ಥಳಿಸಿದ್ದರು. ಇದಕ್ಕೆ ಧವನ್ ಅವರು ನಾಕೌಟ್‌ಗೆ ಅರ್ಹತೆ ಪಡೆಯದಿದ್ದಕ್ಕೆ ತಂದೆ ನನ್ನನ್ನು ಥಳಿಸಿದ್ದಾರೆ ಎಂಬ ಶೀರ್ಷಿಕೆ ನೀಡಿ ವಿಡಿಯೊ ಶೇರ್ ಮಾಡಿದ್ದರು.
ಭಾರತ ತಂಡದಿಂದ ದೂರ
ಉತ್ತಮ ಫಾರ್ಮ್ನಲ್ಲಿದ್ದರೂ ಶಿಖರ್ ಧವನ್ ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡುತ್ತಿಲ್ಲ. ಏಷ್ಯನ್ ಗೇಮ್ಸ್ ತಂಡಕ್ಕೆ ನಾಯಕನಾಗುತ್ತಾರೆ ಎಂದು ಹೇಳಲಾಗಿತ್ತಾದರೂ ಅಂತಿಮ ಕ್ಷಣದಲ್ಲಿ ಈ ಟೂರ್ನಿಯಿಂದಲೂ ಅವರನ್ನು ಕೈಬಿಡಲಾಗಿದೆ. ಈ ಬಾರಿಯ ಐಪಿಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕನಾಗಿ ಪ್ರತಿ ಪಂದ್ಯದಲ್ಲಿಯೂ ಧವನ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ಆದರೂ ಅವರನ್ನು ಕಡೆಗಣಿಸಲಾಗುತ್ತಿದೆ.